Advertisement

‘ಮಹಾ’ ಗಡಿ‌ ದಾಟಿ ಪರೀಕ್ಷೆ ಬರೆಯಲು ಬಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ವಾಗತ

12:26 PM Jul 19, 2021 | Team Udayavani |

ಚಿಕ್ಕೋಡಿ: ಕೋವಿಡ್ ಮಹಾಮಾರಿ ಆತಂಕದ ಮಧ್ಯೆಯೂ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸಿದ ರಾಜ್ಯದ ಗಡಿ ಆಚೆ ಇರುವ ಮಕ್ಕಳನ್ನು ರಾಜ್ಯದ ಚೆಕ್ ಪೋಸ್ಟ್ ಬಳಿ ಶಿಕ್ಷಣ ಇಲಾಖೆ ಮಾಸ್ಕ್, ಸ್ಯಾನಿಟೈಸರ್ ಗುಲಾಬಿ ಹೂ ಹಾಗೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳನ್ನು ಸ್ವಾಗತಿಸಿಕೊಂಡರು.

Advertisement

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ-ಇಚಲಕರಂಜಿ ಗಡಿ ಚೆಕ್ ಪೋಸ್ಟ್ ಬಳಿ ರಾಜ್ಯದ ಗಡಿ ಆಚೆ ಇರುವ ಮಕ್ಕಳು ಪರೀಕ್ಷೆಗೆ ಹಾಜರಾಗಲು ಗಡಿ ಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಶಿಕ್ಷಣ ಇಲಾಖೆ  ಉಪನಿರ್ದೇಶಕ ಗಜಾನನ ಮನ್ನಿಕೇರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಸುವ್ಯವಸ್ಥಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕಳಿಸಿಕೊಟ್ಟರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಂಟು ವಲಯದಲ್ಲಿ ಸುಮಾರು 45 ಸಾವಿರ ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಶಾಂತಿ ಸುವಸ್ಥಿತವಾಗಿ ಪರೀಕ್ಷೆ ನಡೆಯಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next