ಕೋಲ್ಕತಾ : ಅಲ್-ಖೈದಾ ಭಾರತೀಯ ಉಪಖಂಡ (AQIS) ಮತ್ತು ಅನ್ಸರುಲ್ಲಾ ಬಾಂಗ್ಲಾ ತಂಡದ ಸದಸ್ಯ ನೊಬ್ಬನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Advertisement
ಬಂಧಿತ ಪಶ್ಚಿಮ ಬಂಗಾಳದ 20 ವರ್ಷ ವಯಸ್ಸಿನ ಮೊನಿರುದ್ದೀನ್ ಖಾನ್ ಎಂಬಾತನಾಗಿದ್ದು, ಅಲ್-ಖೈದಾ ಭಾರತೀಯ ಉಪಖಂಡ ಮತ್ತು ಅನ್ಸರುಲ್ಲಾ ಬಾಂಗ್ಲಾ ತಂಡದ ಸದಸ್ಯನಾಗಿ ಸಂಘಟನೆಗೆ ಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದ್ದ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಬಂಧಿತನನ್ನು ಕೋಲ್ಕತಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ನವೆಂಬರ್ 14 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಎಸ್ಟಿಎಫ್, ಪೊಲೀಸರು ತಿಳಿಸಿದ್ದಾರೆ.