Advertisement

ರಫೇಲ್‌ ಕಥೆ ಏನಾಯಿತು ರಾಹುಲ್‌?

12:28 AM Oct 21, 2019 | Sriram |

ನಾನು ಇದೇ ವರ್ಷದ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದೇನೆ. ಚುನಾವಣಾ ಸಮಯದಲ್ಲಂತೂ ಕಾಂಗ್ರೆಸ್‌ ನಾಯಕರು ತಮ್ಮೆಲ್ಲ ಭರವಸೆಯನ್ನು “ರಫೇಲ್‌’ ವಿಚಾರಕ್ಕೆ ಕೇಂದ್ರೀಕರಿಸಿಬಿಟ್ಟಿದ್ದರು. ಅಲ್ಲದೇ, ರಫೇಲ್‌ ವಿಷಯವನ್ನು ಹಿಡಿದುಕೊಂಡು ರಾಹುಲ್‌ ಗಾಂಧಿಯವರು ಪ್ರತಿಯೊಂದು ಚುನಾವಣಾ ರ್ಯಾಲಿಗಳಲ್ಲೂ, ಸಭೆಗಳಲ್ಲೂ ಜೋರು ಜೋರಾಗಿ “ಚೌಕೀದಾರ್‌ ಚೋರ್‌ ಹೇ’ ಎಂದು ಆರೋಪಿಸಿದ್ದೆಲ್ಲ ನೆನಪಾಯಿತು. ನರೇಂದ್ರ ಮೋದಿಯವರು ಅನಿಲ್‌ ಅಂಬಾನಿ ಜೇಬಿಗೆ 30 ಸಾವಿರ ಕೋಟಿ ರೂಪಾಯಿ ಸೇರಿಸಿದ್ದಾರೆ ಎಂಬ ರಾಹುಲ್‌ರ ಆರೋಪ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದೆ. ಹಾಗಿದ್ದರೆ, ಆ ಆರೋಪಗಳ ಕಥೆ ಈಗೇನಾಯಿತು ರಾಹುಲ್‌?

Advertisement

ಭಾರತೀಯ ವಾಯುಸೇನೆಗೆ ರಫೇಲ್‌ ಯುದ್ಧ ವಿಮಾನವು ಸೇರ್ಪಡೆಯಾಯಿತು. ವಿಶೇಷವೆಂದರೆ, ರಫೇಲ್‌ ವಿಮಾನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಶಸ್ತ್ರಪೂಜೆ ಮಾಡಿದ್ದು. ಈ ವಿಚಾರ ಪರ-ವಿರೋಧದ ಚರ್ಚೆಗೆ ಕಾರಣವಾಯಿತು ಎನ್ನುವುದು ಬೇರೇ ವಿಚಾರ. ಆದರೆ, ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಒಂದು ಸಮಯದಲ್ಲಿ ಎಬ್ಬಿಸಿದ ಗದ್ದಲ ನೆನಪಾಯಿತು. ಒಂದು ಸಮಯದಲ್ಲಿ ಎಂದರೆ, ಎಂದೋ ಹಿಂದಿನ ಕಥೆಯ ಬಗ್ಗೆ ನಾನು ಹೇಳುತ್ತಿಲ್ಲ. ಇದೇ ವರ್ಷದ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದೇನೆ. ಚುನಾವಣಾ ಸಮಯದಲ್ಲಂತೂ ಅವರು ತಮ್ಮೆಲ್ಲ ಭರವಸೆಯನ್ನು “ರಫೇಲ್‌’ ವಿಚಾರಕ್ಕೆ ಕೇಂದ್ರೀಕರಿಸಿಬಿಟ್ಟಿದ್ದರು.

ಅಲ್ಲದೇ, ರಫೇಲ್‌ ವಿಷಯವನ್ನು ಹಿಡಿದುಕೊಂಡು ರಾಹುಲ್‌ ಗಾಂಧಿಯವರು ಪ್ರತಿಯೊಂದು ಚುನಾವಣಾ ರ್ಯಾಲಿಗಳಲ್ಲಿ, ಸಭೆಗಳಲ್ಲಿ ಜೋರು ಜೋರಾಗಿ “ಚೌಕೀದಾರ್‌ ಚೋರ್‌ ಹೇ’ ಎಂದು ಆರೋಪಿಸಿದ್ದೆಲ್ಲ ನೆನಪಾಯಿತು. ನರೇಂದ್ರ ಮೋದಿಯವರು ಅನಿಲ್‌ ಅಂಬಾನಿ ಜೇಬಿಗೆ 30 ಸಾವಿರ ಕೋಟಿ ರೂಪಾಯಿ ಸೇರಿಸಿದ್ದಾರೆ ಎಂಬ ರಾಹುಲ್‌ರ ಆರೋಪ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದೆ. ಹಾಗಿದ್ದರೆ, ಆ ಆರೋಪಗಳ ಕತೆೆ ಈಗೇನಾಯಿತು ರಾಹುಲ್‌ ಗಾಂಧಿಯವರೇ?
ಈಗ ಭಾರತವು ತನ್ನ ಮೊದಲ ರಫೇಲ್‌ ಯುದ್ಧವಿಮಾನವನ್ನು ಸ್ವೀಕರಿಸಿದಾಗ, ಅದೇಕೆ ಕಾಂಗ್ರೆಸ್‌ ನಾಯಕರು, ತಾವು ಕೆಲವೇ ತಿಂಗಳ ಹಿಂದೆ ಮಾತನಾಡಿದ್ದನ್ನೆಲ್ಲ ಮರೆತವರಂತೆ ಸುಮ್ಮನಾಗಿಬಿಟ್ಟರು?

ಕಾಂಗ್ರೆಸ್‌ ನಾಯಕರ ಈ ಮೌನಕ್ಕೆ ಕಾರಣವೇನಿರಬಹುದು ಎಂದು ನಾನು ಯೋಚಿಸುತ್ತಿರುವಾಗಲೇ ಸುದ್ದಿಯೊಂದು ಹೊರಬಿತ್ತು. ಕಾಂಗ್ರೆಸ್‌ ಇನ್ನೂ ಲೋಕಸಭಾ ಚುನಾವಣೆಯಲ್ಲಿನ ತನ್ನ ಸೋಲಿನ ಕಾರಣಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿಕೆ ನೀಡಿದರು. ಇದಕ್ಕೆ ಕಾರಣವೂ ಇದೆ. ಏಕೆಂದರೆ ಸೋಲಿನ ಕುರಿತು ಆತ್ಮಾವಲೋಕನವು ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯಬೇಕು. ಆದರೆ ಅವರೇ ಈಗ ಅಖಾಡದಿಂದ ದೂರ ಸರಿದುಬಿಟ್ಟಿದ್ದಾರೆ. ಒಂದು ಸಂಗತಿಯನ್ನಂತೂ ಒಪ್ಪಿಕೊಳ್ಳಬೇಕು. ಅದೇನೆಂದರೆ, ಲೋಕಸಭಾ ಚುನಾವಣೆಯ ಸೋಲಿನ ಜವಾಬ್ದಾರಿಯನ್ನು ಅಂದು ರಾಹುಲ್‌ ಗಾಂಧಿ ತಮ್ಮ ಹೆಗಲ ಮೇಲೆ ಹೊರಲು ಹಿಂದೆ ಮುಂದೆ ನೋಡಲಿಲ್ಲ. ಇದು ಮೆಚ್ಚುವಂಥ ಸಂಗತಿಯೇ. ಆದರೆ ನಾಯಕತ್ವ ಎನ್ನುವುದು ಅಷ್ಟಕ್ಕೇ ಸೀಮಿತವಾಗಬಾರದು. ರಾಜಕೀಯ ಎನ್ನುವುದು ಎಂದಿಗೂ ಪಾರ್ಟ್‌ಟೈಮ್‌ ನೌಕರಿ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ.

ಪ್ರಾಮಾಣಿಕವಾಗಿ ಜನತೆಯ ಸೇವೆ ಮಾಡುತ್ತೇವೆ ಎಂದು ಮುಂದೆ ಬಂದವರು, ಜವಾಬ್ದಾರಿಯಿಂದ ದೂರ ಸರಿಯಲೇಬಾರದು. ಹೀಗಾಗಿ, ಸಹಜವಾಗಿಯೇ ಪ್ರಶ್ನೆಯೊಂದು ಉದ್ಭವವಾಗುತ್ತದೆ-ರಾಹುಲ್‌ ಗಾಂಧಿ ನಿಜಕ್ಕೂ ಜನತೆಯ ಸೇವೆ ಮಾಡುವುದಕ್ಕಾಗಿ ಬಂದರೋ ಅಥವಾ ತಮ್ಮ ಕುಟುಂಬವನ್ನು ರಕ್ಷಿಸುವುದಕ್ಕೋ?
ಕೆಲ ಸಮಯದ ಹಿಂದೆ, ಅಂದರೆ ರಫೇಲ್‌ ಯುದ್ಧವಿಮಾನವನ್ನು ಭಾರತಕ್ಕೆ ತರುವ ಸಿದ್ಧತೆ ನಡೆದಿತ್ತಲ್ಲ, ಆಗ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ವಿದೇಶ ಯಾತ್ರೆಗೆ ತೆರಳಿದ್ದರು.
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಚುನಾವಣೆಗಳು ತಲೆಯ ಮೇಲಿವೆ, ಇಂಥದ್ದರಲ್ಲಿ ರಜೆಗಾಗಿ ಇವರಿಗೆ ಸಮಯ ಹೇಗೆ ಸಿಕ್ಕಿತು ಎಂದು ಕೆಲವರು ಪ್ರಶ್ನಿಸಿದರು. (ಆದಾಗ್ಯೂ ಈಗ ರಾಹುಲ್‌ ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ.).

Advertisement

ಆಗ ರಾಹುಲ್‌ರ ಬೆಂಬಲಿಗರನೇಕರು, “ರಾಜಕಾರಣಿಗಳಿಗೆ ವೈಯಕ್ತಿಕ ಜೀವನ ಇರುವುದಿಲ್ಲವೇ?’ ಎಂದು ತಮ್ಮ ನಾಯಕನನ್ನು ಸಮರ್ಥಿಸಿಕೊಂಡರು. ಉಳಿದ ಪ್ರಜಾಪ್ರಭುತ್ವಿàಯ ರಾಷ್ಟ್ರಗಳಲ್ಲಿ ದೊಡ್ಡ ನೇತಾರನೊಬ್ಬ ವಿದೇಶ ಪ್ರವಾಸ ಕೈಗೊಳ್ಳುತ್ತಾನೆಂದರೆ, ಅದರ ಪೂರ್ಣ ಮಾಹಿತಿಯನ್ನು ಸಾರ್ವಜನಿಕಗೊಳಿಸಿ ಹೋಗುತ್ತಾನೆ. ಇದಕ್ಕೆ ಎರಡು ಕಾರಣಗಳಿವೆ, ಒಂದು ಸುರಕ್ಷತೆಯ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ ಮತ್ತು ಎರಡನೆಯದಾಗಿ, ಜನಪ್ರತಿನಿಧಿಯೊಬ್ಬ ಎಲ್ಲಿಗೆ ಹೊರಟಿದ್ದಾನೆ, ಏತಕ್ಕಾಗಿ ಹೊರಟಿದ್ದಾನೆ ಎಂದು ತಿಳಿದುಕೊಳ್ಳುವ ಅಧಿಕಾರ ಜನರಿಗೆ ಇದೆ ಎನ್ನುವ ಕಾರಣಕ್ಕಾಗಿ.

ಇದೆಲ್ಲ ಒತ್ತಟ್ಟಿಗಿರಲಿ, ರಾಹುಲ್‌ ಗಾಂಧಿಯವರು ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಡಿದ ಘೋಷಣೆಗಳು, ಆರೋಪಗಳಿಗೆ ಬೆಲೆಯಿಲ್ಲವೇನು? ಈ ಕಾರಣಕ್ಕಾಗಿಯೇ
ಅವರ ಸ್ವಭಾವದ ಬಗ್ಗೆ ಪ್ರಶ್ನೆಗಳು ಉದ್ಭವವಾಗುವುದು ಸ್ವಾಭಾವಿಕವೇ. ಕಾಂಗ್ರೆಸ್‌ನ ಆಡಳಿತದಲ್ಲಿ ಪ್ರಧಾನಮಂತ್ರಿ ಯಾರೇ ಆಗಿರಲಿ, ಅಧಿಕಾರ ನಿಜವಾಗಲೂ ಯಾರ ಕೈಯಲ್ಲಿ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಓಪನ್‌ ಸೀಕ್ರೆಟ್‌. ಇಂಥ ವಾತಾವರಣದಿಂದಾಗಿ ಇಂದು ಕಾಂಗ್ರೆಸ್‌ನಲ್ಲಿ ಎಂಥ ಸ್ಥಿತಿ ಎದುರಾಗಿದೆ ಎಂದರೆ, ಅದರ ನಿಷ್ಠಾವಂತರ ನಾಯಕರೂ ಕೂಡ ಪಕ್ಷಾಂತರ ಮಾಡಲಾರಂಭಿಸಿದ್ದಾರೆ. ಇದಕ್ಕೆ ಕೇವಲ ಪಕ್ಷಾಂತರಿಗಳನ್ನು ದೂರಿ ಪ್ರಯೋಜನವಿಲ್ಲ. ಇತ್ತೀಚಿನ ದಿನಗಳಲ್ಲಿ ಗಾಂಧಿ ಪರಿವಾರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಬಿರುಕೂ ಕೂಡ ಈ
ರೀತಿಯ ಪಕ್ಷಾಂತರಕ್ಕೆ ಪ್ರಮುಖ ಕಾರಣ ಎನ್ನಲೇಬೇಕಾಗುತ್ತದೆ.
ಇತ್ತೀಚೆಗಷ್ಟೇ ನಾನು ದೇಶದ ಒಬ್ಬ ಹಿರಿಯ ರಾಜಕೀಯ ಪಂಡಿತರನ್ನು ಭೇಟಿಯಾದೆ. ಇವರಿಗೆ ಕಾಂಗ್ರೆಸ್‌ನೊಂದಿಗೆ ಅನೇಕ ವರ್ಷಗಳ ನಂಟಿದೆ. “ಈಗ ಕಾಂಗ್ರೆಸ್‌ನಲ್ಲಿ ವಿವಿಧ ಗುಂಪುಗಳು ಹುಟ್ಟಿಕೊಂಡಿವೆ ಒಂದು ಗುಂಪು ಪಿಜಿ(ಪ್ರಿಯಾಂಕಾ ಗಾಂಧಿ) ಜತೆಗೆ ಇದ್ದರೆ, ಇನ್ನೊಂದು ಗುಂಪು ಆರ್‌ಜಿ(ರಾಹುಲ್‌ ಗಾಂಧಿ) ಜತೆಗಿದೆ’ ಎಂದು ಅವರು ಬೇಸರಪಟ್ಟುಕೊಂಡರು. ಇನ್ನು ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಮೂರನೇ ಗುಂಪೂ ಇದೆ. ಕಾಂಗ್ರೆಸ್‌ಗೆ ಪುನರುಜ್ಜೀವನ ಸೋನಿಯಾ ಗಾಂಧಿಯವರ
ನೇತೃತ್ವದಲ್ಲಿ ಮಾತ್ರ ಸಾಧ್ಯ ಎಂದು ನಂಬುತ್ತಾರೆ ಇವರೆಲ್ಲ.

ಪರಿಸ್ಥಿತಿ ಹೀಗಿರುವಾಗ, ನಾವು ಯಾರನ್ನು ಪ್ರಶ್ನಿಸಬೇಕು? ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ವಿಷಯವಾಗಿದ್ದ “ರಫೇಲ್‌’ ಇಷ್ಟು ಬೇಗನೇ ಕೈ ನಾಯಕರ ಮಾತುಗಳಿಂದ ಮರೆಯಾಯಿತೇಕೆ ಎಂದು ಯಾಕನ್ನು ಕೇಳಬೇಕು? 30 ಸಾವಿರ ಕೋಟಿ ರೂಪಾಯಿ ವಿಚಾರದಲ್ಲೇಕೆ ರಾಹುಲ್‌ ಗಾಂಧಿ ಈಗ ಸುಮ್ಮನಾಗಿಬಿಟ್ಟರು ಎಂಬ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ? ಈಗಲೂ ಬೋಫೋರ್ಸ್‌ ಘೋಟಾಲೆಯ ಕರಿನೆರಳು ದೇಶದಿಂದ ದೂರವಾಗಿಲ್ಲ, ಇಂಥದ್ದರಲ್ಲಿ ದೇಶದ ರಾಜನೀತಿಯಿಂದ ಕೆಲವೇ ತಿಂಗಳಲ್ಲಿ ರಫೇಲ್‌ ವಿವಾದ ದೂರವಾಯಿತೇಕೆ? ಹೇಳಿ, ಈ ಪ್ರಶ್ನೆಗೆ ಕಾಂಗ್ರೆಸ್‌ನಲ್ಲಿ ಯಾರು ಉತ್ತರಿಸುತ್ತಾರೆ?

-ತವ್ಲೀನ್ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next