Advertisement

ನಾರದ ಸ್ಟಿಂಗ್ ಪ್ರಕರಣ : ಟಿಎಂಸಿ ಮುಖಂಡರಿಗೆ ಜಾಮೀನು ನೀಡಿದ ಸಿಬಿಐ ನ್ಯಾಯಾಲಯ

08:18 PM May 17, 2021 | Team Udayavani |

ನವ ದೆಹಲಿ : ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ನಾಲ್ವರು ಟಿಎಂಸಿ ಮುಖಂಡರಿಗೆ ಸೋಮವಾರ (ಮೇ 17) ಸಂಜೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

Advertisement

ಕೋಲ್ಕತ್ತಾದ ಬ್ಯಾಂಕ್‌ ಶಾಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ಸಿಬಿಐ ವಿಶೇಷ ನ್ಯಾಯಾಧೀಶರಾದ ಅನುಪಮ್ ಮುಖರ್ಜಿ ಅವರು ಮಂತ್ರಿಗಳಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್, ಶಾಸಕ ಮದನ್ ಮಿತ್ರ ಮತ್ತು ಮಾಜಿ ಸಚಿವ ಸೋವನ್ ಚಟರ್ಜಿ ಅವರಿಗೆ ಜಾಮೀನು ನೀಡಿದ್ದಾರೆ.

ಇದನ್ನೂ ಓದಿ : ಆಧುನಿಕ ಕೃಷಿಯಲ್ಲಿ ಸ್ಮಾರ್ಟ್ ತಂತ್ರಜ್ಞಾನಗಳ ಬಳಕೆ

ನಾಲ್ವರನ್ನೂ ಕೂಡ ಇಂದು(ಸೋಮವಾರ, ಮೇ.17) ಬೆಳಿಗ್ಗೆ ತಮ್ಮ ಮನೆಗಳಿಂದ ಬಂಧಿಸಿದ ನಂತರ ನಿಜಾಮ್ ಅರಮನೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ಇರಿಸಲಾಗಿತ್ತು.

ಕೋಲ್ಕತ್ತದಾ ಬ್ಯಾಂಕ್ ಶಾಲ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನಂತರ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಇದಕ್ಕೂ ಮೊದಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಯ ಎದುರಿಗೆ ಪಕ್ಷದ ನಾಲ್ವರು ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ಇನ್ನು,  ಟಿಎಂಸಿ ಪಕ್ಷದ ಬೆಂಬಲಿಗರು ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಂಧನವನ್ನು ವಿರೋಧಿಸಿ  ಸಿಬಿಐ ಕಚೇರಿಯ ಹೊರಗೆ ಭದ್ರತಾ ಸಿಬ್ಬಂದಿಗೆ ಕಲ್ಲು ತೂರಾಟ ಮಾಡಿದರು. ಹುಗ್ಲಿ, ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಪ್ರತಿಭಟನಾಕಾರರು ಟೈರ್‌ ಗಳನ್ನು ಸುಟ್ಟು ರಸ್ತೆಗಳನ್ನು ತಡೆ ಹಿಡಿದಿರುವ ಘಟನೆಯೂ ನಡೆಯಿತು.

ಇದನ್ನೂ ಓದಿ : ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಏನನ್ನೂ ಮಾಡ್ತಿಲ್ಲ : ಉಗ್ರಪ್ಪ

Advertisement

Udayavani is now on Telegram. Click here to join our channel and stay updated with the latest news.

Next