Advertisement
ಕ್ಯಾಲೆಂಡರ್ ವರ್ಷನಾನು ಕೃಷಿಕ. ಆದ್ದರಿಂದ, ಹೊಸ ವರ್ಷವನ್ನು ಹೆಚ್ಚೇನೂ ಸಂಭ್ರಮದಿಂದ ಆಚರಿಸುವುದಿಲ್ಲ. ಹಾಗಂತ ಹೊಸವರ್ಷದ ಬಗ್ಗೆ ಕಲ್ಪನೆಗಳೇ ಇಲ್ಲವೆಂದಲ್ಲ. ಕಳೆದ ವರ್ಷದ ಮಳೆಗೆ ತೋಟ ಹಾಳಾಗಿತ್ತು. ಆದ್ದರಿಂದ ಈ ವರ್ಷವಾದರೂ ಮಳೆಬೆಳೆ ಚೆನ್ನಾಗಿ ಆದೀತೇನೋ ಎಂಬ ನಿರೀಕ್ಷೆ ಇದೆ.
ಅವಿನಾಶ್ ಭಿಡೆ, ಶಿಶಿಲ
Related Articles
ಹೊಸವರ್ಷವೆಂದರೆ ನಾನಂತೂ ಬಹಳ ಸಂಭ್ರಮಿಸುತ್ತೇನೆ. ನನ್ನ ಸ್ನೇಹಿತೆಯರೊಡನೆ ಗಮ್ಮತ್ ಮಾಡುವುದು ತುಂಬ ಇಷ್ಟ. ಗಮ್ಮತ್ ಎಂದರೆ ಹೊಸವರ್ಷದ ನೆಪದಲ್ಲಿ ಎಲ್ಲರೂ ಕುಳಿತು ಪಟ್ಟಾಂಗ ಹೊಡೆಯುತ್ತ ತಿಂಡಿ ತಿನ್ನುವುದು, ಒಂದು ರೌಂಡ್ ಡಾನ್ಸ್ ಮಾಡುವುದು. ನಾನು ಭರತನಾಟ್ಯ ಕಲಾವಿದೆಯಾದ್ದರಿಂದ ನೃತ್ಯಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ.
Advertisement
ಹೊಸವರ್ಷವೆಂದರೆ ಪರೀಕ್ಷೆಗಳು ಶುರು ಎಂದೇ ಅರ್ಥ ಅಲ್ಲವೆ? ಇನ್ನಾದರೂ ಬಹಳ ಸೀರಿಯಸ್ಸಾಗಿ ಓದಬೇಕು ಎಂದು ಮತ್ತೂಮ್ಮೆ ನಿರ್ಧಾರ ಮಾಡುವುದು, ಮೊಬೈಲ್ ನೋಡುವುದನ್ನು ಆದಷ್ಟು ಕಡಿಮೆ ಮಾಡುವುದು, ಎಲ್ಲ ನೋಟ್ಸ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು- ಹೀಗೆಲ್ಲ ಅನೇಕ ನಿರ್ಧಾರಗಳನ್ನು ಮಾಡುತ್ತಲೇ ಇರುತ್ತೇನೆ.
ಸ್ನೇಹಿತರ ವಲಯಕ್ಕೆ ಶುಭಾಶಯ ಹೇಳುತ್ತ ಜನವರಿ 1ರಂದು ಖುಷಿಯಾಗಿರುವುದೇ ಹೊಸ ವರ್ಷಆಚರಣೆ. ನಾನಂತೂ ಸ್ನಾತಕೋತ್ತರ ಪದವಿ ಓದುತ್ತಿರುವುದರಿಂದ ಹೊಸವರ್ಷದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡು, ಜನವರಿ 1ನ್ನು ಸ್ವಾಗತಿಸಿದ್ದೇನೆ.ಪೃಥ್ವೀ, ಬೋಂದೆಲ್ ದೇವರಿಗೆ ಪ್ರಾರ್ಥನೆ
ಹೊಸವರ್ಷವೆಂದರೆ ಪಾರ್ಟಿ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ, ಪೇಟೆಯಲ್ಲಿರುವ ಕೇವಲ ಒಂದು ವರ್ಗದ ಜನತೆ ಮಾತ್ರ ಆಚರಿಸುವ ರೀತಿ. ಆದರೆ, ಅಂತಹ ಆಚರಣೆಗೇ ಹೆಚ್ಚು ಪ್ರಚಾರ ಸಿಗುತ್ತದೆ. ನಾವು ಹೊಸವರ್ಷವನ್ನು ಚರ್ಚ್‌ನಲ್ಲಿ ದೇವರ ಪ್ರಾರ್ಥನೆಯೊಂದಿಗೆ ಬರಮಾಡಿಕೊಳ್ಳುತ್ತೇವೆ. ಶಿರ್ತಾಡಿಯ ಮೌಂಟ್‌ಕಾರ್ಮೆಲ್‌ಚರ್ಚ್‌ನಲ್ಲಿ ರಾತ್ರಿ ಏಳುಗಂಟೆಗೇ ಪ್ರಾರ್ಥನೆ ಪೂಜೆ ಮಾಡಿ ಬಳಿಕ ಉಲ್ಲಾಸದ ಕಾರ್ಯಕ್ರಮವನ್ನು ಆಯೋಜಿಸಿದೆವು. ಸಣ್ಣಸಣ್ಣ ಆಟಗಳನ್ನು ಆಯೋಜಿಸಿ ಎಲ್ಲರೂ ಖುಷಿಯಿಂದ ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಪ್ರತಿವರ್ಷವೂ ನಡೆದುಕೊಂಡು ಬಂದ ಕ್ರಮ. ಹಿಂದೆಲ್ಲ ಅಜ್ಜನ ಪ್ರತಿಮೆ ತಯಾರಿಸಿ ಅದನ್ನು ಸುಟ್ಟು ಹೊಸ ವರ್ಷಕ್ಕೆ ಸ್ವಾಗತ ಕೋರುವ ಕ್ರಮವಿತ್ತು. ಆದರೆ, ಅದನ್ನು ಈಗ ಬದಲಾಯಿಸಿದ್ದೇವೆ. ಹಾಗೆಲ್ಲ ಅಜ್ಜನನ್ನು ಸುಡುವುದು ಸರಿಯಲ್ಲ ಎಂಬ ಕಾರಣಕ್ಕೆ ಸ್ವಾಗತ ಗೀತೆಗಳ ಮೂಲಕ ಹೊಸವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಶಿರ್ತಾಡಿ ಚರ್ಚ್‌ನಲ್ಲಿ ಭಾರತೀಯ ಕೆಥೋಲಿಕ್‌ಯುವಸಂಚಲನ ವತಿಯಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಎಲ್ಲರ ಮನೆಯಲ್ಲಿಯೂ ಹೊಸಬಟ್ಟೆ, ಹೊಸ ಊಟ ಜನವರಿ 1ರ ಸ್ಪೆಷಲ್.
ಜೈಸನ್ ಪಿರೇರಾ, ಶಿರ್ತಾಡಿ ಹೊಸ ವರ್ಷಕ್ಕೆ ಹೊಸ ಶಪಥ
ಹೊಸ ವರುಷದ ಆಗಮನದ ಖುಷಿಯಲ್ಲಿ ಎಲ್ಲರೂ ಮುಳುಗಿದ್ದರು. “ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಹೊಸ ವರುಷಕ್ಕೆ ಕೇವಲ 1 ಗಂಟೆ ಬಾಕಿ ಇದೆ, ಬಾಯ್ ಬಾಯ್ 2019, ಹೊಸವರುಷವನ್ನು ಆಗಮಿಸಲು ನಾವು ತಯಾರು’ ಎನ್ನುವ ಸ್ಟೇಟಸ್ ತುಂಬಿ ತುಳುಕಾಡುತ್ತಿತ್ತು. ಅದನ್ನೆಲ್ಲ ನೋಡಿದ ನಾನು, ನಮ್ಮ ಗೆಳತಿಯರದ್ದೊಂದು ಗ್ರೂಪ್ ಇದೆ, ಆ ಗ್ರೂಪ್‌ನಲ್ಲಿ ಒಂದು ಸಂದೇಶ ಕಳುಹಿಸಿದೆ. “ಹೊಸ ವರ್ಷಕ್ಕೆ ನಿಮ್ಮದೇನು ಯೋಜನೆ?’ ಎಂದು. ಅವರಿಬ್ಬರ ಉತ್ತರ ಒಂದೇ ಆಗಿತ್ತು. “ಯೋಜನೆ ಅಂತ ಏನು ಇಲ್ಲ , ಹಿಂದಿನ ವರುಷ ಹೇಳಿದ ಹಾಗೆ ಜೀವನಪೂರ್ತಿ ಖುಷಿ ಖುಷಿಯಾಗಿ ಇರಲಿ, ನೆಮ್ಮದಿ ಇದ್ದರೆ ಸಾಕು’ ಎಂದರು. ಹಾಗೆ, ನಮ್ಮ ಮೆಸೇಜು ಮುಂದುವರೆಯಿತು. ಹೊಸವರುಷದ ಆಗಮನಕ್ಕೆ ನಾವು ಮೂವರು ಏನಾದರೂ ಶಪಥ ಮಾಡಬೇಕಲ್ಲ ? ಕೆಲವರು 2019ರ ಕೊನೆಯ ದಿನ ಶಪಥ ಮಾಡ್ತಾರೆ “ಧೂಮಪಾನ ಬಿಟ್ಟುಬಿಡುತ್ತೇವೆ, ಇನ್ನು ಮುಂದೆ ತರಗತಿಗಳಿಗೆ ಬಂಕ್ ಹಾಕುವುದಿಲ್ಲ, ಮನೆಗೆ ತಡವಾಗಿ ಹೋಗುವುದಿಲ್ಲ’ ಎಂದು. ಹಾಗೆ ನಾವು ಕೂಡ ಯಾವುದಾದರೊಂದು ವಿಷಯಕ್ಕೆ ಶಪಥ ಮಾಡೋಣ ಎಂದುಕೊಂಡೆವು, ನಮ್ಮ ಕೈಯಲ್ಲಿ ಆಗದ್ದನ್ನು ಬಿಡಲು ಅಥವಾ ಅಳವಡಿಸಿಕೊಳ್ಳಲು ಕೊಂಚ ಕಷ್ಟ . ಹಾಗಾಗಿ, ನಮ್ಮಿಂದ ಸಾಧ್ಯವಾಗುವ ಸುಲಭವಾಗುವ ಸಣ್ಣ ವಿಷಯವನ್ನು ಆರಿಸಿಕೊಳ್ಳೋಣ ಎಂದು ಮೂವರೂ ಒಂದೊಂದು ವಿಷಯವನ್ನು ಯೋಚಿಸಲು ಶುರುಮಾಡಿದೆವು. ಗೆಳತಿ ಪಲ್ಲವಿ- “”ನಾವು ತರಗತಿಗಳಿಗೆ ಬಂಕ್ ಮಾಡುವುದನ್ನು ನಿಲ್ಲಿಸೋಣ” ಎಂದಳು. ಅದಕ್ಕೆ ನಾನು ಮತ್ತು ಅಂಕಿತಾ ಇಬ್ಬರೂ ಒಪ್ಪಲಿಲ್ಲ . ಯಾಕೆಂದರೆ, “”ಬಂಕ್ ಮಾಡುವುದು ನಮ್ಮ ಜನ್ಮಸಿದ್ಧ ಹಕ್ಕು, ಬೆಳಗ್ಗಿನಿಂದ ಸಂಜೆಯವರೆಗೆ ಕೂರಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ, ವಾರದಲ್ಲಿ ಒಂದೆರಡು ಬಂಕ್ ಬೇಕೇಬೇಕು” ಎಂದೆವು. ಇನ್ನೊಬ್ಬ ಗೆಳತಿ, “”ಹಾಗಾದ್ರೆ ಮುಂದಿನ ಪರೀಕ್ಷೆಯಲ್ಲಿ ನಮ್ಮಲ್ಲಿ ಸ್ಪರ್ಧೆ ಮಾಡೋಣ, ಯಾರಿಗೆ ಅಂಕ ಹೆಚ್ಚು ಬರುತ್ತದೆ ಎಂದು ನೋಡೋಣ” ಎಂದಳು. “”ಇಷ್ಟು ಸಮಯ ನಮ್ಮ ಅಂಕದಲ್ಲಿ , ಡ್ರೆಸ್ ವಿಷಯದಲ್ಲಿ, ತಿಂಡಿಯಲ್ಲಿ ಸಮಾನತೆ ಇತ್ತು. ಯಾವತ್ತೂ ನಮ್ಮ ಮಧ್ಯೆ ನಾ ಮೇಲು, ತಾ ಮೇಲು ಎಂದು ಬರಲಿಲ್ಲ . ಆದ್ದರಿಂದ ಈ ಅಂಕದ ವಿಷಯದಲ್ಲಿ ಸ್ಪರ್ಧೆ ಬೇಡ, ನಮ್ಮ ಗೆಳೆತನ ಸ್ಪರ್ಧೆಗೆ ಜಾರುವುದು ಬೇಡ, ಸ್ಪರ್ಧೆ ಎಂದು ಶುರುವಾದರೆ ಗಲಾಟೆ, ಮತ್ಸರ ಎಲ್ಲವೂ ಬರಬಹುದು. ಆದ್ದರಿಂದ ಸ್ಪರ್ಧೆ ಬೇಡ” ಎಂದು ಪಲ್ಲವಿ ಉತ್ತರಿಸಿದಳು. ನಾವು ಲಿಪ್‌ಸ್ಟಿಕ್ ಬಳಸುವುದನ್ನು ಬಿಟ್ಟರೆ ಹೇಗೆ ಎಂದು ಯೋಚಿಸಿದೆ. ಯಾಕೆಂದರೆ, ನಾವು ಮೂವರು ತುಟಿಗೆ ತುಂಬಾ ಲಿಪ್‌ಸ್ಟಿrಕ್ ಬಳಸುತ್ತೇವೆ. ಅದಕ್ಕೆ ಕಡಿವಾಣ ಹಾಕಿದರೆ ಹೇಗೆ? ತುಂಬ ಉಳಿತಾಯ ಮಾಡಬಹುದು- ಎಂದು ಯೋಚಿಸಿ ಸಂದೇಶವನ್ನು ಕಳುಹಿಸಿಯೇ ಬಿಟ್ಟೆ. ಆಗ ಗೆಳತಿ ಅಂಕಿತಾಳ ಉತ್ತರ ಬಂತು. “”ನೋಡು ಚೈತ್ರಾ, ಲಿಪ್‌ಸ್ಟಿಕ್ ಬಳಸುವುದನ್ನು ನಿಲ್ಲಿಸಬಹುದಿತ್ತು. ಆದರೆ, ನಾವು ಒಂದು ದಿನ ಕಣ್ಣಿಗೆ ಕಾಡಿಗೆ, ತುಟಿಗೆ ಲಿಪ್‌ಸ್ಟಿಕ್ ಹಾಕದೆ ಹೋದಾಗ ನಮ್ಮ ಇತರ ಗೆಳೆಯರು, “”ಏನು ಬಾಯ್‌ಫ್ರೆಂಡ್ ಕೈ ಕೊಟ್ಟನಾ?” ಎಂದು ಗೇಲಿ ಮಾಡ್ತಾರೆ. ಅದಲ್ಲದೆ ನಮಗೆ ವಾರದಲ್ಲಿ 2 ದಿನ ಮಾತ್ರ ಸಮವಸ್ತ್ರ . ಉಳಿದ ದಿನ ಬಣ್ಣದ ಉಡುಪು. ಹಾಗಾಗಿ ನಾವು ಕಲರ್‌ಫುಲ್ ಆಗಿ ಚಂದ ಕಾಣಬೇಕು, ಅದಕ್ಕೆ ಲಿಪ್‌ಸ್ಟಿಕ್ ಬೇಕೇಬೇಕು” ಎಂದಳು. “”ಹಾಗಾದ್ರೆ ನಾವು ದಿನದಲ್ಲಿ ಹೆಚ್ಚು ಯಾವುದಕ್ಕೆ ಖರ್ಚು ಮಾಡುತ್ತೇವೆ?” ಎಂದು ಪಲ್ಲವಿ ಕೇಳಿದಾಗ ನನ್ನ ಮತ್ತು ಅಂಕಿತಾಳ ಉತ್ತರ ಒಂದೇ ಆಗಿತ್ತು. ಅದು ಸಮೋಸಾದ ವಿಷಯದಲ್ಲಿ. ದಿನದಲ್ಲಿ 3 ಸಮೋಸಾ ತಿನ್ನುತ್ತಿ¨ªೆವು ನಾವು. ಕಾಲೇಜಿನಲ್ಲಿ ಸುಮಾರು 11 ಗಂಟೆಗೆ ಒಂದು ಸಮೋಸಾ, ಮಧ್ಯಾಹ್ನದ ವೇಳೆ 1 ಗಂಟೆಗೆ ಸಮೋಸಾ. ಹಾಗೇ ಕಾಲೇಜು ಬಿಡುವ ಹೊತ್ತಿಗೆ ಸಮೋಸಾ. ಒಂದು ಸಮೋಸಕ್ಕೆ 12 ರೂಪಾಯಿ ಆದರೆ ದಿನಕ್ಕೆ 3 ಸಮೋಸಾದಂತೆ 36 ರೂಪಾಯಿ ಆಗುತ್ತದೆ. ಅಂದರೆ, ತಿಂಗಳಿಗೆ 1080 ರೂಪಾಯಿ! ನಾವು ಕೇವಲ ಸಮೋಸಕ್ಕೆ ಖರ್ಚು ಮಾಡ್ತೇವೆ ಎಂದಳು. ಇದು ಸಣ್ಣ ಮೊತ್ತವಂತೂ ಅಲ್ಲ. ದೊಡ್ಡ ಮೊತ್ತವೆ! ಇಬ್ಬರಿಗೂ ತಲೆಬಿಸಿಯಾಗಿಬಿಟ್ಟಿತು ಒಮ್ಮೆ. ಆಗಿದ್ದಾಗಲಿ ಮೂವರೂ ನಿರ್ಧಾರಕ್ಕೆ ಬಂದೆವು. ನಮ್ಮ ಈ ನಿರ್ಧಾರದಿಂದ ಮೊದಮೊದಲು ಕಷ್ಟವಾಗಬಹುದು. ಆದರೆ, ಇದಕ್ಕೆ ಕಡಿವಾಣ ಹಾಕಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಉಳಿತಾಯವೂ ಮಾಡಬಹುದು. ಇಷ್ಟು ಮಾತನಾಡುತ್ತಾ ಇದ್ದ ಹಾಗೆ ಗಂಟೆ ರಾತ್ರಿ 12 ಗಂಟೆ ಆಗಿತ್ತು. ಮೂವರು ಸೇರಿ ಶಪಥ ಮಾಡಿದೆವು- “ಇನ್ನು ಮುಂದೆ ಸಮೋಸಾ ತಿನ್ನಬಾರದು, ಅಪರೂಪಕ್ಕೆ ಯಾವಾಗಲಾದರೊಮ್ಮೆ ತಿನ್ನೋಣ’ ಎಂಬ ಒಪ್ಪಂದವಾಯಿತು. ಹಾಗೆ ಸ್ಟೇಟಸ್‌ನಲ್ಲಿ ನಮ್ಮದೂ ಒಂದು ಇರಲಿ ಅಂತ “ಇನ್ನು ಮುಂದೆ ನೋ ಸಮೋಸಾ 2020′ ಎಂದು ಹಾಕಿದೆವು. ಗೆಳೆಯರ ಪ್ರತಿಕ್ರಿಯೆ ಬರಲು ಶುರುವಾಯಿತು. “”ನಿಮ್ಮಿಂದ ಇದು ಸಾಧ್ಯವಿಲ್ಲ, ನಾಳೆ ನೀವು ಸಮೋಸಾ ತಿನ್ನುತ್ತೀರಿ ನೋಡಿ” ಎಂಬುದಾಗಿ. ನಮಗೆ ಉತ್ತರ ಕೊಟ್ಟು ಸಾಕಾಯಿತು. ನಾವು ಮೂವರೂ ಛಲ ತೊಟ್ಟೆವು- ಇದು ನಮ್ಮಿಂದ ಖಂಡಿತ ಸಾಧ್ಯವೆಂದು. ಮೂವರೂ ಕಾಲೇಜಿನಲ್ಲಿ ಕಷ್ಟವಾದರೂ ಕ್ಯಾಂಟೀನ್ ಆಚೆ ಮುಖಮಾಡಲಿಲ್ಲ. ಗೆಳೆಯರು ಗೇಲಿ ಮಾಡಿದರೂ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಚೈತ್ರಾ
ಪ್ರಥಮ ಸ್ನಾತಕೋತ್ತರ (ಎಂಸಿಜೆ), ಎಸ್‌ಡಿಎಂ ಕಾಲೇಜು, ಉಜಿರೆ