Advertisement

ಕಠಿಣ ಶಿಕ್ಷೆಯಿಂದ ಪಾರಾದ ವಿನೇಶ್‌ ಫೊಗಾಟ್‌

09:37 PM Aug 26, 2021 | Team Udayavani |

ನವದೆಹಲಿ: ಅಶಿಸ್ತಿನಿಂದ ಅಮಾನತಿಗೆ ಒಳಗಾಗಿದ್ದ ಪ್ರತಿಭಾನ್ವಿತ ಕುಸ್ತಿಪಟುಗಳಾದ ವಿನೇಶ್‌ ಫೊಗಾಟ್‌, ಸೋನಂ ಮತ್ತು ದಿವ್ಯಾ ಈಗ ನಿರಾಳರಾಗಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿ ಶಿಕ್ಷೆಯನ್ನು ಹಿಂಪಡೆಯಲಾಗಿದೆ ಎಂದು ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ತಿಳಿಸಿದೆ.

Advertisement

ಟೋಕ್ಯೊ ಒಲಿಂಪಿಕ್ಸ್‌ ವೇಳೆ ವಿನೇಶ್‌ ಸಹವರ್ತಿಗಳೊಡನೆ ವಾಸ್ತವ್ಯ ಹೂಡಲು ನಿರಾಕರಿಸಿದ್ದರು. ಜತೆಗೆ ಪಂದ್ಯದ ವೇಳೆ ತಂಡದ ಪ್ರಾಯೋಜಕರು ನೀಡಿದ್ದ ಜೆರ್ಸಿಯನ್ನು ಧರಿಸದೆ ಬೇರಾವುದೋ ಜೆರ್ಸಿಯನ್ನು ತೊಟ್ಟಿದ್ದರು. ಹೀಗಾಗಿ ಅವರನ್ನು ಡಬ್ಲ್ಯುಎಫ್ಐ ಅಮಾನತು ಮಾಡಿತ್ತು.

ಇದೀಗ ಡಬ್ಲ್ಯುಎಫ್ಐ ವಿಚಾರಣೆ ಮುಗಿಸಿದ್ದು, ವಿನೇಶ್‌ ಜತೆ ಕುಸ್ತಿಪಟುಗಳಾದ ಸೋನಂ ಮತ್ತು ದಿವ್ಯಾ ಅವರಿಗೂ ಅಶಿಸ್ತು ತೋರದಂತೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಇಂಥ ಘಟನೆ ಮರುಕಳಿಸಿದಲ್ಲಿ ಆಜೀವ ನಿಷೇಧ ಹೇರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next