ಬೆಂಗಳೂರು: ದೇಶದೆಲ್ಲೆಡೆ ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ಧಾರೆ.
ನವ ಭಾರತ ನಿರ್ಮಾಣಕ್ಕೆ 130 ಕೋಟಿ ಜನ ಕೈಜೋಡಿಸಬೇಕು. ನೀವು ಕೈಜೋಡಿಸುತ್ತೀರಿ ಎಂಬ ಅದಮ್ಯ ವಿಶ್ವಾಸವಿದೆ. ಎಲ್ಲರಿಗೂ ಹೊಸವರ್ಷ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಭಾರತದ ರಾಜಧಾನಿ ದೆಹಲಿ ಸೇರಿದಂತೆ ಬೆಂಗಳೂರು ಮುಂಬೈ, ಹೈದರಾಬಾದ್ ಮತ್ತು ಇತರೆ ಪ್ರದೇಶಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ವಿವಿಧೆಡೆಗಳಲ್ಲಿ ಕ್ಕಿಕ್ಕಿರಿದು ತುಂಬಿದ್ದ ಯುವಜನತೆ ಹ್ಯಾಪಿ ನ್ಯೂ ಇಯರ್ ಘೋಷಣೆಗಳ ಮೂಲಕ 2020ಕ್ಕೆ ಸ್ವಾಗತ ಕೋರಿದರು.
ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಯುವಕ-ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಮಾತ್ರವಲ್ಲದೆ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ.
ಮುಂಬೈನ ಗೇಟ್ ಆಫ್ ಇಂಡಿಯಾದ, ಶಿಮ್ಲಾ ಸೇರಿದಂತೆ ದೆಹಲಿ, ಪಂಜಾಬ್, ಮುಂಬೈ, ಗೋವಾ, ಕೇರಳದ ಬೀಚ್‍ಗಳು, ಚೆನ್ನೈ, ಕೋಲ್ಕತ್ತಾ, ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ಎಲ್ ಒಸಿಯಲ್ಲಿ ಸೈನಿಕರು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.