Advertisement

ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ದಿನೇಶ್‌ ರಾಮದಿನ್‌ ವಿದಾಯ ಘೋಷಣೆ

11:03 PM Jul 18, 2022 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಮತ್ತು ವಿಕೆಟ್‌ ಕೀಪರ್‌ ದಿನೇಶ್‌ ರಾಮದಿನ್‌ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಆದರೆ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವುದನ್ನು ಮುಂದುವರಿ ಸುವುದಾಗಿ ಹೇಳಿದ್ದಾರೆ.

Advertisement

2005ರಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಕಾಲಿಟ್ಟ ದಿನೇಶ್‌ ರಾಮದಿನ್‌ ಅವರದು 17 ವರ್ಷಗಳ ಸುದೀರ್ಘ‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಬಾಳ್ವೆ. ಈ ಅವಧಿಯಲ್ಲಿ 74 ಟೆಸ್ಟ್‌, 139 ಏಕದಿನ ಹಾಗೂ 71 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಕ್ರಮವಾಗಿ 2,889 ರನ್‌, 2,200 ರನ್‌ ಹಾಗೂ 636 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 4, ಏಕದಿನದಲ್ಲಿ 2 ಶತಕ ಬಾರಿಸಿದ್ದಾರೆ.

ಟೆಸ್ಟ್‌ನಲ್ಲಿ 205 ಕ್ಯಾಚ್‌ ಹಾಗೂ 12 ಸ್ಟಂಪಿಂಗ್‌ ಇವರ ಸಾಧನೆಯಾಗಿದೆ. ಏಕದಿನದಲ್ಲಿ 181 ಕ್ಯಾಚ್‌ ಹಾಗೂ 7 ಸ್ಟಂಪಿಂಗ್‌ ಮಾಡಿದ್ದಾರೆ.ರಾಮದಿನ್‌ 17 ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸನ್ನು ಮುನ್ನಡೆಸಿದ್ದರು. ಇದರಲ್ಲಿ 13 ಟೆಸ್ಟ್‌ಗಳೂ ಸೇರಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next