Advertisement

ವಾರಾಂತ್ಯ ಕರ್ಫ್ಯೂ: ಸ್ಥಳೀಯ ಆರ್ಥಿಕತೆಗೆ ಮತ್ತೆ ಕುಸಿತದ ಭಯ

03:02 AM Jan 06, 2022 | Team Udayavani |

ಮಂಗಳೂರು/ಉಡುಪಿ: ಸರಕಾರವು ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಒಟ್ಟಾರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಅಪಾಯವಿದೆ.

Advertisement

ಈ ಹಿಂದಿನ ಲಾಕ್‌ಡೌನ್‌ ಹಾಗೂ ಅನಂತರ ನಿರ್ಬಂಧಗಳ ಸಡಿಲಿಕೆ ಬಳಿಕ ಇತ್ತೀಚೆಗಷ್ಟೇ ದೈನಂ ದಿನ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಅಷ್ಟರಲ್ಲಿ ಮತ್ತೊಮ್ಮೆ ಹಿಂದಿನ ಕರಾಳ ಸ್ಥಿತಿಯ ಭೀತಿ ಜನರನ್ನು ಕಾಡಲಾರಂಭಿಸಿದೆ.

ಲಾಕ್‌ಡೌನ್‌ ಹೊರತಾದ ಇತರ ದಾರಿಗಳ ಮೂಲಕ ಕೊರೊನಾ ನಿಯಂತ್ರಿಸಲು ಸರಕಾರ ಆಲೋಚಿಸಬೇಕು. ಕೊರೊನಾಹೆಚ್ಚಾಯಿತೆಂದು ಮತ್ತೆ ಮತ್ತೆ ನಿರ್ಬಂಧವಿಧಿಸುವುದರಲ್ಲಿ ಅರ್ಥವಿಲ್ಲ ಎಂಬುದು ಕರಾವಳಿಯ ಜನರ ಒಟ್ಟಾರೆಅಭಿಪ್ರಾಯ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಜಾತ್ರೆ, ಉತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೀಪಾವಳಿ ಬಳಿಕ ಆರಂಭಗೊಂಡಿದ್ದು, ಮಕರ ಸಂಕ್ರಮಣ ಬಳಿಕ ಹೆಚ್ಚಿನ ಸಂಖ್ಯೆ ಯಲ್ಲಿ ನಡೆಯಲಿದೆ. ಈ ಸಂದರ್ಭ ದಲ್ಲಿಯೇ ಲಾಕ್‌ಡೌನ್‌ ಗುಮ್ಮ ಎಲ್ಲರಲ್ಲೂ ಆತಂಕ ಮೂಡಿಸಿದೆ.

ಹಲವಾರು ಪ್ರಮುಖ ಕಾರ್ಯಕ್ರಮಗಳು ನಿಗದಿಯಾಗಿದ್ದು, ಅದಕ್ಕೆ ತಕ್ಕಂತೆ ಸಿದ್ಧತೆಗಳೂ ನಡೆದಿವೆ. ಈ ಹಂತದಲ್ಲಿ ಅದಕ್ಕೆಲ್ಲ ಅವಕಾಶ ನಿರಾಕರಣೆಯಾದರೆ ಅದು ಆರ್ಥಿಕತೆಯ ಮೇಲೂ ಅಡ್ಡ ಪರಿಣಾಮ ಬೀರಲಿದೆ.

Advertisement

ಕರಾವಳಿಯ ಆರ್ಥಿಕತೆಗೆ ಪೂರಕವಾಗಿ ರುವ ಪ್ರವಾಸೋದ್ಯಮದ ಮೇಲೆ ವೀಕೆಂಡ್‌ ಕರ್ಫ್ಯೂಭಾರೀ ಹೊಡೆತ ನೀಡುತ್ತದೆ.

ಕರಾವಳಿಯ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರ ಗಳಿಗೆ ವಾರಾಂತ್ಯದಲ್ಲಿ ಹೆಚ್ಚು ಜನರು ಭೇಟಿ ನೀಡುವುದರಿಂದ ವ್ಯಾಪಾರ ವ್ಯವಹಾರಗಳಿಗೆ ಬಲ ಸಿಗುತ್ತಿತ್ತು. ಆದರೆ ಅದೇ ಸಮಯ ಕರ್ಫ್ಯೂ ಹೇರುವುದರಿಂದ ಎಲ್ಲವೂ ಸ್ಥಗಿತವಾಗಲಿದೆ.

ಇದನ್ನೂ ಓದಿ:ಪ್ರಧಾನಿಗೆ ಭದ್ರತಾ ಲೋಪ : ಸಿಎಂ ಸೇರಿ ಹಲವರಿಂದ ವ್ಯಾಪಕ ಖಂಡನೆ

ಆರ್ಥಿಕ ಚಟುವಟಿಕೆ ಒಂದು ಬಾರಿ ಸ್ಥಗಿತಗೊಂಡರೆ ಮತ್ತೆ ಅದು ಮೇಲೇರಲು ಕೆಲವು ಸಮಯವೇ ಬೇಕಾಗುತ್ತದೆ. ಒಂದು ಬಾರಿಯ ಹೊಡೆತದಿಂದ ಈಗಷ್ಟೇ ಚೇತರಿಕೆ ಕಾಣುವ ಹಂತಕ್ಕೆ ಬಂದಿರುವ ಆರ್ಥಿ ಕತೆ ಮತ್ತೊಮ್ಮೆ ಅದನ್ನು ಎದುರಿಸುವ ಛಾತಿಯಲ್ಲಿಲ್ಲ. ಈಗ ಹಿಂದಿನಂತೆ ಲಾಕ್‌ಡೌನ್‌ ತಾಳಿಕೊಳ್ಳುವ ಸಾಮರ್ಥ್ಯ ಹೆಚ್ಚಿನ ಸಂಸ್ಥೆ ಗಳಿಗೆ ಇಲ್ಲವಾಗಿದೆ. ಆದುದರಿಂದ ನಿಯಮ ಪಾಲಿಸಿಕೊಂಡು ಎಲ್ಲ ಚಟು ವಟಿಕೆಗಳಿಗೆ ಅವಕಾಶ ನೀಡಬೇಕೆಂಬುದು ಎಲ್ಲ ರಂಗದವರ ಅಭಿಪ್ರಾಯವಾಗಿದೆ.

ಮತ್ತೆ ಹೊಟೇಲ್‌ ಉದ್ಯಮಕ್ಕೆ ಹೊಡೆತ ಬೀಳಲಿದೆ. ವಾರಾಂತ್ಯದಲ್ಲಿ ಹೆಚ್ಚು ವ್ಯಾಪಾರ ಆಗುವಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಿದರೆ ವ್ಯಾಪಾರ ನಡೆಸಲಾಗದು. ಪ್ರವಾಸಿಗರು ಬರುವುದಿಲ್ಲ. ಲಾಡ್ಜ್ ಗಳು ಖಾಲಿಯಾಗಲಿವೆ. ಹೊಟೇಲ್‌ನಲ್ಲಿ ಕೆಲಸಕ್ಕೆ ಇರುವವರಿಗೂ ಸಮಸ್ಯೆ ಆಗುವಂತಾಗಿದೆ. ಬದಲಿ ಪರಿಹಾರ ಹುಡುಕುವುದು ಸೂಕ್ತ.
-ಕುಡ್ಪಿ ಜಗದೀಶ್‌ ಶೆಣೈ,
ಅಧ್ಯಕ್ಷರು, ಜಿಲ್ಲಾ ಹೊಟೇಲ್‌ ಮಾಲಕರ ಸಂಘ

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಂದಿಷ್ಟು ನಿರ್ಬಂಧ ವಿಧಿಸುವುದು ಸರಿ ಇರಬಹುದು. ವಾರಾಂತ್ಯ ನಿರ್ಬಂಧ ಕೂಡ ಈ ನಿಟ್ಟಿನಲ್ಲಿ ಪೂರಕವಾಗಬಹುದು. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ಲಾಕ್‌ಡೌನ್‌ ಪರಿಸ್ಥಿತಿ ಎದುರಾಗಬಹುದು. ಅದು ಜಾರಿಯಾದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಅದಕ್ಕೆ ಅವಕಾಶ ಆಗದಂತೆ ಈಗಲೇ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
-ಶಶಿಧರ ಪೈ ಮಾರೂರು,
ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಲಾಕ್‌ಡೌನ್‌ ಪರಿಸ್ಥಿತಿಯಿಂದ ಈಗಾಗಲೇ ಉದ್ಯಮವು ತತ್ತರಿಸಿ ಹೋಗಿದೆ. ಬಹು ಸಂಖ್ಯೆಯ ಹೊಟೇಲ್‌ಗ‌ಳು ನಡೆಸ ಲಾಗದೆ ಬಾಗಿಲು ಮುಚ್ಚಿವೆ. ನೂರಾರು ಮಂದಿ ಕಾರ್ಮಿ ಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ, ಮಾಲಕರು ಸಾಲದ ಸುಳಿಗೆ ಸಿಲುಕಿದ್ದಾರೆ. ಇನ್ನೇನು ವ್ಯಪಾರ ಸುಧಾರಿಸುವ ಕಾಲಘಟ್ಟದಲ್ಲಿ ಮತ್ತೆ ಸರಕಾರದ ಕರ್ಫ್ಯೂ ನಿಯಮಗಳು ಹೊಟೇಲ್‌ ಉದ್ಯಮಕ್ಕೆ ಬರೆ ಎಳೆ ಯುತ್ತಿದೆ. ಸರಕಾರವು ಕರ್ಫ್ಯೂ ನಿಯಮಾವಳಿ ಸಡಿಲಿಸಿ ಹೊಟೇಲ್‌ಗ‌ಳ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು.
-ಡಾ| ತಲ್ಲೂರು ಶಿವರಾಮ ಶೆಟ್ಟಿ,
ಜಿಲ್ಲಾ ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷ, ಉಡುಪಿ

ಸಣ್ಣ ಕೈಗಾರಿಕೆಗಳಿಗೆ ವಾರಾಂತ್ಯದ ಕರ್ಫ್ಯೂ ನಿಂದ ಸಮಸ್ಯೆ ಆಗ ಲಾದರು. ಸಣ್ಣ ಕೈಗಾರಿಕೆಗಳು ಎಂದಿನಂತೆ ವಾರಾಂತ್ಯದಲ್ಲೂ ಕಾರ್ಯ ಚಟುವಟಿಕೆ ನಡೆಸಲಿದೆ. ಕಾರ್ಮಿಕರಿಗೆ ಸಮಸ್ಯೆಯಾಗ ಬಾರದು ಎಂಬ ಕಾರಣಕ್ಕೆ ಹೆಲ್ಪ್ ಡೆಸ್ಕ್ ಕೂಡ ತೆರೆದಿದ್ದೇವೆ. ಲಾಕ್‌ಡೌನ್‌ಗೆ ನಮ್ಮ ವಿರೋಧವಿದೆ.
-ಪ್ರಶಾಂತ್‌ ಬಾಳಿಗ,
ಜಿಲ್ಲಾ ಸಣ್ಣ ಕೈಗಾರಿಕೆಗಳ
ಸಂಘದ ಅಧ್ಯಕ್ಷ, ಉಡುಪಿ.

ವಾರಾಂತ್ಯ ಕರ್ಫ್ಯೂ ಇದ್ದರೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿ ಕಾರಿಗಳ ಆದೇಶದಂತೆ ಬಸ್‌ ಸಂಚಾರ ಇರಲಿದೆ. ಬಸ್‌ಗಳಿಗೆ ಪ್ರಯಾಣಿಕರು ಇಲ್ಲದಿದ್ದರೆ ಏನೂ ಮಾಡು ವಂತಿಲ್ಲ. ನಾವಾಗಿ ನಿಲ್ಲಿಸು ವುದಿಲ್ಲ. ಆಸ್ಪತ್ರೆ, ನಿತ್ಯ ಕೆಲಸ, ಅವಶ್ಯ ಕಾರ್ಯ ಕ್ರಮಕ್ಕೆ ತೆರಳುವವರಿಗೆ ತೊಂದರೆಯಾಗ ಬಾರದೆಂದು ಬಸ್‌ ಸಂಚಾರ ನಿರಂತರವಾಗಿ ಇರಲಿದೆ.
-ರಾಜವರ್ಮ ಬಲ್ಲಾಳ್‌,
ಅಧ್ಯಕ್ಷರು, ಕೆನರಾ ಬಸ್‌ ಮಾಲಕರ ಸಂಘ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next