Advertisement

ವಸ್ತ್ರಗಳ ವಿನ್ಯಾಸಕ್ಕಾಗಿ ಮಿಂಚುಳ್ಳಿ ಸೇರಿದಂತೆ 1000ಕ್ಕೂ ಮಿಕ್ಕಿ ಪಕ್ಷಿಗಳ ಕಳ್ಳಸಾಗಣೆ!

11:46 AM Jun 03, 2023 | Team Udayavani |

ನವದೆಹಲಿ: ವಸ್ತ್ರಗಳ ವಿನ್ಯಾಸಕ್ಕಾಗಿ ಬಳಕೆ ಮಾಡಲು ಸುಮಾರು 933 ಸಾವನ್ನಪ್ಪಿರುವ ಬಿಳಿ ಕುತ್ತಿಗೆಯ ಮಿಂಚುಳ್ಳಿ(ಕಿಂಗ್‌ ಫಿಶರ್), 868 ಬೂದು-ಕೆಂಪು ಬಣ್ಣದ ಕಾಡು ಹುಂಜ, ಫ್ರಾಂಕೋಲಿನ್ ಹಕ್ಕಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪಶ್ಚಿಮಬಂಗಾಳದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ಬಾಲಸೋರ್ ಭೀಕರ ದುರಂತ: ರೈಲು ಅಪಘಾತ ತಪ್ಪಿಸುವ ಕವಚ ತಂತ್ರಜ್ಞಾನ ಕೆಲಸ ಮಾಡಲಿಲ್ಲವೇ?

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅರಣ್ಯಾಧಿಕಾರಿ ಚಿನ್ಮೋಯಿ ಬರ್ಮನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕೊಂದಿರುವ ಸುಮಾರು 1,500 ಪಕ್ಷಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ಅಪರಾಧ ನಿಗ್ರಹ ದಳ ಆರೋಪಿ ಸಲಾವುದ್ದೀನ್‌ ಮೀರ್‌ (32 ವರ್ಷ) ಎಂಬಾತನನ್ನು ಬಂಧಿಸಿ, ಆತನ ಬಳಿ ಇದ್ದ ಸಾವಿರಕ್ಕೂ ಅಧಿಕ ಪಕ್ಷಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈತ 2016ರಿಂದ ಈ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದು, ವಸ್ತ್ರಗಳ ವಿನ್ಯಾಸಕ್ಕಾಗಿ ಈ ಪಕ್ಷಿಗಳ ರೆಕ್ಕೆ-ಪುಕ್ಕಗಳನ್ನು ಬಳಸುತ್ತಿದ್ದು, ರಷ್ಯಾ, ಕೆನಡಾ, ಯುನೈಟೆಡ್‌ ಕಿಂಗ್‌ ಡಮ್‌, ಡೆನ್ಮಾರ್ಕ್‌, ಐಸ್‌ ಲ್ಯಾಂಡ್‌ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿರುವುದಾಗಿ ಮೀರ್‌ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next