Advertisement

ಲಂಡನ್‌ನಲ್ಲಿ ಬಸವೇಶ್ವರನಿಗೆ ನಮನ ;ಮೋದಿ ಪುಷ್ಪಾರ್ಚನೆ

06:00 AM Apr 19, 2018 | |

ಲಂಡನ್‌: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವಗಳು ವಿಶ್ವಾದ್ಯಂತ ಜನರನ್ನು ಸ್ಫೂರ್ತಿಗೊಳಿಸುತ್ತಿವೆ. ಬಸವೇಶ್ವರರಿಗೆ ನಮನ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಲಂಡನ್‌ನಲ್ಲಿ ಹೇಳಿದ್ದು, ಅಲ್ಲಿನ ಸಂಸತ್‌ ಭವನದ ಎದುರು ಸ್ಥಾಪಿಸಲಾಗಿರುವ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನಗೈದರು. ಬಸವೇಶ್ವರರ 885ನೇ ಜನ್ಮದಿನದ ಪ್ರಯುಕ್ತ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಅವರು ಟ್ವೀಟ್‌ ಕೂಡ ಮಾಡಿದ್ದಾರೆ. ಅಲ್ಲದೆ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ಥೇಮ್ಸ್‌ ನದಿ ತಟದಲ್ಲಿ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದ ಬಸವಣ್ಣನವರ ಪ್ರತಿಮೆಯನ್ನು ಕಳೆದ ವರ್ಷ ಪ್ರಧಾನಿ ಮೋದಿ ಸ್ವತಃ ಅನಾವರಣಗೊಳಿಸಿದ್ದರು.

Advertisement

ಮೋದಿ-ಮೇ ಮಾತುಕತೆ: ಐರೋಪ್ಯ ಒಕ್ಕೂಟವನ್ನು ತೊರೆದ ನಂತರ ಇಂಗ್ಲೆಂಡ್‌ ಮೇಲೆ ಭಾರತದ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಇಂಗ್ಲೆಂಡ್‌ ಪ್ರಧಾನಿ ಥೆರೇಸಾ ಮೇಗೆ ಭರವಸೆ ನೀಡಿದ್ದಾರೆ. ಉಭಯ ದೇಶಗಳ ವ್ಯಾಪಾರ ವಹಿವಾಟು ಗಳು, ಭದ್ರತಾ ವ್ಯವಸ್ಥೆ, ಆನ್‌ಲೈನ್‌ ತೀವ್ರಗಾಮಿ ಚಟುವಟಿಕೆಗಳು ಸೇರಿ ಹಲವು ವಿಷಯಗಳ ಬಗ್ಗೆ ಲಂಡನ್‌ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿ ದರು. ಕಾನೂನು ವಿಚಾರಗಳು ಹಾಗೂ ಅಪರಾ ಧಿಗಳ ಗಡಿಪಾರು ವಿಚಾರಕ್ಕೆ ಸಂಬಂಧಿಸಿ ಸಹಕಾರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದರಿಂದಾಗಿ ಭಾರತದ ಕಾನೂ ನಿನ ಕೈಯಿಂದ ತಪ್ಪಿಸಿಕೊಂಡು ಲಂಡನ್‌ಗೆ ತೆರಳಿರುವ ಉದ್ಯಮಿ ವಿಜಯ್‌ ಮಲ್ಯ ಸೇರಿದಂತೆ ಹಲವರ ಗಡಿ ಪಾರು ಪ್ರಕ್ರಿಯೆ ಇನ್ನಷ್ಟು ಸರಳವಾಗುವ ಸಾಧ್ಯತೆಗಳಿವೆ. 

ತಂತ್ರಜ್ಞಾನ ಸಹಕಾರ
ಭಾರತದ ನಾಸ್‌ಕಾಮ್‌ ಹಾಗೂ ಇಂಗ್ಲೆಂಡ್‌ನ‌ ಟೆಕ್‌ ಯುಕೆ ತಂತ್ರಜ್ಞಾನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂ ದದ ಅಡಿ ಟೆಕ್‌ ಹಬ್‌ ಸ್ಥಾಪಿಸಲಾ ಗುತ್ತದೆ. ಅಲ್ಲದೆ ಭಾರತ ಮತ್ತು ಇಂಗ್ಲೆಂ ಡ್‌ನ‌ ಸಂಸ್ಥೆಗಳು ತಂತ್ರಜ್ಞಾನ ವಿನಿಮಯ ಸುಲಭವಾಗಲಿದೆ. ಇದ ರಿಂದ ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. 2016ರಲ್ಲಿ ಮೊದಲು ಈ ಕಲ್ಪನೆ ಮೂಡಿತ್ತಾದರೂ, ಈಗ ಇದು ಜಾರಿಗೆ ಬಂದಿದೆ. 

ಸದಸ್ಯತ್ವಕ್ಕೆ ಬೆಂಬಲ
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕಾಗಿ ಭಾರತವನ್ನು ಬೆಂಬಲಿಸಲು ಸ್ವೀಡನ್‌ ಸೇರಿದಂತೆ ಹಲವು ದೇಶಗಳು ಬೆಂಬಲ ವ್ಯಕ್ತ ಪಡಿಸಿವೆ. ಇಂಡೋ-ನಾರ್ಡಿಕ್‌ ಸಮ್ಮೇಳನ ದಲ್ಲಿ ಮೋದಿ ಭಾಗವಹಿಸಿದ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ, ಸ್ವೀಡನ್‌, ಡೆನ್ಮಾರ್ಕ್‌, ಐಸ್‌ಲ್ಯಾಂಡ್‌, ನಾರ್ವೆ, ಫಿನ್ಲಂಡ್‌ ಬೆಂಬಲ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಪರಮಾಣು ಪೂರೈ ಕೆದಾರರ ಸಮೂಹಕ್ಕೆ (ಎನ್‌ಎಸ್‌ಜಿ) ಭಾರತದ ಸದಸ್ಯತ್ವವನ್ನೂ ಈ ದೇಶಗಳು ಬೆಂಬಲಿಸಿವೆ.

ಆಯುರ್ವೇದ ಕೇಂದ್ರ
ಲಂಡನ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸ ಲಾದ ಆಯುರ್ವೇದ ಪರಿಣಿತಿ ಕೇಂದ್ರವನ್ನು ಪ್ರಿನ್ಸ್‌ ಚಾರ್ಲ್ಸ್‌ ಜೊತೆಗೂಡಿ ಮೋದಿ ಉದ್ಘಾಟಿಸಿದ್ದಾರೆ. ಯೋಗ ಹಾಗೂ ಆಯುರ್ವೇದಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಸಾಕ್ಷ್ಯ ಆಧರಿತ ಸಂಶೋಧನೆ ನಡೆ ಸುವ ಕೇಂದ್ರ ಇದಾಗಿದೆ. ಇದಕ್ಕೂ ಮುನ್ನ ಮೋದಿ ಹಾಗೂ ರಾಜಕುಮಾರ ಚಾರ್ಲ್ಸ್‌ 5000 ವರ್ಷ ಗಳ ವಿಜ್ಞಾನ ಮತ್ತು ನಾವೀನ್ಯತೆಯ ದಾಖಲೆಯ ನ್ನೊಳಗೊಂಡ ವಿಜ್ಞಾನ ಮ್ಯೂಸಿಯಂಗೆ ಭೇಟಿ ನೀಡಿದ್ದರು.

Advertisement

ಭಾರತ್‌ ಕಿ ಬಾತ್‌ ಸಬ್‌ ಕೆ ಸಾಥ್‌
ನನ್ನ ಜೀವನ ರೈಲ್ವೆ ಸ್ಟೇಷನ್‌ನಿಂದ ಆರಂಭವಾಯಿತು. ರೈಲ್ವೆ ಸ್ಟೇಷನ್‌ ನನಗೆ ಜೀವನ ಪಾಠ ಕಲಿಸಿತು ಎಂದು ಪ್ರಧಾನಿ ಮೋದಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ನಲ್ಲಿ ಬುಧವಾರ ರಾತ್ರಿ ಭಾರತ್‌ ಕಿ ಬಾತ್‌ ಸಬ್‌ ಕೆ ಸಾಥ್‌ ಎಂಬ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅಂದು ರೈಲು ನಿಲ್ದಾಣದಲ್ಲಿ ಇದ್ದ ವ್ಯಕ್ತಿ ನರೇಂದ್ರ ಮೋದಿ ಆಗಿದ್ದರು. ಇಂದು ಲಂಡನ್‌ನ ರಾಯಲ್‌ ಪ್ಯಾಲೇಸ್‌ನಲ್ಲಿ ನಿಂತಿರುವ ವ್ಯಕ್ತಿ 125 ಕೋಟಿ ಭಾರತೀಯರ ಸೇವಕ ಎಂದೂ ಮೋದಿ ಇದೇ ವೇಳೆ ತಿಳಿಸಿದ್ದಾರೆ. ಅನಿವಾಸಿ ಭಾರತೀಯರೊಂದಿಗೆ ಈ ಕಾರ್ಯಕ್ರಮದಲ್ಲಿ ಮೋದಿ ಸಂವಾದ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 1500 ಜನರು ಭಾಗವಹಿಸಿದ್ದರು. ಇಲ್ಲಿ “ಬದ್ಲಾವ್‌ ಔರ್‌ ಬೇಸಬ್ರಿ’ 
ಎಂಬ ವಿಡಿಯೋವನ್ನೂ ಪ್ರದರ್ಶಿಸಲಾಯಿತು. ಕಾರ್ಯಕ್ರಮವನ್ನು ಸೆನ್ಸಾರ್‌ ಮಂಡಳಿ ಮುಖ್ಯಸ್ಥ ಪ್ರಸೂನ್‌ ಜೋಷಿ ನಿರೂಪಿಸಿದರು. ಭಾರತೀಯರಲ್ಲಿ ಉತ್ಸಾಹ, ಹುಮ್ಮಸ್ಸು ಕಾಣಿಸುತ್ತಿದೆ. ಈ ಹಿಂದೆ ಭಾರತೀಯರಲ್ಲಿ ನಿರಾಸೆ ಮೂಡಿತ್ತು . ಜನರು ಇಷ್ಟು ಬೇಗ ದೇಶ ಬದಲಾಗುತ್ತದೆ ಎಂದು ಭಾವಿಸಿರಲಿಲ್ಲ. ನಾವು ಎಲ್ಲ ಕೆಲಸವನ್ನೂ ಮೂರು ಪಟ್ಟು ಹೆಚ್ಚು ವೇಗಗೊಳಿಸಿದ್ದೇವೆ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೂ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಈ ಹಿಂದೆ ಸ್ವಲ್ಪ ಬದಲಾವಣೆ ಯಾದರೂ ಜನರು ಖುಷಿಯಾಗುತ್ತಿದ್ದರು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next