Advertisement

ಬುಧವಾರದ ರಾಶಿ ಫಲ : ನಿರೀಕ್ಷೆಗೂ ಮೀರಿದ ಸ್ಥಾನ, ವ್ಯವಹಾರಗಳಲ್ಲಿ ಹೆಚ್ಚಿದ ಧನಲಾಭ

07:24 AM Oct 19, 2022 | Team Udayavani |

ಮೇಷ: ಗುರುಹಿರಿಯರ ಆಶೀರ್ವಾದ ಸಹಕಾರ. ನಿರೀಕ್ಷಿತ ಸ್ಥಾನ ಮಾನ ಗೌರವ ಪ್ರಾಪ್ತಿ. ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ. ದಾಂಪತ್ಯ ತೃಪ್ತಿಕರ.

Advertisement

ವೃಷಭ: ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಜನಮನ್ನಣೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಧನಲಾಭ. ದಾಂಪತ್ಯ ತೃಪ್ತಿಕರ. ಗುರುಹಿರಿಯರಿಂದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಮಿಥುನ: ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದಾಂಪತ್ಯ ಸುಖ ವೃದ್ಧಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ. ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು. ಮಿತ್ರರಿಂದ ಸಾಮಾನ್ಯ ಪ್ರೋತ್ಸಾಹ.

ಕರ್ಕ: ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಎದುರಾದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡು ಬಂದಾವು. ದಾಂಪತ್ಯ ಸುಖ ಮಧ್ಯಮ. ಗುರುಹಿರಿಯರ ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು .

ಸಿಂಹ: ದೂರ ಸಂಚಾರ ಸಂಭವ. ಪರಿಸ್ಥಿತಿಗೆ ಸರಿಯಾಗಿ ಕಾರ್ಯವೈಖರಿ. ಕೆಲವೊಮ್ಮೆ ಕುಚೇಷ್ಠೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುರುಹಿರಿಯರ ಆರೋಗ್ಯ ಗಮನಹರಿಸಿ. ದಾಂಪತ್ಯ ತೃಪ್ತಿಕರ.

Advertisement

ಕನ್ಯಾ: ಆರೋಗ್ಯದ ಬಗ್ಗೆ ಗಮನಿಸಿ. ಅನಾವಶ್ಯಕ ಸ್ಪರ್ಧೆಗೆ ಆಸ್ಪದ ನೀಡದಿರಿ. ಬಂಧುಮಿತ್ರರಲ್ಲಿ ಸಂಯಮದ ನಡೆ ಅಗತ್ಯ. ದಾಂಪತ್ಯ ಸುಖ ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅವಕಾಶ. ನಿರೀಕ್ಷೆಗೂ ಮೀರಿದ ಧನಾಗಮನ.

ತುಲಾ: ಧಾರ್ಮಿಕ ಕಾರ್ಯಗಳ ನೇತೃತ್ವ. ದೀರ್ಘ‌ ಪ್ರಯಾಣ. ಮಾನಸಿಕ ಒತ್ತಡದಿಂದ ಕೂಡಿದ ಜವಾಬ್ದಾರಿ. ಚತುರತೆಯಿಂದ ಮಾಡುವ ಕಾರ್ಯಗಳು. ಧನಸಂಪತ್ತು ವೃದ್ಧಿ. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ. ಗುರುಹಿರಿಯರಿಂದ ಸಂತೋಷ.

ವೃಶ್ಚಿಕ: ದಂಪತಿಗಳಿಗೆ ಪರಸ್ಪರರಿಂದ ಲಾಭ. ದೂರ ಪ್ರಯಾಣ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಜವಾಬ್ದಾರಿಯುತ ಕಾರ್ಯ ವೈಖರಿ. ಆಸ್ತಿ ವಿಚಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಹಿರಿಯರ ಆರೋಗ್ಯ ಗಮನಿಸಿ.

ಧನು: ಗೃಹೋಪ ವಸ್ತುಗಳ ಸಂಗ್ರಹ. ಹೆಚ್ಚಿದ ಜನಸಂಪರ್ಕ. ಗಣ್ಯರ ಭೇಟಿ. ದೂರದ ಬಂಧುಮಿತ್ರರ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ಉತ್ತಮ ಸಂಬಂಧ ಕೂಡಿ ಬರುವ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ.

ಮಕರ: ಅಧ್ಯಯನಶೀಲತೆ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಪ್ರಾಪ್ತಿ. ಸತ್ಕರ್ಮಕ್ಕೆ ಧನಾಗಮನ. ದಾಂಪತ್ಯದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಗುರು ಹಿರಿಯರಲ್ಲಿ ತಾಳ್ಮೆ ಸಂಯಮದಿಂದ ವರ್ತಿಸಿ.

ಕುಂಭ: ಆಸ್ತಿ ವಿಚಾರಗಳಲ್ಲಿ ಪ್ರಗತಿ. ಗೃಹೋಪ ವಸ್ತುಗಳ ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಬಂಧುಮಿತ್ರರ ಸಹಾಯ ಸಹಕಾರದಿಂದ ಅಭಿವೃದ್ಧಿ. ಹೆಚ್ಚಿದ ವರಮಾನ. ಗುರುಹಿರಿಯರಿಂದ ಸಂತೋಷ. ಕೀರ್ತಿ ಗೌರವ ಲಭ್ಯ

ಮೀನ: ಆಭರಣಾದಿ ಖರೀದಿಗಳು. ಮನೆಗೆ ಸಂಬಂಧಿಸಿದ ವಸ್ತು ಸಂಗ್ರಹ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ ವೃದ್ಧಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದಾನ ಧರ್ಮದಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಯೋಗ.

Advertisement

Udayavani is now on Telegram. Click here to join our channel and stay updated with the latest news.

Next