Advertisement

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

12:02 AM Oct 08, 2022 | Team Udayavani |

ಮಲ್ಪೆ : ವಾರಾಂತ್ಯ, ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಹೊರಜಿಲ್ಲೆಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಅಗಮಿಸಿದ್ದಾರೆ. ಶುಕ್ರವಾರ ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ನೂರಾರು ಪ್ರವಾಸಿ ವಾಹನಗಳು ಅಪರಾಹ್ನದಿಂದಲೇ ಮಲ್ಪೆ ಕಡೆಗೆ ಅಗಮಿಸುತ್ತಿದ್ದು ಜನದಟ್ಟಣೆಯಾಗಿತ್ತು.

Advertisement

ಟ್ರಾಫಿಕ್‌ ಜಾಮ್‌
ಎಲ್ಲ ವಾಹನಗಳು ಬೀಚ್‌ ಕಡೆಗೆ ಸಾಗುತ್ತಿರುವುದರಿಂದ ಮಲ್ಪೆ ಮುಖ್ಯ ರಸ್ತೆಯಲ್ಲಿ ಅಪರಾಹ್ನದಿಂದ ವಾಹನ ದಟ್ಟಣೆಯಾಗಿತ್ತು. 2-3 ಕೀ. ಮೀ. ದೂರ ವಾಹನ ಸಾಲು ಕಂಡು ಬಂದಿತ್ತು. ಇದರಿಂದಾಗಿ ಬೀಚ್‌ನ ಪಾರ್ಕಿಂಗ್‌ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು. ಟ್ರಾಫಿಕ್‌ ಜಾಮ್‌ನಿಂದಾಗಿ ಸ್ಥಳೀಯ ಜನರು ಮತ್ತು ವಾಹನ ಸವಾರರು ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next