Advertisement

ವಿಂಡೀಸ್‌ ಏಟಿಗೆ ಪಾಕ್‌ ಪಲ್ಟಿ

02:23 AM Jun 01, 2019 | Sriram |

ನಾಟಿಂಗ್‌ಹ್ಯಾಮ್‌: ವೆಸ್ಟ್‌ ಇಂಡೀಸ್‌ ತನ್ನ ವಿಶ್ವಕಪ್‌ ಅಭಿಯಾನವನ್ನು ಪ್ರಚಂಡ ರೀತಿಯಲ್ಲಿ ಆರಂಭಿಸಿದೆ. ಇಂಗ್ಲೆಂಡಿಗೆ ಆಗಮಿಸಿದ ಬಳಿಕ ನಿರಂತರವಾಗಿ ಮುಗ್ಗರಿಸುತ್ತಲೇ ಇದ್ದ ಪಾಕಿಸ್ಥಾನಕ್ಕೆ ಮತ್ತೂಂದು ಸೋಲಿನೇಟು ಬಿಗಿದಿದೆ. ಇದನ್ನು ತಾಳಲಾಗದೆ ಸಫ‌ìರಾಜ್‌ ಪಡೆ 7 ವಿಕೆಟ್‌ಗಳಿಂದ ಶರಣಾಗಿದೆ.

Advertisement

ಇದು ವಿಶ್ವಕಪ್‌ ಮೇಲಾಟವೋ, ಟಿ20 ಮುಖಾಮುಖೀಯೋ ಅಥವಾ ಕ್ಲಬ್‌ ಮಟ್ಟದ ಪಂದ್ಯವೋ ಎಂದು ಅನು ಮಾನ ಹುಟ್ಟಿಸುವ ರೀತಿ ಸಾಗಿತ್ತು ಶುಕ್ರವಾರದ ವಿಂಡೀಸ್‌-ಪಾಕ್‌ ನಡು ವಿನ “ಟ್ರೆಂಟ್‌ ಬ್ರಿಜ್‌’ ಮುಖಾ ಮುಖೀ. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನ ಕೆರಿಬಿಯನ್ನರ ಘಾತಕ ಬೌಲಿಂಗ್‌ ದಾಳಿಯನ್ನು ನಿಭಾಯಿಸ ಲಾಗದೆ ಕೇವಲ 21.4 ಓವರ್‌ಗಳಲ್ಲಿ 105 ರನ್ನಿಗೆ ಆಲೌಟ್‌ ಆಯಿತು. ವೆಸ್ಟ್‌ ಇಂಡೀಸ್‌ 13.4 ಓವರ್‌ಗಳಲ್ಲಿ 3ಕ್ಕೆ 108 ರನ್‌ ಬಾರಿಸಿ ಅಮೋಘ ಗೆಲುವನ್ನು ಒಲಿಸಿಕೊಂಡಿತು. ಹೀಗೆ 100 ಓವರ್‌ಗಳ ಪಂದ್ಯವೊಂದು ಬರೀ 35.2 ಓವರ್‌ಗಳಲ್ಲಿ ಮುಗಿದು ಹೋಯಿತು!

ಇದು ವಿಶ್ವಕಪ್‌ನಲ್ಲಿ ಪಾಕ್‌ ದಾಖಲಿಸಿದ 2ನೇ ಕನಿಷ್ಠ ಮೊತ್ತ. ಇಂಗ್ಲೆಂಡ್‌ ಎದುರಿನ 1992ರ ಅಡಿಲೇಡ್‌ ಪಂದ್ಯದಲ್ಲಿ 74ಕ್ಕೆ ಕುಸಿದದ್ದು ದಾಖಲೆ. ಆ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಪಟಪಟನೆ ಉದುರಿದ ಪಾಕ್‌
ಇಂಗ್ಲೆಂಡ್‌ ಟ್ರ್ಯಾಕ್‌ ಬ್ಯಾಟ್ಸ್‌ಮನ್‌ಗಳಿಗೆ ಮೇಲುಗೈ ಒದಗಿಸುತ್ತದೆಂಬ ಮಾತು ಈ ಪಂದ್ಯದ ವೇಳೆಯೂ ಕೇಳಿಬಂದಿತ್ತು. 350 ರನ್‌ ಧಾರಾಳವಾಗಿ ಗಳಿಸಬಹುದು ಎಂಬುದು ಕ್ರಿಕೆಟ್‌ ವಿಶೇಷಜ್ಞರ ಲೆಕ್ಕಾಚಾರವಾಗಿತ್ತು. ಆದರೆ ಹೋಲ್ಡರ್‌ ಪಡೆ ಎಲ್ಲವನ್ನೂ ತಲೆಕೆಳಗಾಗಿಸಿ ಅಪಾಯದ ಗಂಟೆ ಬಾರಿಸಿದೆ.

ಮಧ್ಯಮ ವೇಗಿ ಒಶೇನ್‌ ಥಾಮಸ್‌ ಪಾಕ್‌ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಸಾಧನೆ 27ಕ್ಕೆ 4. ನಾಯಕ ಹೋಲ್ಡರ್‌ 3, ಆಲ್‌ರೌಂಡರ್‌ ರಸೆಲ್‌ 2 ವಿಕೆಟ್‌ ಉಡಾಯಿಸಿದರು. ಪಾಕ್‌ ಬ್ಯಾಟಿಂಗ್‌ ಸರದಿಯಲ್ಲಿ 6 ಮಂದಿಯದ್ದು ಸಿಂಗಲ್‌ ಡಿಜಿಟ್‌ ಸ್ಕೋರ್‌. ಒಬ್ಬರದು ಶೂನ್ಯ ಸಂಪಾದನೆ. ತಲಾ 22 ರನ್‌ ಹೊಡೆದ ಫ‌ಕಾರ್‌ ಜಮಾನ್‌, ಬಾಬರ್‌ ಆಜಮ್‌ ಅವರದೇ ಅತ್ಯಧಿಕ ಗಳಿಕೆ.

Advertisement

ಚೇಸಿಂಗ್‌ ವೇಳೆ ಹೋಪ್‌ (11) ಮತ್ತು ಬ್ರಾವೊ (0) ಬೇಗನೇ ನಿರ್ಗಮಿಸಿದರು. ಆದರೆ ಕ್ರಿಸ್‌ ಗೇಲ್‌ ಮತ್ತು ನಿಕೋಲಸ್‌ ಪೂರನ್‌ ಸಿಡಿದು ನಿಂತರು. ಗೇಲ್‌ 34 ಎಸೆತ ಗಳಿಂದ ಭರ್ತಿ 50 ರನ್‌ ಮಾಡಿದರೆ (6 ಬೌಂಡರಿ, 3 ಸಿಕ್ಸರ್‌), ಪೂರನ್‌ 19 ಎಸೆತಗಳಿಂದ 34 ರನ್‌ ಬಾರಿಸಿ ಔಟಾಗದೆ ಉಳಿದರು (4 ಬೌಂಡರಿ, 2 ಸಿಕ್ಸರ್‌).

40 ಗೇಲ್‌ ಸಿಕ್ಸರ್‌
ತಮ್ಮ ಸ್ಫೋಟಕ ಬ್ಯಾಟಿಂಗ್‌ ವೇಳೆ ಕ್ರಿಸ್‌ ಗೇಲ್‌ 3 ಸಿಕ್ಸರ್‌ ಬಾರಿಸಿದರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಗರಿಷ್ಠ 40 ಸಿಕ್ಸರ್‌ ಬಾರಿಸಿದ ದಾಖಲೆಯನ್ನು ಸ್ಥಾಪಿಸಿದರು. 37 ಸಿಕ್ಸರ್‌ ಹೊಡೆದ ಎಬಿ ಡಿ ವಿಲಿಯರ್ 2ನೇ ಸ್ಥಾನಕ್ಕೆ ಕುಸಿದರು. ಹಾಗೆಯೇ ಏಕದಿನದಲ್ಲಿ ವಿಂಡೀಸ್‌ ಪರ ಸರ್ವಾಧಿಕ 120 ಕ್ಯಾಚ್‌ ಪಡೆದು ಕಾರ್ಲ್ ಹೂಪರ್‌ ದಾಖಲೆಯನ್ನು ಸರಿದೂಗಿಸಿದರು.

27/4 ಒಶೇನ್‌ ಥಾಮಸ್‌
ಪಾಕಿಸ್ಥಾನವನ್ನು ಕಾಡಿದ ಒಶೇನ್‌ ರೊಮೇನ್‌ ಥಾಮಸ್‌ ಜಮೈಕಾದ 22ರ ಹರೆಯದ ಬಲಗೈ ವೇಗಿ. ಇದು ಅವರ 10ನೇ ಪಂದ್ಯ. ಈವರೆಗೆ 19 ವಿಕೆಟ್‌ ಉರುಳಿಸಿದ್ದಾರೆ. 21 ರನ್ನಿತ್ತು 5 ವಿಕೆಟ್‌ ಉರುಳಿಸಿದ್ದು ಅತ್ಯುತ್ತಮ ಸಾಧನೆ.

ಸ್ಕೋರ್‌ ಪಟ್ಟಿ
ಪಾಕಿಸ್ಥಾನ
ಇಮಾಮ್‌ ಉಲ್‌ ಹಕ್‌ ಸಿ ಹೋಪ್‌ ಬಿ ಕಾಟ್ರೆಲ್ 2
ಫ‌ಕಾರ್‌ ಜಮಾನ್‌ ಬಿ ರಸೆಲ್‌ 22
ಬಾಬರ್‌ ಆಜಮ್‌ ಸಿ ಹೋಪ್‌ ಬಿ ಥಾಮಸ್‌ 22
ಹ್ಯಾರಿಸ್‌ ಸೊಹೈಲ್‌ ಸಿ ಹೋಪ್‌ ಬಿ ರಸೆಲ್‌ 8
ಸಫ‌ìರಾಜ್‌ ಅಹ್ಮದ್‌ ಸಿ ಹೋಪ್‌ ಬಿ ಹೋಲ್ಡರ್‌ 8
ಮೊಹಮ್ಮದ್‌ ಹಫೀಜ್‌ ಸಿ ಕಾಟ್ರೆಲ್‌ ಬಿ ಥಾಮಸ್‌ 16
ಇಮಾದ್‌ ವಾಸಿಮ್‌ ಸಿ ಗೇಲ್‌ ಬಿ ಹೋಲ್ಡರ್‌ 1
ಶಾದಾಬ್‌ ಖಾನ್‌ ಎಲ್‌ಬಿಡಬ್ಲ್ಯು ಥಾಮಸ್‌ 0
ಹಸನ್‌ ಅಲಿ ಸಿ ಕಾಟ್ರೆಲ್‌ ಬಿ ಹೋಲ್ಡರ್‌ 1
ವಹಾಬ್‌ ರಿಯಾಜ್‌ ಬಿ ಥಾಮಸ್‌ 18
ಮೊಹಮ್ಮದ್‌ ಆಮಿರ್‌ ಔಟಾಗದೆ 3
ಇತರ 4
ಒಟ್ಟು ( 21.4 ಓವರ್‌ಗಳಲ್ಲಿ ಆಲೌಟ್‌) 105
ವಿಕೆಟ್‌ ಪತನ: 1-17, 2-35, 3-45, 4-62, 5-75, 6-77, 7-78, 8-81, 9-105.
ಬೌಲಿಂಗ್‌
ಶೆಲ್ಡನ್‌ ಕಾಟ್ರೆಲ್‌ 4-0-18-1
ಜಾಸನ್‌ ಹೋಲ್ಡರ್‌ 5-0-42-3
ಆ್ಯಂಡ್ರೆ ರಸೆಲ್‌ 3-1-4-2
ಕಾರ್ಲೋಸ್‌ ಬ್ರಾತ್‌ವೇಟ್‌ 4-0-14-0
ಒಶೇನ್‌ ಥಾಮಸ್‌ 5.4-0-27-4
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ಶಾದಾಬ್‌ ಬಿ ಆಮಿರ್‌ 50
ಶೈಹೋಪ್‌ ಸಿ ಹಫೀಜ್‌ ಬಿ ಆಮಿರ್‌ 11
ಡ್ಯಾರನ್‌ ಬ್ರಾವೊ ಸಿ ಬಾಬರ್‌ ಬಿ ಆಮಿರ್‌ 0
ನಿಕೋಲಸ್‌ ಪೂರನ್‌ ಔಟಾಗದೆ 34
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 7
ಇತರ 6
ಒಟ್ಟು (13.4 ಓವರ್‌ಗಳಲ್ಲಿ 3 ವಿಕೆಟಿಗೆ) 108
ವಿಕೆಟ್‌ ಪತನ: 1-36, 2-46, 3-77.
ಬೌಲಿಂಗ್‌
ಮೊಹಮ್ಮದ್‌ ಆಮಿರ್‌ 6-0-26-3
ಹಸನ್‌ ಅಲಿ 4-0-39-0
ವಹಾಬ್‌ ರಿಯಾಜ್‌ 3.4-1-40-0
ಪಂದ್ಯಶ್ರೇಷ್ಠ: ಒಶೇನ್‌ ಥಾಮಸ್‌

Advertisement

Udayavani is now on Telegram. Click here to join our channel and stay updated with the latest news.

Next