Advertisement
ಮಾತುಕತೆಗೆ ಬಂದ ಅಹ್ವಾನದ ಮೇರೆಗೆ ದೌಡಾಯಿಸಿದ ಜಂಟಿ ಸಂಧಾನ ಸಮಿತಿಯ ಬಿ.ಡಿ.ಹಿರೇಮಠ, ಉದಯ ನಾಯ್ಕ, ಸಿ.ವಿ.ಲೋಕೇಶ, ರೂಪೇಶ ಪವಾರ್, ಹನುಮಂತ ಕಾರ್ಗಿ ಅವರುಗಳು ವೇತನ ಒಪ್ಪಂದ ಮಾತುಕತೆಗೆ ದೌಡಾಯಿಸಿದ್ದರು. ಆದರೆ ವೇತನ ಒಪ್ಪಂದ ಮಾತುಕತೆ ಫಲಪ್ರದವಾಗಿ ನಡೆಯದಿದ್ದ ಕಾರಣ, ಸಧ್ಯಕ್ಕೆ ಮಾತುಕತೆ ಮುರಿದು ಬಿದ್ದಿದೆ.
Related Articles
Advertisement
ಕಾರ್ಮಿಕ ಸಚಿವರಿರುವ ಜಿಲ್ಲೆಯಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಕಾರ್ಖಾನೆಅಂದ ಹಾಗೆ ಕಾರ್ಮಿಕ ಸಚಿವರಿರುವ ಜಿಲ್ಲೆಯಲ್ಲಿ ಕಾರ್ಮಿಕರ ಕಣ್ಣೀರಿಗೆ ಹಾಗೂ ನ್ಯಾಯಯುತವಾದ ಬೇಡಿಕೆಗೆ ಬೆಲೆಯಿಲ್ಲದೇ ಕಾರ್ಮಿಕರನ್ನು ಸತಾಯಿಸಲಾಗುತ್ತಿದೆ ಎಂಬ ಮಾತು ಇದೀಗ ಚರ್ಚೆಯಲ್ಲಿದೆ. ಕಳೆದ 33 ತಿಂಗಳುಗಳಿಂದ ವೇತನ ಒಪ್ಪಂದಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಕಾರ್ಮಿಕರ ಬವಣೆಗಳನ್ನು ನ್ಯಾಯೋಚಿತವಾದ ರೀತಿಯಲ್ಲಿ ಪರಿಹರಿಸಬೇಕಾದ ಗುರುತರ ಜವಾಬ್ದಾರಿ ಮತ್ತು ಸವಾಲು ಕಾರ್ಮಿಕ ಸಚಿವರ ಮೇಲಿದೆ. ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲೆಬೇಕಾದ ಸವಾಲಿನ ಜೊತೆಗೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಕಾರ್ಮಿಕರ ಬಗ್ಗೆ ಸದಾ ಕಾಳಜಿನ್ನಿಟ್ಟುಕೊಂಡ ಕಾರ್ಮಿಕ ಸಚಿವರು ಕಾಗದ ಕಾರ್ಖಾನೆಯ ಕಾರ್ಮಿಕರ ಮೇಲೆ ನಿಷ್ಕಾಳಜಿ ಮಾಡದೇ ಹಟಮಾರಿ ಧೋರಣೆಯನ್ನು ತೆಳೆಯುತ್ತಿರುವ ಕಾಗದ ಕಾರ್ಖಾನೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿಯಾದರೂ, ಬೇಡಿಕೆ ಈಡೇರಿಸುತ್ತಾರೆಂಬ ಬಲವಾದ ನಂಬಿಕೆಯಲ್ಲಿ ಕಾರ್ಮಿಕರಿದ್ದಾರೆ. ಇದನ್ನೂ ಓದಿ :ನೀರಜ್ ಚೋಪ್ರಾ ಕನಸು ನನಸಾಯ್ತು: ತಂದೆ ತಾಯಿಯೊಂದಿಗೆ ವಿಮಾನ ಪ್ರಯಾಣ ಮಾಡಿದ ಚಿನ್ನದ ಹುಡುಗ ಕೆ.ಎಲ್.ಚಂಡಕ್ ಅವರಿರುತ್ತಿದ್ದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತುಗಳು ಇದೀಗ ಕಾರ್ಮಿಕರಲ್ಲಿ ಹರಿದಾಡತೊಡಗಿದೆ. ಈಗಿನ ಸಾಧ್ಯ ಸಾಧ್ಯತೆಗಳ ಪ್ರಕಾರ ರೂ:4 ರಿಂದ ನಾಲ್ಕುವರೆ ಸಾವಿರಕ್ಕೆ ವೇತನ ಒಪ್ಪಂದವಾಗಬಹುದಾದರೂ, ಸತತ ಹೊರಾಡಿ, ವರ್ಷಗಳ ಹೋರಾಟದ ಫಲವಾಗಿ ಹೈ ಕೋರ್ಟನ್ನು ಮಂಜೂರು ಮಾಡಿಸಿದ ಬಿ.ಡಿ.ಹಿರೇಮಠ ಅವರಿಗೆ ಶೋಭೆ ತರಲಿಕ್ಕಿಲ್ಲ. ಇನ್ನೂ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಸಚಿವರುಗಳ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ಮತ್ತು ಬಿಜೆಪಿಯ ಒಂದು ಭಾಗವೆಂದೆ ಹೇಳಬಹುದಾದ ಬಿ.ಎಂ.ಎಸ್ ಕಾರ್ಮಿಕ ಸಂಘಟನೆಯ ಸಿ.ವಿ.ಲೋಕೇಶ ಅವರ ತಾಕತ್ತಿಗೂ ಸವಾಲು ಎಂಬಂತಾಗಿದೆ. ಸಿಐಟಿಯುನಲ್ಲಿ ಘಟಾನುಘಟಿ ನಾಯಕರನ್ನು ಹೊಂದಿರುವ ಉದಯ ನಾಯ್ಕ ಅವರಿಗೂ ಇದು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ವಿಧಾನ ಪರಿಷತ್ ಸದಸ್ಯರಾದ ಘೋಟ್ನೇಕರ ಅವರ ಬೆಂಬಲವಿರುವ ದಾಂಡೇಲಿ ಮಜ್ದೂರು ಸಂಘಕ್ಕೂ ಇದೊಂದು ಸವಾಲಾಗಿದೆ. ಹೀಗಿರುವಾಗ ಕನಿಷ್ಟ 6 ಸಾವಿರಕ್ಕಿಂತ ಹೆಚ್ಚು ವೇತನ ಒಪ್ಪಂದ ಮಾಡಿಸಲೇಬೇಕಾದ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ ಜಂಟಿ ಸಂಧಾನ ಸಮಿತಿಯ ಮೇಲಿದೆ.