Advertisement

Western Ghat: ಸೆ. ಅಂತ್ಯದೊಳಗೆ ಕೇಂದ್ರಕ್ಕೆ ರಾಜ್ಯದ ನಿಲುವು

01:49 AM Aug 29, 2024 | Team Udayavani |

ಬೆಂಗಳೂರು: ಪಶ್ಚಿಮ ಘಟ್ಟ ಸಂಬಂಧ ಆ.2ರಂದು ಕೇಂದ್ರ ಸರಕಾರ ಹೊರಡಿಸಿದ್ದ 6ನೇ ಅಧಿಸೂಚನೆಗೆ (ಕಸ್ತೂರಿ ರಂಗನ್‌ ಸಮಿತಿ ವರದಿ) ಸೆಪ್ಟಂಬರ್‌ ಅಂತ್ಯದ ಒಳಗೆ ರಾಜ್ಯದ ನಿಲುವು ತಿಳಿಸಲು ಉದ್ದೇಶಿ ಸಿದ್ದು, ಅದಕ್ಕೂ ಮುನ್ನ ಉದ್ದೇಶಿತ ಪಶ್ಚಿಮ ಘಟ್ಟದ 10 ಜಿಲ್ಲೆಗಳ ಜನ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿ ಸಲು ತೀರ್ಮಾನಿಸಲಾಗಿದೆ.

Advertisement

ವಿಧಾನಸೌಧದಲ್ಲಿ ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ಯಲ್ಲಿ ಡಾ| ಎಚ್‌.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್‌, ದಿನೇಶ್‌ ಗುಂಡೂ ರಾವ್‌, ಮಧು ಬಂಗಾರಪ್ಪ, ಮಂಕಾಳ ವೈದ್ಯ ಭಾಗವಹಿಸಿದ್ದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲ 10 ಜಿಲ್ಲೆಗಳ ಜನಪ್ರತಿ ನಿಧಿಗಳ ಅಭಿಪ್ರಾಯ ಸಂಗ್ರಹಿಸಿ, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ,ಅಂತಿಮವಾಗಿ ಸಚಿವ ಸಂಪುಟಕ್ಕೆಶಿಫಾರಸು ಮಾಡಲು ತೀರ್ಮಾನಿಸಲಾ ಯಿತು. ಅಲ್ಲಿಂದ ಸೆಪ್ಟಂಬರ್‌ ಅಂತ್ಯದ ಒಳಗೆ ಕೇಂದ್ರ ಸರಕಾರ ಹೊರಡಿಸಿರುವ 6ನೇ ಅಧಿಸೂಚನೆಗೆ ತನ್ನ ನಿಲುವು ತಿಳಿಸಲು ನಿರ್ಧರಿಸಲಾಯಿತು.

ಷರತ್ತು ಮುಂದಿಟ್ಟು ನಿಲುವು
ಪ್ರಕಟ: ಸಚಿವ ಈಶ್ವರ ಖಂಡ್ರೆ
ಈ ವೇಳೆ ಈಶ್ವರ ಖಂಡ್ರೆ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶದಲ್ಲಿ 1,533 ವಸತಿ ಪ್ರದೇಶಗಳಿದ್ದು, ಜನರ ಬದುಕಿಗೆ ಯಾವುದೇ ರೀತಿಯ ತೊಂದರೆಆಗದಂತೆ ನಿರ್ದಿಷ್ಟ ಷರತ್ತು ಮುಂದಿಟ್ಟು ಕೇಂದ್ರ ಸರಕಾರಕ್ಕೆ ಸೆಪ್ಟಂಬರ್‌ ಅಂತ್ಯದ ಒಳಗೆ ರಾಜ್ಯದ ನಿಲುವು
ತಿಳಿಸಬೇಕಾಗುತ್ತದೆ. ಅದಕ್ಕೂ ಮುನ್ನಅಂತಿಮವಾಗಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಬೇಕು ಎಂದರು.

ಏನಿದು ಪಶ್ಚಿಮಘಟ್ಟ ಅಧಿಸೂಚನೆ?
-ರಾಜ್ಯದ ಪಶ್ಚಿಮ ಘಟ್ಟದಲ್ಲಿ 20,668 ಚ.ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ: ಕಸ್ತೂರಿ ರಂಗನ್‌ ಸಮಿತಿ ವರದಿ
-ಈಗಾಗಲೇ ರಾಜ್ಯ ಸರಕಾರದಿಂದ 16,632 ಚ.ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ
-ಇದಕ್ಕಷ್ಟೇ ಸೀಮಿತಗೊಳಿಸಿ ಕೇಂದ್ರದ 6ನೇ ಅಧಿಸೂಚನೆಗೆ ಸರಕಾರದ ನಿಲುವು ವ್ಯಕ್ತಪಡಿ ಸಲು ಸಚಿವ ಸಂಪುಟ ಶಿಫಾರಸು?
-ಪಶ್ಚಿಮಘಟ್ಟ ಪ್ರದೇಶದಲ್ಲಿ 1,533 ವಸತಿ ಪ್ರದೇಶ. ಇಲ್ಲಿರುವ ಜನರ ಬದುಕಿಗೆ ತೊಂದರೆ ಆಗದಂತೆ ಷರತ್ತು ಹಾಕಲು ಚಿಂತನೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next