Advertisement

“ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”

03:03 PM Jan 21, 2021 | Team Udayavani |

ಹೆಚ್ಚು ಪ್ರೋಟೀನ್ ಯುಕ್ತ ಪಥ್ಯಾನ್ನ ಸೇವನೆಯಿಂದ ದೇಹದಲ್ಲಿನ ಬೊಜ್ಜು ಅಥವಾ ಕೊಬ್ಬು ಕರಗುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ದಿನನಿತ್ಯದ ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ದೇಹದ ತೂಕವನ್ನು ಇಳಿಸಬಹುದಾಗಿದೆ.

Advertisement

ಹೆಚ್ಚುಪಥ್ಯೆಮಾಡುತ್ತಿದ್ದವರು ತಮ್ಮಆಹಾರ ಕ್ರಮವನ್ನು ಬದಲಾಯಿಸಿಕೊಂಡು ಪ್ರೋಟೀನ್ ಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ ಎಂದು ದ ಅಮೇರಿಕನ್ ಜರ್ನಲ್  ಸಂಶೋಧಕರ ಅಧ್ಯಯನವನ್ನು ವರದಿ ಮಾಡಿದೆ.

ಇದನ್ನೂ ಓದಿ : ತಪ್ಪು ಗ್ರಹಿಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ : ವಾಟ್ಸಾಪ್

ಅಲ್ಬರ್ಟಾ ಯೂನಿವರ್ಸಿಟಿಯ ಸಂಶೋಧಕರು ಎರಡು ಹಂತಗಳಲ್ಲಿ ಈ ಅಧ್ಯಯನವನ್ನು ಮಾಡಿದ್ದಾರೆ. ಈ ಅಧ್ಯಯನಕ್ಕಾಗಿ 43 ಮಂದಿ ಬೊಜ್ಜುಕಾಯವಲ್ಲದ ವಯಸ್ಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಮೊದಲ ಹಂತದ ಅಧ್ಯಯನದಲ್ಲಿ ದಿನನಿತ್ಯ ಪ್ರೋಟೀನ್ಯುಕ್ತ ಆಹಾರ ಸೇವನೆಯಿಂದಾಗಿ 30% ಜೀವಸತ್ವ, 40% ಪ್ರೋಟೀನ್, 25% ಫ್ಯಾಟ್, ಎರಡನೇ ಹಂತದ ಅಧ್ಯಯನದಲ್ಲಿ ಹಣ್ಣುಗಳು, ಕರಿದ ಆಹಾರ ಸೇವನೆಯಿಂದಾಗಿ 55% ಕ್ಯಾಲೋರಿ ಕಾರ್ಬ್ಸ್, 15% ಪ್ರೋಟೀನ್, 30% ಫ್ಯಾಟ್ ದೇಹದೊಳಗೆ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನ ಹೇಳಿದೆ.

Advertisement

ಪ್ರೋಟೀನ್ ಯುಕ್ತ ಆಹಾರ ಪದ್ಧತಿಯನ್ನು ಯಾವುದೇ ಪಥ್ಯೆ ಮಾಡದೇ ಸೇವಿಸುವುದರಿಂದ ದಿನಕ್ಕೆ ಸುಮಾರು 80 ಕ್ಯಾಲೋರಿಗಳನ್ನು ಕರಗಿಸಬಹುದಾಗಿದೆ ಹಾಗೂ ದೇಹದ ತೂಕ ಇಳಿಸಬಹುದಾಗಿದೆ ಎಂದು  ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಉದ್ಯೋಗ ಖಾತ್ರಿಯಿಂದ ಜೀವನ ಹಸನು

ಬೊಜ್ಜು ಇಳಿಸುವುದಕ್ಕೆ ಪ್ರೋಟೀನ್ ಯುಕ್ತ ಆಹಾರ ಗಳು ಸಹಾಯ ಮಾಡುತ್ತವೆ..?

ಪ್ರೋಟೀನ್ ಯುಕ್ತ ಆಹಾರಗಳ ಸೇವನೆಯಿಂದಾಗಿ ಆಹಾರದ ಉಷ್ಣಪರಿಣಾಮ ಅಥವಾ ಆಹಾರ ಪ್ರೇರಿತ ಥರ್ಮೋಜೆನಿಸಿಸ್ ಎಂದೂ ಕರೆಯಲ್ಪಡುವ ನಿರ್ದಿಷ್ಟ ಕ್ರಿಯಾತ್ಮಕ ಕ್ರಿಯೆಯಿಂದಾಗಿ ದೇಹದಲ್ಲಿನ ಬೊಜ್ಜು ಕರಗಲು ಸಾಧ್ಯ.

ಮೊಟ್ಟೆ, ಕೋಳಿಮಾಂಸ, ಮಸೂರ, ಬೇಳೆಗಳು,ಸೋಯಾ ಉತ್ಪನ್ನಗಳು, ಹಾಲು ಪ್ರೋಟೀನ್ ಯುಕ್ತ ಆಹಾರವೆಂದು ಸಂಶೋಧಕರ ತಂಡ ಹೇಳಿದೆ.

ಇದನ್ನೂ ಓದಿ : ಅನುಭವಿಲ್ಲದ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ..ನೋಡೋಣ: ಮಾಧುಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next