Advertisement

ಶಿವಕುಮಾರ ಸ್ವಾಮೀಜಿ ರಥಯಾತ್ರೆಗೆ ಪೂರ್ಣಕುಂಭ ಸ್ವಾಗತ

12:31 PM Mar 11, 2017 | Team Udayavani |

ಮೈಸೂರು: ಪದ್ಮವಿಭೂಷಣ ಡಾ.ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವದ ಪ್ರಯುಕ್ತ ರಾಜಾÂದ್ಯಂತ ಸಂಚರಿಸುತ್ತಿರುವ ರಥಯಾತ್ರೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದು, ಶುಕ್ರವಾರ ನಗರದೆಲ್ಲೆಡೆ ಸಂಚರಿಸಿತು. ರಥವನ್ನು ವೀರಶೈವ ಸಮುದಾಯದ ಪ್ರಮುಖರು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ, 110 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.

Advertisement

ನಗರಕ್ಕಾಗಮಿಸಿದ ರಥ ಶುಕ್ರವಾರ ಕುವೆಂಪುನಗರದ ಡಾ.ಶಿವಕುಮಾರಸ್ವಾಮೀಜಿ ವೃತ್ತ, ವಿವೇಕಾನಂದ ವೃತ್ತ, ಅರವಿಂದನಗರ, ಶ್ರೀರಾಂಪುರ, ತಳೂರು ವೃತ್ತ, ತಳೂರು, ಸಿಂಧುವಳ್ಳಿ, ಬ್ಯಾತಳ್ಳಿ, ನೂರೊಂದು ಗಣಪತಿ ವೃತ್ತದಿಂದ ಬಸವೇಶ್ವರ ಪುತ್ಥಳಿ, ರಾಮಾನುಜ ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಂಚರಿಸಿದ ರಥಯಾತ್ರೆ ಸಂಜೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠವನ್ನು ಪ್ರವೇಶಿಸಿತು.

ಮಠದಲ್ಲಿ ಸ್ವಾಗತ: ಸುತ್ತೂರು ಮಠದ ಆವರಣವನ್ನು ಪ್ರವೇಶಿಸಿದ ರಥಯಾತ್ರೆಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು. ಇದಾದ ಬಳಿಕ ಮಠದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹೊಸಮಠದ ಚಿದಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ,

ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಉಪ ಮೇಯರ್‌ ರತ್ನಲಕ್ಷ್ಮಣ್‌ ಇನ್ನಿತರರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಾಹಿತಿ ಪೊ›.ಮಲೆಯೂರು ಗುರುಸ್ವಾಮಿ, ಸಿದ್ಧಗಂಗಾ ಮಠದ ಧಾರ್ಮಿಕ ಪರಂಪರೆ, ಡಾ. ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next