Advertisement

ಬುಧವಾರದ ರಾಶಿ ಫಲ: ಸಾಂಸಾರಿಕ ಸುಖ ವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ನಿರೀಕ್ಷಿತ ಧನಾಗಮ

07:32 AM Nov 30, 2022 | Team Udayavani |

ಮೇಷ: ವಿದ್ಯಾ ಜ್ಞಾನ ವೃದ್ಧಿ. ನಾಯಕತ್ವ ಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಸರ್ವಜನರಿಂದ ಗೌರವ. ಭ್ರಾತೃಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ ಪ್ರಯಾಣ ಸುಖಕರ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಯೋಗ.

Advertisement

ವೃಷಭ: ಉದ್ಯೋಗದಲ್ಲಿ ಉತ್ತಮ ಬದಲಾವಣೆ ಅವಕಾಶ. ಸ್ವಾವಲಂಬಿಗಳಾಗಿ ಕಾರ್ಯಸಾಧಿಸಿಕೊಳ್ಳುವ ದಂಪತಿಗಳಿಗೆ ಪಾಲುದಾರಿಕಾ ವ್ಯವಹಾರಸ್ಥರಿಗೆ ಆಹಾರೋದ್ಯಮ ಕೃಷಿ ಹೈನುಗಾರರಿಗೆ ಶುಭ ಫ‌ಲ. ಸಾಂಸಾರಿಕ ಸುಖ ವೃದ್ಧಿ. ಪರೋಪಕಾರ ಮಾಡುವಾಗ ಜಾಗ್ರತೆ.

ಮಿಥುನ: ಸಂಚಾರದಿಂದ ನಿರೀಕ್ಷಿತ ಸಫ‌ಲತೆ. ಉತ್ತಮ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ಪ್ರೋತ್ಸಾಹ. ಉದಾರತೆಯಿಂದಲೂ ಸಂದರ್ಭಕ್ಕೆ ಸರಿಯಾಗಿ ಬುದ್ದಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ.

ಕರ್ಕ: ಧಾರ್ಮಿಕ ಸಾಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೇ ತಾಳ್ಮೆ ಸಮಾದಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ.

ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫ‌ಲತೆ. ನಿರೀಕ್ಷಿತ ಧನಾಗಮ. ಸಹೋದರಾದಿ ಸಮಾನರಿಂದಲೂ ಕಾರ್ಮಿಕರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.

Advertisement

ಕನ್ಯಾ: ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫ‌ಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಶುಭ.

ತುಲಾ: ಅನಿರೀಕ್ಷಿತ ಭಾಗ್ಯ ವೃದ್ಧಿ. ಗುರು ಹಿರಿಯರ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಹೆಚ್ಚಿದ ಸಂತೋಷ. ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಿತ್ರರಿಂದ ಸಂತೋಷ ವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಸ್ಥಾನಮಾನ ಲಭಿಸಿದ ಸಂತೋಷ. ದೂರದ ವ್ಯವಹಾರಗಳಲ್ಲಿ ಧನಾಗಮನ. ಚುರುಕುತನ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಮಿತ್ರರ ಸಹಕಾರ. ಭೂಮಿ ಆಸ್ತಿ ವಿಚಾರಗಳ ಹೆಚ್ಚಿದ ಜವಾಬ್ದಾರಿ.

ಧನು: ಉದ್ಯೋಗ ವ್ಯವಹಾರ ಕೆಲಸ ಕಾರ್ಯಗಳಲ್ಲಿ ತನ್ಮಯತೆ. ನಿರೀಕ್ಷಿತ ಫ‌ಲ ಲಭಿಸಿದ ತೃಪ್ತಿ. ಸ್ಥಾನ ಮಾನ ಗೌರವ ಪ್ರಾಪ್ತಿ. ಮಕ್ಕಳಿಂದ ಸಂತೋಷ. ವಿದ್ಯೆ ಜ್ಞಾನ ಪ್ರಗತಿ ಕೀರ್ತಿ ಸಂಪಾದನೆ. ಅನಿರೀಕ್ಷಿತ ಧನ ಸಂಚಯನ. ಗುರುಹಿರಿಯರ ಮಾರ್ಗದರ್ಶನದ ಲಾಭ ಪಡೆಯಿರಿ.

ಮಕರ: ಆರೋಗ್ಯ ಗಮನಿಸಿ. ದೇಹಕ್ಕೆ ಹೆಚ್ಚು ಶ್ರಮ ನೀಡದಂತೆ ಕಾರೊÂàನ್ಮುಖರಾಗಿರಿ. ಅನಿರೀಕ್ಷಿತ ಬಹು ಉದ್ಯೋಗ ಜವಾಬ್ದಾರಿ. ಸಫ‌ಲತೆ. ಜ್ಞಾನಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಕುಂಭ: ಮಾನಸಿಕ ನೆಮ್ಮದಿ ಚುರುಕುತನದಿಂದ ಕೂಡಿದ ಕಾರ್ಯವೈಖರಿ. ವಿದ್ಯೆ ಜ್ಞಾನ ಸಂಬಂಧೀ ವಿಚಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಆರೋಗ್ಯದಲ್ಲಿ ಸುಧಾರಣೆ. ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರದಲ್ಲಿ ಎಚ್ಚರಿಕೆಯ ನಡೆಯಿಂದ ಲಾಭ.

ಮೀನ: ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರ ಪ್ರಯಾಣ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next