ಕೋಲ್ಕತಾ: ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಮತ್ತು ಪದ್ಮಶ್ರೀ ಪುರಸ್ಕೃತ ನಾರಾಯಣ ದೇವನಾಥ್ (96) ನಿಧನರಾಗಿದ್ದಾರೆ.ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಹಂದಾ ಭೋಂಡಾ (1962), ಬಾತುಲ್ ದ ಗ್ರೇಟ್ (1965) ಮತ್ತು ನೊಂತೆ ಫೋಂಟೆ (1969) ಎಂಬ ವ್ಯಂಗ್ಯಚಿತ್ರ ಸರಣಿಯಿಂದ ಅವರು ಪ್ರಸಿದ್ಧಿ ಪಡೆದಿದ್ದರು. ಅವರು ರಚಿಸಿದ ಹಾಂಡಾ ಭೋಂಡಾ ಎಂಬ ವ್ಯಂಗ್ಯ ಚಿತ್ರ ಸರಣಿ 53 ವರ್ಷಗಳ ಕಾಲ ದಾಖಲೆಯ ಪ್ರದರ್ಶನ ಕಂಡಿದೆ.
ದೇಶದ ವ್ಯಂಗ್ಯಚಿತ್ರಕಾರರೊಬ್ಬರ ಮಟ್ಟಿಗೆ ಇದೊಂದು ದಾಖಲೆಯೇ ಆಗಿದೆ. ಮತ್ತೊಂದು ಮಹತ್ವದ ಅಂಶವೆಂದರೆ ದೇಶದಲ್ಲಿ ವ್ಯಂಗ್ಯಚಿತ್ರಕಾರರೊಬ್ಬರಿಗೆ ಮೊದಲ ಬಾರಿಗೆ ಡಿ.ಲಿಟ್ ಗೌರವ ಸಿಕ್ಕಿದ್ದು ಅವರಿಗೆ. 2013ರಲ್ಲಿ ಅವರಿಗೆ ಸಾಹಿತ್ಯ ಅಕಾಡೆಮಿ ಗೌರವ ಲಭಿಸಿತ್ತು.
ಇದನ್ನೂ ಓದಿ:ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ