ನವದೆಹಲಿ:ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಅಶಿಮ್ ಬ್ಯಾನರ್ಜಿ ಕೋವಿಡ್ 19 ಸೋಂಕಿನಿಂದ ಶನಿವಾರ(ಮೇ 15) ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚುನಾವಣಾ ಶಾಖೆಯ ಶಿರಸ್ತೇದಾರರಾಗಿದ್ದ ನಾಗನೂರಿ ಕೋವಿಡ್ ಗೆ ಬಲಿ
ಮಾಧ್ಯಮಗಳ ವರದಿ ಪ್ರಕಾರ, ಅಶಿಮ್ ಬ್ಯಾನರ್ಜಿ ಕೋಲ್ಕತಾದ ಮೇದಿಕಾ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲದಿಂದ ಕೋವಿಡ್ 19 ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಶಿಮ್ ಕೊನೆಯುಸಿರೆಳೆದಿರುವುದಾಗಿ ವರದಿ ಹೇಳಿದೆ.
ಪಶ್ಚಿಮಬಂಗಾಳದಲ್ಲಿ ಶುಕ್ರವಾರ ದಾಖಲೆಯ 20,846 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 10,94,802ಕ್ಕೆ ಏರಿಕೆಯಾಗಿದೆ.
ಪಶ್ಚಿಮಬಂಗಾಳದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 12,993ಕ್ಕೆ ಏರಿಕೆಯಾಗಿದೆ. ಶುಕ್ರವಾರ 136 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದರು ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನಲ್ಲಿ ತಿಳಿಸಿತ್ತು.