Advertisement

ಬಿಜೆಪಿ ನಾಯಕರಿಗೆ ಮದ್ಯ, ವಿದೇಶಿ ದಿರಿಸು ಬೇಡ

06:00 AM Dec 27, 2017 | Team Udayavani |

ನವದೆಹಲಿ: ಭಾರತೀಯ ಜನತಾ ಪಾರ್ಟಿಯು ತನ್ನ ಪಕ್ಷದ ನಾಯಕರಿಗೆ ಆಲ್ಕೋಹಾಲ್‌ ಹಾಗೂ ವಿದೇಶಿ ಉಡುಪುಗಳಿಂದ ದೂರವಿರುವಂತೆ ಕಟ್ಟಾಜ್ಞೆ ವಿಧಿಸಬೇಕೆಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ. 

Advertisement

ಟ್ವಿಟರ್‌ನಲ್ಲಿ ಭಾರತೀಯ ಸಂವಿಧಾನದ 49ನೇ ಪರಿಚ್ಛೇದವನ್ನು ಉಲ್ಲೇಖೀಸಿರುವ ಅವರು, ಸಂವಿಧಾನ ದಲ್ಲಿ ಮದ್ಯಪಾನವನ್ನು ನಿಷೇಧಿಸಬೇಕೆಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರು,ಸಚಿವರ ಮೇಲೆ ಮದ್ಯಪಾನ ನಿಷೇಧ ಹೇರಬೇಕು ಎಂದಿದ್ದಾರೆ. 

ಇನ್ನು, ನಾಯಕರು ವಿದೇಶಿ ಉಡುಪುಗಳನ್ನು ಧರಿಸುವ ವಿರುದ್ಧವೂ ಅಸಮಾಧಾನ ಹೊರಹಾಕಿರುವ ಅವರು, “”ಪಾಶ್ಚಿಮಾತ್ಯ ಉಡುಪುಗಳು ಗುಲಾಮಗಿರಿಯ ಸಂಕೇತ. ಹಾಗಾಗಿ, ಬಿಜೆಪಿಯ ಎಲ್ಲಾ ನಾಯಕರು ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳುವ ದಿರಿಸು ಧರಿಸುವಂತೆ ಆದೇಶಿಸಬೇಕು” ಎಂದು ಆಗ್ರಹಿಸಿದ್ದಾರೆ. 

ಪಕ್ಷದ ಶಿಸ್ತಿನ ಬಗ್ಗೆ ಸ್ವಾಮಿ ಕಳೆದೆರಡು ದಿನಗಳಲ್ಲಿ ಹೀಗೆ ದನಿಯೆತ್ತಿರುವುದು ಇದು 2ನೇ ಬಾರಿ. ಸೋಮವಾರ ಮಾಳವೀಯ ಅವರ ಜನ್ಮದಿನಾಚರಣೆಗೆ ಬಿಜೆಪಿಯ ಬಹುತೇಕರು ಗೈರಾಗಿದ್ದಕ್ಕೆ ಅವರು ಗರಂ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next