Advertisement

ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಿ

04:17 PM Aug 18, 2019 | Suhan S |

ಮದ್ದೂರು: ಗ್ರಾಪಂ ಪಿಡಿಒಗಳು ಪ್ರತಿ ಮನೆ ಮನೆಗೆ ತೆರಳಿ ಕಂದಾಯ ಅದಾಲತ್‌ ಮೂಲಕ ತೆರಿಗೆ ವಸೂಲಾತಿಗೆ ಮುಂದಾಗಬೇಕೆಂದು ತಾಪಂ ಉಪಾಧ್ಯಕ್ಷ ಬಿ.ಎಂ.ರಘು ತಿಳಿಸಿದರು.

Advertisement

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ವೇಳೆ ಮಾತನಾಡಿದರು.

ಕೋಟ್ಯಂತರ ರೂ. ಬಾಕಿ: ತಾಲೂಕಿನ ವಳಗೆರೆಹಳ್ಳಿ, ಕಾಡುಕೊತ್ತನಹಳ್ಳಿ, ಡಿ.ಎ.ಕೆರೆ, ಗೆಜ್ಜಲಗೆರೆ, ಕೊಪ್ಪ, ನಗರಕೆರೆ, ಚಾಮನಹಳ್ಳಿ, ಬೆಸಗರಹಳ್ಳಿ, ಕದಲೂರು, ಆಲೂರು, ಹೊಸಕೆರೆ ಹಾಗೂ ಭಾರತಿನಗರ ಗ್ರಾಪಂ ಗಳಲ್ಲಿ ಕಂದಾಯ ವಸೂಲಾತಿಯಾಗದೆ ಕೋಟ್ಯಂತರ ರೂ. ಬಾಕಿ ಉಳಿದಿದ್ದು ಕೂಡಲೇ ಪಿಡಿಒಗಳು ಸಿಬ್ಬಂದಿಗಳ ಜತೆಗೂಡಿ ಮನೆ ಮನೆಗೆ ತೆರಳಿ ಕಂದಾಯ ವಸೂಲಾತಿಗೆ ಮುಂದಾಗಬೇಕೆಂದರು.

ಕ್ರಮವಹಿಸಿ: ಭಾರತಿನಗರ ಗ್ರಾಪಂ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಅಂಗಡಿ ಮಳಿಗೆ ಗಳಿದ್ದು ಕೇವಲ 150 ಮಂದಿ ಪರವಾನಗಿ ಪಡೆದಿದ್ದಾರೆ. ಉಳಿಕೆ ಪರವಾನಗಿ ಪಡೆದಿರುವ ಅಂಗಡಿ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ತಿಳಿಸಿದ ರಲ್ಲದೇ ಪ್ರತಿಯೊಬ್ಬರೂ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮವಹಿಸಬೇಕೆಂದರು.

ಅಭಿವೃದ್ಧಿಗೆ ಮುಂದಾಗಿ: ತಾಲೂಕಿನ ಸೋಮನಹಳ್ಳಿ, ಗೆಜ್ಜಲಗೆರೆ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶವಾಗಿದ್ದರೂ ಕರ ನಿಗದಿ ಮಾಡದೆ ಆರ್ಥಿಕವಾಗಿ ಹಿಂದುಳಿದಿದ್ದು ಕೂಡಲೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿ ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಹೇಳಿದರು.

Advertisement

ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಗೆ 1.5 ಕೋಟಿ ರೂ. ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು ಪಿಡಿಒ ಗಳು ಗ್ರಾಮಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ಕ್ರಿಯಾ ಯೋಜನೆ ಸಲ್ಲಿಸುವಂತೆ ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಸಭೆ ವೇಳೆ ತಿಳಿಸಿದರು.

ಶುಚಿತ್ವಕ್ಕೆ ಒತ್ತು ನೀಡಿ: ಕೆಲ ಗ್ರಾಮಗಳಲ್ಲಿ ಜಾನುವಾರು ತೊಟ್ಟಿ ನಿರ್ಮಿಸಿರುವ ಸ್ಥಳಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಮಳೆಗಾಲ ಸಮೀಪಿಸಿರುವುದರಿಂದ ಸೊಳ್ಳೆ ಗಳ ಉತ್ಪಾದನಾ ಕೇಂದ್ರವಾಗಿ ಮಲೇರಿ ಯಾ, ಚಿಕೂನ್‌ಗುನ್ಯ, ಡೆಂಘೀ ಸೇರಿದಂತೆ ಇನ್ನಿತರೆ ರೋಗ ಹರಡುವ ಭೀತಿಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಮಿನಾಶಕ ಸಿಂಪಡಣೆ ಮಾಡಿ ಗ್ರಾಮದ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು.

ಅಭಿವೃದ್ಧಿಗೆ ಹಣ ಬಳಸಿ:ತಾಲೂಕಿನ ಆತ ಗೂರು, ಅಣ್ಣೂರು, ಎಸ್‌. ಐ. ಹೊನ್ನಲಗೆರೆ, ಹೆಮ್ಮನಹಳ್ಳಿ, ಮರಳಿಗ, ಕೆ.ಶೆಟ್ಟಹಳ್ಳಿ, ಹೊಸಕೆರೆ ಹಾಗೂ ಬಿದರಕೋಟೆ ಗ್ರಾಮಗಳು ನರೇಗಾ ಯೋಜನೆಯಡಿ ಶೇ.100 ಅಭಿವೃದ್ಧಿ ಕಾಮಗಾರಿಗೆ ಹಣವನ್ನು ವಿನಿಯೋಗಿ ಸಿರುವುದು ಶ್ಲಾಘನೀಯ. ಕೂಡಲೇ ನರೇಗಾ ಯೋಜನೆ ಹಣ ಸದುಪಯೋಗ ಪಡಿಸಿ ಕೊಂಡು ರಸ್ತೆ, ಚರಂಡಿ, ಇನ್ನಿತರೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ತರಾಟೆ: ಕೆಲ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ವೇತನ ನೀಡದ ಪಿಡಿಒಗಳ ವಿರುದ್ಧ ಉಪಾಧ್ಯಕ್ಷ ಬಿ.ಎಂ.ರಘು ತರಾಟೆಗೆ ತೆಗೆದುಕೊಂಡರಲ್ಲದೇ ಕಳೆದ 15 ತಿಂಗಳಿಂದಲೂ ವೇತನ ಪಾವತಿಸದೆ ನಿರ್ಲಕ್ಷ್ಯ ವಹಿಸಿ ಶೋಷಣೆ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ತಾಪಂ ಇಒ ಮುನಿರಾಜು ಅವರಿಗೆ ಸೂಚಿಸಿದರು.

ಪ್ರತಿ ತಿಂಗಳು ನೌಕರರಿಗೆ ವೇತನ ಸಮ ರ್ಪಕವಾಗಿ ವಿತರಿಸುವಂತೆ ಜತೆಗೆ ಗ್ರಾಪಂ ಅಭಿವೃದ್ಧಿ ಕಾರ್ಯದಲ್ಲಿ ಅವರನ್ನು ಉಪ ಯೋಗಿಸಿಕೊಂಡು ಅಭಿವೃದ್ಧಿ ಕಾಮಗಾರಿ, ಕಂದಾಯ ವಸೂಲಾತಿಗೆ ಮುಂದಾಗ ಬೇಕೆಂದು ತಿಳಿಸಿದರು. ಸಭೆ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌, ಜಿಪಂ ಸದಸ್ಯ ಮರಿಹೆಗಡೆ, ತಾಪಂ ಇಒ ಮುನಿರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next