ಉಡುಪಿ: ರಾಜ್ಯಸಭೆಗೆ ಕರ್ನಾಟಕದಿಂದ ಯಾರು ಬೇಕಾದರೂ ಸ್ಪರ್ಧಿಸಬಹುದು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೂ ಸ್ವಾಗತ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Advertisement
ಪ್ರಿಯಾಂಕಾ ಅವರ ಅಜ್ಜಿ, ಅಮ್ಮನನ್ನು ರಾಜ್ಯದಲ್ಲಿ ಸ್ವಾಗತಿಸಿದ್ದೇವೆ. ಇಂದಿರಾ ಗಾಂಧಿ, ಅನಂತರ ಸೋನಿಯಾ ಗಾಂಧಿ ಕೂಡ ರಾಜ್ಯದಿಂದ ಸ್ಪರ್ಧೆ ಮಾಡಿದ್ದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಉತ್ತರಪ್ರದೇಶದಲ್ಲೂ ಪರಿಸ್ಥಿತಿ ಹೀಗೇ ಆಗಿದ್ದು, ಕಾಂಗ್ರೆಸನ್ನು ಮೇಲೆತ್ತಲು ಪ್ರಿಯಾಂಕಾ ಹೋಗಿದ್ದರು.
ಈಗ ಅದೇ ರೀತಿ ಕರ್ನಾಟಕಕ್ಕೆ ಬರುತ್ತಿರಬಹುದು ಎಂದು ಶನಿವಾರ ಅವರು ಹೇಳಿದರು.