Advertisement

ಗೋಕಾಕ್, ಧೂಪದಾಳ, ಗೊಡಚಿನಮಲ್ಕಿ ಫಾಲ್ಸ್ ಗಳಿಗೆ ವೀಕೆಂಡ್, ರಜಾ ದಿನದಂದು ಪ್ರವೇಶವಿಲ್ಲ

02:19 PM Jul 15, 2021 | Team Udayavani |

ಬೆಳಗಾವಿ: ಕೋವಿಡ್-19 ಸೋಂಕು ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ  ಶನಿವಾರ, ಭಾನುವಾರ ಹಾಗೂ ರಜಾ‌ ದಿನಗಳಂದು ಗೋಕಾಕ, ಧೂಪದಾಳ ಹಾಗೂ ಗೊಡಚಿನಮಲ್ಕಿ ಫಾಲ್ಸ್ ಗಳ ಸಾರ್ವಜನಿಕ ವೀಕ್ಷಣೆಗೆ ನಿರ್ಭಂಧ ವಿಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

Advertisement

ಇದನ್ನೂ ಓದಿ:ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ದೇಶದ್ರೋಹದ ಕಾನೂನು ಅಗತ್ಯವಿದೆಯೇ? ಸುಪ್ರೀಂ

ಪ್ರವಾಸಿ ಸ್ಥಳಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳ ಪಾಲನೆಯಾಗುತ್ತಿಲ್ಲ. ಜನರು ಮಾಸ್ಕ ಧರಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಕಾರಣ ಸೋಂಕು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ ಮತ್ತು ದೂಪದಾಳ ಪ್ರವಾಸಿ ಸ್ಥಳಕ್ಕೆ ಪ್ರವೇಶ ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಲಾಕ್ ಡೌನ್ ತೆರವಾದ ಬಳಿಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next