Advertisement
ಇ-ಬೈಕ್‌ಗಳಲ್ಲಿ ಸಾಮಾನ್ಯ ಬೈಸಿಕಲ್‌ಗಳಂತೆ, ಪೆಡಲ್ ಮತ್ತು ಹ್ಯಾಂಡಲ್ ಇರುತ್ತದೆ. ಇ-ಬೈಕ್ ಸಹ ಅದೇ ಭಾಗಗಳನ್ನು ಬಳಸುತ್ತದೆ. ಸಾಮಾನ್ಯ ಸೈಕಲ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ, ವಿದ್ಯುತ್ ಭಾಗಗಳು ಮಾನವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಸಾಮಾನ್ಯವಾಗಿ, ಇದು ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿ ಹಾಗೂ ಅಡೆತಡೆಗಳು ಇರುವ ಪ್ರದೇಶಗಳಲ್ಲಿ ಆಯಾಸಗೊಳ್ಳದೆ ಸೈಕಲ್ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ.
Related Articles
Advertisement
ನೀವು ವೇಗವಾಗಿ ಪೆಡಲ್ ಮಾಡಿ ಸಂಚಾರ ನಡೆಸುತ್ತೀರಿ. ಆದರೆ ಬಹುಕಾಲ ಆ ವೇಗವನ್ನು ಕಾಪಾಡಲು ನಿಮ್ಮಿಂದ ಕಷ್ಟ ಆಗಬಹುದು. ಆ ಸಮಯದಲ್ಲಿ ನಿಮ್ಮ ನೆರವಿಗೆ ಆ ಮೋಟರ್ ಬರುತ್ತದೆ. ಇದರಿಂದಾಗಿ ನೀವು ಸತತವಾಗಿ ಪೆಡಲಿಂಗ್ ನಡೆಸಿ, ಯಾವ ಕಾರಣಕ್ಕೂ ನಿಲ್ಲಿಸುವ ಅಗತ್ಯವಿರಲ್ಲ. ಇಲೆಕ್ಟ್ರಿಕ್ ಬೈಸಿಕಲ್ ಇದ್ದರೆ, ಕಾಲಿಗೆ ರೆಸ್ಟ್ ನೀಡಿಯೂ, ಸಂಚಾರ ಮುಂದುವರೆಸಬಹುದು.
ಇ-ಬೈಸಿಕಲ್‌ಗಳು ಕೇವಲ ಸಂಚಾರಕ್ಕೆ ಸೀಮಿತವಲ್ಲ. ಬದಲಿಗೆ ಇ-ಕಾರ್ಗೋ ಬೈಕ್‌ಗಳಾಗಿಯೂ ಬಳಸಬಹುದು. ಅದರಲ್ಲಿ ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅನಾಯಾಸವಾಗಿ ಕೊಂಡೊಯ್ಯಬಹುದು. ಅಮೇರಿಕಾದಲ್ಲಿ ನಡೆದ ಒಂದು ಸಮೀಕ್ಷೆಯಲ್ಲಿ, ಸರಕು ಸಾಗಿಸಲು, ಮಕ್ಕಳನ್ನು ಕರೆದುಕೊಂಡು ಹೋಗಲು, ಪಾರ್ಕಿಂಗ್ ಹಾಗೂ ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಪರಿಸರ ಕಾಳಜಿಯಿಂದ ಇ-ಬೈಸಿಕಲ್‌ಗಳನ್ನು ಜನರು ಬಳಸುತ್ತಿದ್ದಾರೆ ಎಂದು ತಿಳಿದ ಬಂದಿದೆ. ಮತ್ತೊಂದು ಪ್ರಯೋಜನ ಎಂದರೆ, ನೀವು ಸೈಕಲ್‌ನಲ್ಲಿ ದೂರ ಸಂಚಾರ ನಡೆಸಿದರೆ, ಸುಸ್ತಾಗುವುದು ಸಹಜ. ಹಾಗಾಗಿ, ಮನೆ ಅಥವಾ ನಿರ್ದಿಷ್ಟ ಸ್ಥಳವನ್ನು ತಲುಪಿದ ಬಳಿಕ ರಿಫ್ರೆಶ್ ಆಗಲು ಸ್ನಾನ, ಬಟ್ಟೆ ಬದಲಿಸುತ್ತೀರಿ. ಆದರೆ, ಇ-ಬೈಸಿಕಲ್ ಬಿಟ್ಟಾಗ ನಿಮಗೆ ಸುಸ್ತಾಗುವುದಿಲ್ಲ.
ಪುಣೆ ಮೂಲದ ಎಲೆಕ್ಟಿçಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿ ಫೆಲಿಡೆ ಇಲೆಕ್ಟ್ರಿಕ್, ಒಂದು ಹೊಸ ಮಾದರಿಯ ಇ-ಬೈಕ್‌ಗಳನ್ನು ಪರಿಚಯಿಸಿದೆ. ನಮ್ಮಲ್ಲಿ ಇರುವ ಸಾಮಾನ್ಯ ಬೈಸಿಕಲ್‌ಅನ್ನೇ ಇ-ಬೈಸಿಕಲ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಈ ಇ-ಬೈಕ್ ಕಿಟ್ ೨೦,೦೦೦ ರೂಪಾಯಿಗೆ ಲಭ್ಯವಿದ್ದು, ಕೇವಲ ೨೦ ನಿಮಿಷಗಳಲ್ಲಿ ಯಾರ ಸಹಾಯವೂ ಇಲ್ಲದೆ ಸೈಕಲ್‌ಅನ್ನು ಇ-ಬೈಸಿಕಲ್ ಆಗಿ ಪರಿವರ್ತಿಸಬಹುದು.
“ಯಾರೂ ಸಹ ನಮ್ಮ ಇ-ಕನ್ವರ್ಷನ್ ಕಿಟ್ ಬಳಸಿ, ಕೇವಲ ೨೦ ನಿಮಿಷಗಳಲ್ಲಿ ಸೈಕಲ್ ಅನ್ನು ಇ-ಬೈಸಿಕಲ್ ಗಳಾಗಿ ಪರಿವರ್ತಿಸಬಹುದು. ಯಾರ ಸಹಾಯವೂ ಬೇಕಾಗಿಲ್ಲ. ಕಿಟ್‌ನಲ್ಲಿ ಸಂಪೂರ್ಣ ಎಲೆಕ್ಟ್ರಿಕಲ್ ಡ್ರೈವ್ ಸಿಸ್ಟಮ್‌ಗೆ ಸಂಪರ್ಕ ಹೊಂದಿದೆ. ಉದಾಹರಣೆಗೆ, ಹಿಂದಿನ ಚಕ್ರ (ಬ್ಯಾಕ್ ವ್ಹೀಲ್) ಮತ್ತು ರಿಮ್ಸ್ನೊಂದಿಗೆ ಮೋಟಾರು ಬರುತ್ತದೆ. ಬಳಕೆದಾರರು ಏನು ಮಾಡಬೇಕೆಂದರೆ, ಸೈಕಲ್‌ನಲ್ಲಿರುವ ಹಿಂದಿನ ಚಕ್ರವನ್ನು, ನಮ್ಮ ವ್ಹೀಲ್ ಜೊತೆ ಬದಲಿಸಬೇಕು. ನಮ್ಮ ಕಿಟ್ ಜೊತೆಗೆ, ನಾವು ಗ್ರಾಹಕರಿಗೆ ಒಂದು ಕೈಪಿಡಿಯನ್ನು ಸಹ ನೀಡುತ್ತೇವೆ. ಅದರಲ್ಲಿ ಯಾವ ತಂತಿ(ವೈರ್) ಸಂಪರ್ಕ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂಬುದನ್ನು ವಿವರಿಸುತ್ತದೆ. ಕಷ್ಟ ಎನಿಸುವುದಾದರೆ, ನೀವು ನಮ್ಮ ಬೆಂಬಲ ತಂಡವನ್ನೂ ಕರೆಯಬಹುದು. ಇದನ್ನೆಲ್ಲ ಸರಳ ರೀತಿಯಲ್ಲಿ ವಿವರಿಸುವ ವೀಡಿಯೊವನ್ನು ನಾವು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ” ಎಂದು ಫೆಲಿಡೆ ಎಲೆಕ್ಟ್ರಿಕ್ ನ ಹಿರಿಯ ಎಕ್ಸಿಕ್ಯೂಟಿವ್ ರಿಯಾನ್ ಮ್ಯಾಥ್ಯೂ ಹೇಳುತ್ತಾರೆ.
ತೈಲ್ ಬೆಲೆಯ ಸಮಸ್ಯೆ, ಪರಿಸರ ಕಾಳಜಿ ಇತ್ಯಾದಿ ಕಾರಣಗಳಿಂದ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಕಾರ್‌ಗಳನ್ನು ಬಳಸುವವರು, ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಪರ್ಯಾಯವಾಗಿ ಇದನ್ನು ಬಳಸಿದರೂ ಅಚ್ಚರಿಯಿಲ್ಲ. ಮುಂದಿನ ದಿನಗಳಲ್ಲಿ, ಇ-ಬೈಸಿಕಲ್ ಗಳೇ ರಸ್ತೆಯಲ್ಲಿ ಪ್ರಾಬಲ್ಯ ಸಾಧಿಸಬಹುದು.
– ಇಂದುಧರ ಹಳೆಯಂಗಡಿ
ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ : ಮೈತ್ರಿ ಬಗ್ಗೆ ಪಕ್ಷ ಮುಕ್ತವಾಗಿದೆ : ಪ್ರಿಯಾಂಕ ಗಾಂಧಿ