ಪದೇಪದೆ ಮುಂದೂಡಿಕೆ ಯಾಗುತ್ತಿದ್ದ ನಾಸಾದ ಆರ್ತಿಮಿಸ್ ಐ ಮಿಷನ್‌ನ ಅತ್ಯಂತ ಶಕ್ತಿಯುತ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ. ಇದನ್ನು ನಾಸಾದ ಮಾನವ ಸಹಿತ ಚಂದ್ರಯಾನ 2 ಎಂದೇ ಬಣ್ಣಿಸಲಾಗುತ್ತಿದೆ.
ಏನಿದು ಆರ್ತಿಮಿಸ್
ಐ ಮಿಷನ್?
2025ಕ್ಕೆ ಚಂದ್ರನ ನೆಲಕ್ಕೆ ಮಾನವ ರನ್ನು ಕಳುಹಿಸುವ ಯೋಜನೆ ಹೊಂದಿ ರುವ ನಾಸಾ, ಇದಕ್ಕೆ ಪರೀಕ್ಷಾರ್ಥ ಪ್ರಯೋಗ ನಡೆಸು ತ್ತಿದೆ. ಈ ಆರ್ತಿಮಿಸ್ ಐ 1.3 ದಶಲಕ್ಷ ಮೈಲುಗಳ ಪ್ರಯಾಣ ಮಾಡಿ ಚಂದ್ರನ ಸುತ್ತ ಸುತ್ತಿ ವಾಪಸ್ ಭೂಮಿಗೇ ಬರಲಿದೆ. ಇದರಲ್ಲಿನ ಒರಿಯನ್ ಕ್ಯಾಪುಲ್ ಚಂದ್ರನ ಮೇಲ್ಮೈನಿಂದ 60 ಮೈಲು ಮೇಲಿನ ವರೆಗೆ ಹೋಗಲಿದೆ. ಬಹು ಹಿಂದೆಯೇ ಇದನ್ನು ಉಡಾವಣೆ ಮಾಡಬೇಕಿತ್ತಾದರೂ ವಿವಿಧ ಅಡೆತಡೆಗಳಿಂದ ಆಗಿರ ಲಿಲ್ಲ. ಹೀಗಾಗಿ ನಿರೀಕ್ಷೆಗಿಂತ ಹೆಚ್ಚು ವೆಚ್ಚ ವಾಗಿದ್ದು, ಟೀಕೆಗೂ ಒಳಗಾಗಿದೆ.
ಮೂನೆಕ್ವಿನ್ಸ್
ಸದ್ಯ ಈ ರಾಕೆಟ್‌ನಲ್ಲಿ ಮಾನವರನ್ನು ಕಳುಹಿಸುತ್ತಿಲ್ಲ. ಇದಕ್ಕೆ ಬದಲಾಗಿ ನಾಸಾವೇ ಸಿದ್ಧಪಡಿಸಿರುವ ಮೂರು ಮೂನೆಕ್ವಿನ್ಸ್‌ರನ್ನು ಕಳಿಸಿದೆ. ಇವುಗಳಲ್ಲಿ ಸೆನ್ಸಾರ್ ಇದ್ದು, ವಿಕಿರಣ ಸಹಿತ ವಿವಿಧ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಪ್ರಮುಖ ಉದ್ದೇಶವೇನು?
1972ರಲ್ಲಿ ನಾಸಾದ ಅಪೋಲೋ ಮಿಷನ್ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲಾಗಿತ್ತು. ಇದಾದ ಮೇಲೆ ಅಂಥ ಪ್ರಯೋಗ ಸಾಧ್ಯವಾಗಿರಲಿಲ್ಲ. ಮತ್ತೆ 2025ಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಪ್ರಯತ್ನಿಸುತ್ತಿದೆ.
Related Articles
ವೆಚ್ಚ ಎಷ್ಟು?
ಸದ್ಯ ಆಗಿರುವ ವೆಚ್ಚ 4.1 ಬಿಲಿಯನ್ ಡಾಲರ್
2025ರ ಅಂತ್ಯದ ವೇಳೆಗೆ 93 ಬಿಲಿಯನ್ ಡಾಲರ್
ರಾಕೆಟ್ ಹೆಸರೇನು?
ಸ್ಪೇಸ್ ಲಾಂಚ್ ಸಿಸ್ಟಮ್(ಎಸ್‌ಎಲ್‌ಎಸ್)
-ಉಡಾವಣೆ ಸಮಯ 1.47ರಾತ್ರಿ, ಬುಧವಾರ
-ಹೋಗಲಿರುವ ದೂರ 2.1 ದಶಲಕ್ಷ ಕಿ.ಮೀ.
-ಮಿಷನ್ ಅವಧಿ 25 ದಿನ
-ಭೂಮಿಗೆ ವಾಪಸ್ ಡಿಸೆಂಬರ್ 11
-ರಾಕೆಟ್ ಎತ್ತರ 98 ಮೀಟರ್