Advertisement

ಕರ್ಫ್ಯೂ ಹಿನ್ನೆಲೆ ಸ್ತಬ್ಧವಾದ ಚಿಕ್ಕಮಗಳೂರು ;ರಸ್ತೆಗಳೆಲ್ಲ ಖಾಲಿ ಖಾಲಿ

03:51 PM Jan 08, 2022 | Team Udayavani |

ಚಿಕ್ಕಮಗಳೂರು : ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಇಂದು ಬಹುತೇಕ ಸ್ತಬ್ಧವಾಗಿತ್ತು .

Advertisement

ಸದಾ ಜನ  ಮತ್ತು ವಾಹನಗಳಿಂದ ಗಿಜಿಗುಡುತ್ತಿದ್ದ ಮಹಾತ್ಮಗಾಂಧಿ ರಸ್ತೆ, ಮಾರ್ಕೆಟ್ ರಸ್ತೆ,  ಐಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿದ್ದವು .

ರಸ್ತೆ ಸಾರಿಗೆ ಬಸ್ ಸಂಚಾರ ಇದ್ದರೂ  ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದವು .  ಕರ್ಫ್ಯೂ ಮಧ್ಯೆ ಕೆಲಸವಿಲ್ಲದೆ ಓಡಾಡುತ್ತಿದ್ದ  ಹಲವರು ಪೊಲೀಸರ ಕೈಗೆ ಸಿಕ್ಕಿಬಿದ್ದು ದಂಡ ತೆರಬೇಕಾಯಿತು .

ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು .ಎಲ್ಲೆಡೆ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು . 2 ನೇ ಶನಿವಾರವಾಗಿದ್ದರಿಂದ ಸಹಜವಾಗಿ ಸರ್ಕಾರಿ ಕಚೇರಿ, ಬ್ಯಾಂಕ್  ಗೆ ರಜೆ ಇತ್ತು .ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು .

ತುರ್ತು ಸೇವೆಗಳಿಗೆ ಬೆರಳೆಣಿಕೆಯಷ್ಟು  ಜನ  ತಿರುಗಾಡುತ್ತಿದ್ದು  ಪೊಲೀಸರಿಗೆ ಸೂಕ್ತ ಸಮಜಾಯಿಸಿ ನೀಡಬೇಕಾಗಿತ್ತು. ಹಣ್ಣು ತರಕಾರಿ ಇನ್ನಿತರ ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರೂ ಖರೀದಿಸುವವರ ಸಂಖ್ಯೆ ವಿರಳವಾಗಿತ್ತು .

Advertisement
Advertisement

Udayavani is now on Telegram. Click here to join our channel and stay updated with the latest news.

Next