Advertisement

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

06:57 PM Apr 23, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ವೀಕೆಂಡ್‌ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಜಿಲ್ಲಾಡಳಿತ ಸಿಆರ್‌ಪಿಸಿ ಕಾಯ್ದೆ 1973ರ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ.

Advertisement

ಶನಿವಾರ – ರವಿವಾರ ವಾರಾಂತ್ಯ ಕರ್ಫ್ಯೂ ಇರಲಿದ್ದು, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ತುರ್ತು ಸೇವೆ ವಿನಾ ಜಿಲ್ಲೆ ಸ್ತಬ್ಧವಾಗಲಿದೆ. ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಬೆಳಗ್ಗೆ 6ರಿಂದ 10 ವರೆಗೆ ಆಹಾರ ಸಾಮಗ್ರಿಗಳ ಖರೀದಿಗೆ ಮಾತ್ರ ಅವಕಾಶವಿದೆ. ಕಾಮಗಾರಿಗಳಿಗೆ ಅವಕಾಶವಿಲ್ಲ. ರಾತ್ರಿ ಕರ್ಫ್ಯೂ ವೇಳೆ ಜಾರಿಯಲ್ಲಿದ್ದ ಎಲ್ಲ ನಿರ್ಬಂಧಗಳು ಶನಿವಾರ ಮತ್ತು ರವಿವಾರಕ್ಕೆ ಸಂಪೂರ್ಣ ಅನ್ವಯವಾಗಲಿದೆ.

ಸರ್ವೀಸ್‌ ಬಸ್‌ ಇಲ್ಲ
ಶನಿವಾರ ಹಾಗೂ ರವಿವಾರ ಸರ್ವೀಸ್‌ ಬಸ್‌ ಸಂಚರಿಸುವುದಿಲ್ಲ ಎಂದು ಕೆನರಾ ಬಸ್‌ ಮಾಲಕರ ಸಂಘದ ಪದಾಧಿಕಾರಿ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ ಹೆಚ್ಚಳ..ಆದರೂ ವೆಂಟಿಲೇಟರ್ ಆಪರೇಟರ್ ನೇಮಕಾತಿಗೆ ಮೀನಮೇಷ ಯಾಕೆ?

ಏನಿರಲಿದೆ?
– ಬೆಳಗ್ಗೆ 6ರಿಂದ 10 ವರೆಗೆ ಪಡಿತರ ಅಂಗಡಿ (ಪಿಡಿಎಸ್‌) ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿ, ಹಣ್ಣು- ತರಕಾರಿ ಅಂಗಡಿ, ಡೇರಿ- ಹಾಲಿನ ಬೂತ್‌, ಮಾಂಸ – ಮೀನು, ಪಶು ಆಹಾರ ಅಂಗಡಿಗಳನ್ನು ತೆರೆಯಲು ಅವಕಾಶವಿದೆ.

Advertisement

– ಸಗಟು ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆಗಳು ನಿಯಮಗಳನ್ನು ಅನುಸರಿಸುವ ಷರತ್ತಿಗೆ ಒಳಪಟ್ಟು ತೆರೆದ ಸ್ಥಳ ಅಥವಾ ಆಟದ ಮೈದಾನಗಳಲ್ಲಿ ಕಾರ್ಯಾಚರಿಸಬಹುದು. ರೆಸ್ಟೋರೆಂಟ್‌-ಕೆಫೆಗಳಲ್ಲಿ ಪಾರ್ಸೆಲ್‌ ನೀಡಲು ಮಾತ್ರ ಅವಕಾಶ.

– ಲಾಡ್ಜಿಂಗ್‌/ ವಸತಿಗೃಹಗಳಲ್ಲಿ ಇರುವ ಹೊಟೇಲ್‌ಗ‌ಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಮಾತ್ರ ಆಹಾರ ಸರಬರಾಜು ಮಾಡಬಹುದು.

– ಸ್ವತಂತ್ರ ಮದ್ಯದಂಗಡಿ/ಮಳಿಗೆ/ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ ನೀಡಲು ಅವಕಾಶವಿದೆ.

– ನಿಯಮ ಅನುಸರಿಸಿ ಆಹಾರ ಸಂಸ್ಕರಣೆ/ ಸಂಬಂಧಿತ ಕೈಗಾರಿಕೆಗಳಿಗೆ, ಬ್ಯಾಂಕ್‌, ವಿಮಾ ಕಚೇರಿ, ಎಟಿಎಂಗೆ, ಮುದ್ರಣ ಮತ್ತು ಇಲೆಕ್ಟ್ರಾನಿಕ್‌ ಮಾಧ್ಯಮಗಳು, ಕೌÒರ/ಸೆಲೂನ್‌/ಬ್ಯೂಟಿ ಪಾರ್ಲರ್‌, ಇ ಕಾಮರ್ಸ್‌ ಮೂಲಕ ವಸ್ತುಗಳ ಸರಬರಾಜು ಮಾಡಲು, ಬಂಡವಾಳ- ಸಾಲ ಮಾರುಕಟ್ಟೆ ಸೇವೆಗಳು, ಕೋಲ್ಡ್‌ ಸ್ಟೋರೇಜ್‌ – ಗೋದಾಮು ಸೇವೆ, ಖಾಸಗಿ ಭದ್ರತಾ ಸೇವೆಗಳಿಗೆ ಅವಕಾಶವಿದೆ.

– ನಿರ್ಮಾಣ ಸಾಮಗ್ರಿ ಅಂಗಡಿಗಳು, ಸಂಸ್ಥೆಗಳಿಗೆ ತೆರೆಯಲು ಅವಕಾಶವಿದೆ.

ಏನಿರಲ್ಲ:

– ಸಿನೆಮಾ ಹಾಲ್‌, ಶಾಪಿಂಗ್‌ ಮಾಲ್‌, ಜಿಮ್‌, ಯೋಗ ಕೇಂದ್ರ, ಸ್ಪಾ, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನರಂಜನೆ ಉದ್ಯಾನ, ಕ್ಲಬ್‌, ಚಿತ್ರ ಮಂದಿರ, ಬಾರ್‌ ಮತ್ತು ಸಭಾಂಗಣ, ಅಸೆಂಬ್ಲಿ ಹಾಲ್‌ ಮತ್ತು ಅಂತಹ ಸ್ಥಳಗಳು ಮುಚ್ಚಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next