Advertisement
ಹೊಸ ಐಸಿಯುವನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸ ಲಾಗಿದೆ. ಹೊಸ ಐಸಿಯು ಘಟಕ ದಲ್ಲಿ ಸದ್ಯಕ್ಕೆ ಅಗತ್ಯ ಬಿದ್ದರೆ ಕೊರೊನಾ ಸೋಂಕಿತ ರಿಗೆ ಚಿಕಿತ್ಸೆ ನೀಡಲಾಗುವುದು. ಮುಂದೆ ಅದು ವೆನ್ಲಾಕ್‌ನ ಇತರ ರೋಗಿಗಳ ಚಿಕಿತ್ಸೆಗೆ ಬಳಕೆಯಾಗಲಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ವೆನ್ಲಾಕ್‌ನಲ್ಲಿ ಸದ್ಯ ಮಕ್ಕಳ ವಿಭಾಗ ಹೊರತು ಪಡಿಸಿದರೆ 20 ವೆಂಟಿಲೇಟರ್‌ಗಳು ಲಭ್ಯವಿವೆ. ಮತ್ತೆ 30 ವೆಂಟಿಲೇಟರ್‌ಗಳಿಗೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ದೊರೆಯುವ ನಿರೀಕ್ಷೆ ಇದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement