Advertisement
ಈ ಕೆಳಕಂಡ ಅಗತ್ಯ ಮತ್ತು ತುರ್ತು ಚಟುವಟಿಕೆಗಳಿಗೆ ಹೊರತುಪಡಿಸಿ ಜನರ ಓಡಾಟಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಇತ್ಯಾದಿ, ತುರ್ತು, ಅಗತ್ಯ ಸೇವೆಗಳು ಮತ್ತು ಕೋವಿಡ್-19 ಕಂಟೈನ್ಮೆಂಟ್ ಮತ್ತು ಮ್ಯಾನೇಜೆ¾ಂಟ್ ಕರ್ತವ್ಯಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿ ಸುತ್ತವೆ ಮತ್ತು ಇಂತಹ ಸಂಸೆœಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು / ಸಿಬಂದಿಗೆ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.
- 24×7 ಕಾರ್ಯಾಚರಿಸುವ ತುರ್ತು ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ಕೈಗಾರಿಕೆಗಳು / ಸಂಸ್ಥೆಗಳು ಕಾರ್ಯ ನಿರ್ವಹಿಸಬಹುದು. ನೌಕರರು ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು.
- ದೂರವಾಣಿ, ಅಂತರ್ಜಾಲ ಸೇವೆಯ ನೌಕರರು ಹಾಗೂ ವಾಹನ
- ರೋಗಿಗಳು, ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ಲಸಿಕೆ ತೆಗೆದುಕೊಳ್ಳುವವರು ದಾಖಲೆ ಗಳೊಂದಿಗೆ ಸಂಚರಿಸಬಹುದು.
- ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳು, ಬೀದಿಬದಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕ ವಿತರಣೆಯ ಅಂಗಡಿ ಗಳು ಬೆಳಗ್ಗೆ 5ರಿಂದ ಅಪರಾಹ್ನ 2ರ ವರೆಗೆ ಕಾರ್ಯ ನಿರ್ವಹಿಸಬಹುದು. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲೂ ಇದೇ ಅವಧಿಯಲ್ಲಿ ಪಾರ್ಸೆಲ್‌ಗೆ ಮಾತ್ರ ಅನುಮತಿಸ ಲಾಗಿದೆ. ಜನರ ಸಂಚಾರವನ್ನು ಕಡಿಮೆ ಮಾಡಲು 24×7 ಹೋಮ್ ಡೆಲಿವರಿ ಸೇವೆಗಳನ್ನು ನೀಡಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ.
- ಡೇರಿ, ಹಾಲಿನ ಬೂತ್‌ಗಳು ಮುಂಜಾನೆ 5ರಿಂದ ರಾತ್ರಿ 8ರ ವರೆಗೆ ಕಾರ್ಯಾಚರಿಸಲು ಅನುಮತಿಸಿದೆ.
- ರೆಸ್ಟೋರೆಂಟ್ ಮತ್ತು ತಿನಿಸು ಕೇಂದ್ರಗಳಿಂದ ಆಹಾರ ತೆಗೆದು ಕೊಂಡು ಹೋಗಲು ಮತ್ತು ಹೋಂ ಡೆಲಿವರಿಗೆ ಮಾತ್ರ ಅನುಮತಿ.
- ಬಸ್, ರೈಲು, ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ. ನಿಲ್ದಾಣಗಳಿಗೆ ಹೋಗಿ ಬರಲು ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ಇದೆ. ಪ್ರಯಾಣಿಕರು ಸೂಕ್ತ ದಾಖಲೆ / ಟಿಕೆಟುಗಳನ್ನು ಹೊಂದಿರಬೇಕು.
- ಶವಸಂಸ್ಕಾರ / ಅಂತ್ಯಕ್ರಿಯೆ ಗಳನ್ನು ಗರಿಷ್ಠ 20 ಜನರ ಪಾಲ್ಗೊಳ್ಳು ವಿಕೆಯಲ್ಲಿ ನೆರವೇರಿಸುವುದು. 10. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಬಹುದು. ಪ್ರಯಾಣದ ವೇಳೆ ಪರೀಕ್ಷೆಯ ಹಾಲ್‌ಟಿಕೆಟ್ / ದಾಖಲೆ ಕೈಯಲ್ಲಿರಬೇಕು.
Related Articles
Advertisement
ದ.ಕ.ದಲ್ಲಿ ಯಥಾವತ್ ಮುಂದುವರಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಈಗಾಲೇ ಜಾರಿಯಲ್ಲಿದ್ದು, ಈ ವಾರವೂ ಮುಂದುವರಿಯಲಿದೆ.
ದ.ಕ.ದಲ್ಲಿ ಯಥಾವತ್ ಮುಂದುವರಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಈಗಾಲೇ ಜಾರಿಯಲ್ಲಿದ್ದು, ಈ ವಾರವೂ ಮುಂದುವರಿಯಲಿದೆ.