Advertisement

Western Ghats ಕಸ್ತೂರಿ ರಂಗನ್‌ ವರದಿ ಯಥಾವತ್‌ ಜಾರಿ ಬೇಡ

12:10 AM Sep 12, 2024 | Team Udayavani |

ಪಶ್ಚಿಮಘಟ್ಟ ಸಂರಕ್ಷಣೆ ಕುರಿತಾದ ಕಸ್ತೂರಿ ರಂಗನ್‌ ವರದಿ ಜಾರಿಗೆ ಕೇಂದ್ರ ಸರಕಾರ‌ ಹೊರಡಿಸಿದ್ದ ಈ ಹಿಂದಿನ ನಾಲ್ಕೂ ಅಧಿಸೂಚನೆಗಳನ್ನು ಕರ್ನಾಟಕ ತಿರಸ್ಕರಿಸಿತ್ತು. ಇದೀಗ ಕೇಂದ್ರ ಸರಕಾರ‌ 5ನೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಕರ್ನಾಟಕದ ನಿಲುವು ತಿಳಿಯಲು ಜನಪ್ರತಿನಿಧಿಗಳ ಸಭೆ ನಡೆಸಲು ರಾಜ್ಯ ಸಂಪುಟ ಉಪ ಸಮಿತಿ ನಿರ್ಧರಿಸಿದೆ. ಜನರ ಅಭಿಪ್ರಾಯ ಗಮನಿಸಿ ಮುಂದಿನ ಹೆಜ್ಜೆ ಇಡಲು ಪ್ರಯತ್ನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಪಶ್ಚಿಮ ಘಟ್ಟ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಸಂಸದರ ಅಭಿಪ್ರಾಯ ಇಲ್ಲಿದೆ.

Advertisement

ಸಾಧಕ-ಬಾಧಕ ಅಧ್ಯಯನ ಅಗತ್ಯ: ಸಿ.ಟಿ.ರವಿ, ರಾಘವೇಂದ್ರ, ಹಲಗೇಕರ್‌
ಪಶ್ಚಿಮ ಘಟ್ಟ ಉಳಿಯಬೇಕು. ವನ್ಯಜೀವಿಗಳ ರಕ್ಷಣೆಯಾಗಬೇಕು. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಇದೇ ವೇಳೆ ಸರಕಾರ‌ಗಳು ಅರಣ್ಯ ವಾಸಿಗಳ ರಕ್ಷಣೆ ಮತ್ತು ಪುನರ್ವಸತಿ ಕಡೆಗೆ ಸಹ ವಿಶೇಷ ಗಮನ ಕೊಡಬೇಕು. ಅವರಿಗೆ ಉದ್ಯೋಗ ಕೊಡಬೇಕು. ಪಶ್ಚಿಮ ಘಟ್ಟ ರಕ್ಷಣೆಯಲ್ಲಿ ಭಾರತೀಯ ಚಿಂತನೆಗಳನ್ನು ತರಬೇಕು. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿ ಸಾಧಕ ಬಾಧಕಗಳನ್ನು ಮತ್ತೊಮ್ಮೆ ಅಧ್ಯಯನ ಅಗತ್ಯ. ಎಲ್ಲ ಬೃಹತ್‌ ಕೈಗಾರಿಕೆಗಳ, ರೆಡ್‌ ಕೆಟಗರಿ ಕೈಗಾರಿಕೆಗಳನ್ನು ಕೈಬಿಡಬೇಕು, ಜಲ್ಲಿ ಕ್ರಷರ್‌ ನಡೆಸಲು, ಎರಡು ಅಂತಸ್ತಿನ ಮನೆ ಕಟ್ಟಲು, ಕನಿಷ್ಠ ವಾಣಿಜ್ಯ ಚಟು ವಟಿಕೆಗಳನ್ನು ಮಾಡಲು ಅವಕಾಶ ಕೊಟ್ಟರೆ ಊರು ಬೆಳೆಯುತ್ತದೆ, ಜನಜೀವನ ಕೂಡ ನಡೆಯುತ್ತದೆ. ಈ ರೀತಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಜಾರಿ ಮಾಡಬಹುದು ಎಂಬುದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ, ಶಿವಮೊಗ್ಗ ಸಂಸದ ಬಿ.ವೈ.ರಾಘ ವೇಂದ್ರ ಹಾಗೂ ಬೆÙ ‌ಗಾವಿ ಜಿಲ್ಲೆ ಖಾನಾಪುರ ಶಾಸಕ ವಿಠuಲ ಹಲಗೇಕರ್‌ ಅಭಿಪ್ರಾಯವಾಗಿದೆ.

ಜಾರಿಯಾದರೆ ಹೋರಾಟ ಅನಿವಾರ್ಯ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಜನಪ್ರತಿನಿಧಿಗಳು
ಪಶ್ಚಿಮ ಘಟ್ಟದ ಉಳಿವಿಗೆ ಕಸ್ತೂರಿ ರಂಗನ್‌ ವರದಿ ಜಾರಿಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಇದರಿಂದ ಈವರೆಗೆ ಬದುಕು ಕಟ್ಟಿಕೊಂಡಿರುವ ಜನರಿಗೆ ತೊಂದರೆ ಆಗಬಾರದು. ಕೇರಳದಲ್ಲಿ ಸರಳೀಕರಣ ಗೊಳಿಸುವ ಕಾರ್ಯ ಆಗಿದೆ. ಅದೇ ರೀತಿ ನಮ್ಮಲ್ಲೂ ಆಗಬೇಕು. ಜತಗೆ ಕೇಂದ್ರ ಸರಕಾರ‌ದ ವರದಿಯಲ್ಲಿ ಏನಿದೆ ಎಂಬುದನ್ನು ಜನರಿಗೆ ಅರ್ಥ ಮಾಡಿಸುವ ಕಾರ್ಯವೂ ನಡೆಯಬೇಕು. ಗಣಿಗಾರಿಕೆಯಂತಹ ದೊಡ್ಡ ಉದ್ದಿಮೆ ಚಟುವಟಿಕೆಗಳಿಗೆ ನಮ್ಮ ವಿರೋಧವಿದೆ. ಘಟ್ಟದ ತಪ್ಪಲಿನ ಕಾಡಂಚಿನ ಜನತೆಯಲ್ಲಿ ವರದಿ ಜಾರಿಯಾದರೆ ಒಕ್ಕಲೆಬ್ಬಿಸುತ್ತಾರೆ, ಸ್ಥಳಾಂತರಿಸುತ್ತಾರೆ ಎನ್ನುವ ಆತಂತಕವಿದೆ. ವರದಿ ಜಾರಿಯಿಂದ ಒಕ್ಕಲೆಬ್ಬಿಸುವುದಿಲ್ಲ/ ಸ್ಥಳಾಂತರಿಸು ವುದಿಲ್ಲ ಎಂದು ಮೊದಲು ನಾಗರಿಕರಲ್ಲಿ ಮನದಟ್ಟು ಮಾಡಬೇಕಿದೆ. ಕಸ್ತೂರಿ ರಂಗನ್‌ ವರದಿಯನ್ನು ಯಥಾವತ್ತಾಗಿ ಜಾರಿಗೆ ಮುಂದಾದರೆ ಹೋರಾಟ ಅನಿವಾರ್ಯ ಎಂಬುದು ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗದ ಶಾಸಕರಾದ ಗುರುರಾಜ್‌ ಗಂಟಿಹೊಳೆ(ಬೈಂದೂರು), ಕಿರಣ್‌ ಕುಮಾರ್‌ ಕೊಡ್ಗಿ (ಕುಂದಾಪುರ), ಹರೀಶ್‌ ಪೂಂಜ (ಬೆಳ್ತಂಗಡಿ),  ವಿ. ಸುನಿಲ್‌ ಕುಮಾರ್‌(ಕಾರ್ಕಳ), ಭಾಗೀರಥಿ ಮುರುಳ್ಯ(ಸುಳ್ಯ) ಅವರ ಅಭಿಪ್ರಾಯವಾಗಿದೆ.

ಜನರ ಅಭಿಪ್ರಾಯ ಪಡೆಯಿರಿ: ಶ್ರೇಯಸ್‌, ಸಿಮೆಂಟ್‌ ಮಂಜು
ಕಸ್ತೂರಿ ರಂಗನ್‌ ವರದಿ ಜಾರಿ ಸ್ವಾಗತಾರ್ಹ. ಆದರೆ ವರದಿಯ ಬಗ್ಗೆ ತಾಲೂಕಿನ ಜನ ಸಾಮಾನ್ಯರಿಗೆ ಸ್ಪಷ್ಟ ಮಾಹಿತಿಯಿಲ್ಲ. ರಾಜ್ಯ ಸರಕಾರ‌ ಈ ಬಗ್ಗೆ ಪ್ರತೀ ಗ್ರಾಮದಲ್ಲಿಯೂ ಸಭೆ ನಡೆಸಿ, ಸಮಗ್ರ ಮಾಹಿತಿ ನೀಡಬೇಕು. ಮಾಹಿತಿ ಕೊರತೆಯಿಂದಾಗಿ ಅಪಪ್ರಚಾರವೇ ಹೆಚ್ಚು ನಡೆಯುತ್ತಿದೆ. ಪಶ್ಚಿಮಘಟ್ಟದ ಜನರು ಹಾಗೂ ಅಭಿವೃದ್ಧಿಗೆ ಧಕ್ಕೆಯಾಗುವಂತಹ ಶಿಫಾರಸುಗಳಿದ್ದರೆ ಅಂತಹ ಅಂಶಗಳನ್ನು ಹೊರಗಿಟ್ಟು ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಕ್ಕೆ ವಿರೋಧವಿಲ್ಲ. ಹಾಗಾಗಿ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯು ವುದಕ್ಕಿಂತ ಮೊದಲು, ಜನರ ಅಭಿಪ್ರಾಯ ಪಡೆಯಬೇಕೆಂಬುದು ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಮತ್ತು ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು ಅವರ ಅಭಿಮತವಾಗಿದೆ.

“ಅವೈಜ್ಞಾನಿಕ ವರದಿ ಜಾರಿ ಬೇಡವೇ ಬೇಡ’
ಕಸ್ತೂರಿ ರಂಗನ್‌ ಹಾಗೂ ಗಾಡ್ಗಿàಳ್‌ ವರದಿಗಳೇ ಅವೈಜ್ಞಾನಿಕ. ಪರಿಸರ ಮತ್ತು ಜನಜೀವನದ ಸ್ಥಿತಿಗತಿ ಅರಿತು ಮಾಡಿದ ವರದಿಯಲ್ಲ. ಅರಣ್ಯ, ಪರಿಸರ ಇಲಾಖೆಗಳೇ ಈ ವರದಿಯನ್ನು ಒಪ್ಪಿಕೊಂಡಿಲ್ಲ. ಗೋವಾ ಫೌಂಡೇಶನ್‌ ಎನ್ನುವ ಸಂಸ್ಥೆ ಸುಪ್ರೀಂ ಕೋರ್ಟ್‌ ಹಸುರು ಪೀಠದಲ್ಲಿ ಒತ್ತಡ ಹಾಕುತ್ತಿದೆ. ಅದಕ್ಕಾಗಿ ಕೇಂದ್ರ, ರಾಜ್ಯ ಸರಕಾರ‌ ಗಡಿಬಿಡಿಯಾಗಿವೆ. ಈಗಿ ರುವ ಅರಣ್ಯ ಕಾಯ್ದೆಗಳು ಅರಣ್ಯ ಉಳಿಸಲು ಬೇಕಾದಷ್ಟು ಸಾಕು. ಮಲೆನಾಡಿನಲ್ಲಿ ವರದಿ ಜಾರಿಗೆ ವ್ಯಾಪಕ ವಿರೋಧವಿದೆ. ಈ ವರದಿ ಮಲೆನಾಡು ಪ್ರದೇಶಕ್ಕೆ ಯಥಾವತ್‌ ಜಾರಿಯಾಗುವುದಕ್ಕೆ ಆಕ್ರೋಶವಿದೆ. ಹಾಗಾಗಿ ವರದಿಯ ಪುನರ್ವಿಮರ್ಶೆ ಆಗಬೇಕೆಂಬುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಟಾರ್‌ ಅವರ ಅಭಿಪ್ರಾಯವಾಗಿದೆ.

Advertisement

ಜನಾಭಿಪ್ರಾಯ ಸಂಗ್ರಹಿಸಿ: ಸಂಸದ ಕೋಟ
-ಖಚಿತ ಭೂ ಸರ್ವೇ ಮಾಡಬೇಕು. ದಟ್ಟ ಕಾಡನ್ನು ಬಿಟ್ಟು ಉಳಿದ ಜನವಸತಿ ಪ್ರದೇಶಗಳನ್ನು ನಾಡಿನ ಭಾಗವಾಗಿಸಬೇಕು.
-ಕಸ್ತೂರಿ ರಂಗನ್‌ ವರದಿಯಲ್ಲಿರುವ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲು ಗ್ರಾಮ ಸಭೆ ಕರೆದು ಜನಾಭಿಪ್ರಾಯ ಸಂಗ್ರಹ ಮಾಡಬೇಕು.
-25 ಎಕ್ರೆವರೆಗಿನ ಕಾಫಿ ತೋಟವನ್ನು 50 ವರ್ಷಕ್ಕೆ ಸರಕಾರ ಗುತ್ತಿಗೆ ನೀಡಿದ್ದು, ಅದರಂತೆ ನಡೆದುಕೊಳ್ಳಬೇಕು. ಒತ್ತುವರಿ ತೆರವು ಹೆಸರಿನಲ್ಲಿ ಬೆಳೆಗಾರರಿಗೆ ತೊಂದರೆ ಮಾಡಬಾರದು. ಜಾರಿ ನೆಪದಲ್ಲಿ ಸ್ಥಳೀಯರಿಗೆ ತೊಂದರೆಯನ್ನು ನೀಡಬಾರದು.

ವರದಿ ಜಾರಿ ಮಾಡುವ ಮಾತೇ ಇಲ್ಲ
ಪಶ್ಚಿಮ ಘಟ್ಟ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ಇದ್ದೇ ಇರುತ್ತದೆ. ಆದರೆ ಕಸ್ತೂರಿ ರಂಗನ್‌ ವರದಿ ಜಾರಿ ಮಾತೇ ಇಲ್ಲ. ಈ ನಮ್ಮ ನಿಲುವಿಗೆ ಸದಾ ಬದ್ಧವಾಗಿದ್ದೇವೆ. ಖಾನಾಪುರ ತಾಲೂಕಿನ ಜನರು ಆರಂಭದಲ್ಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರಕಾರ‌ವೂ ಅವರ ಪರವಾಗಿದೆ.
-ಲಕ್ಷ್ಮೀ ಹೆಬ್ಬಾಳ್ಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next