Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:15 AM Sep 28, 2022 | Team Udayavani |

ಮೇಷ:

Advertisement

ರಾಜಕೀಯ ಕ್ಷೇತ್ರದವರಿಗೆ ಅಭಿವೃದ್ಧಿ. ಕ್ರಯ ವಿಕ್ರಯದಲ್ಲಿ ತಾಳ್ಮೆ ಸಹನೆ ಅಗತ್ಯ. ಸ್ವಪ್ರಯತ್ನದಿಂದ ಧನಾಗಮ. ಸಹೋದರಾದಿ ವರ್ಗದಲ್ಲಿ ಪ್ರೋತ್ಸಾಹ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಅರಣ್ಯ ಪ್ರದೇಶ ಸಂಚಾರ. ದೇವತಾ ಸ್ಥಳ ಸಂದರ್ಶನ.

ವೃಷಭ:

ಬಂಧುಗಳಿಂದ ಪ್ರೋತ್ಸಾಹ. ಗಂಟಲು ಸಂಬಂಧ ಆರೋಗ್ಯ ಗಮನಿಸಿ. ಗೌರವದಿಂದ ಕೂಡಿದ ಸ್ಥಾನಮಾನ ಧನಾರ್ಜನೆ. ಕುಟುಂಬ ಸಮೇತ ಸಂಚಾರ ಮಕ್ಕಳ ವಿಚಾರದಲ್ಲಿ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಚಟುವಟಿಕೆ. ಹಿರಿಯರ ಆರೋಗ್ಯ ಗಮನಿಸಿ.

ಮಿಥುನ:

Advertisement

ಬಹು ಮಾತನಾಡಿ ತೊಂದರೆಗೊಳ ಗಾಗದಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ, ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ. ಸ್ತ್ರೀ ಪುರುಷರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ಹಿರಿಯರ ಆರೋಗ್ಯ ಉತ್ತಮ.

ಕರ್ಕ:

ಮಕ್ಕಳಲ್ಲಿ ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯಾಣದಿಂದ ಸುಖ ಸಂತೋಷ. ಬರಬೇಕಾದ ಸಂಪತ್ತಿಗೆ ಪ್ರಯತ್ನಿಸಿದರೆ ಸಿಗುವ ಅವಕಾಶ. ಸಹೋದರರಿಂದ ಸಂತೋಷ ವಾರ್ತೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ. ದೇವತಾ ಕಾರ್ಯ ತೃಪ್ತಿದಾಯಕ.

ಸಿಂಹ:

ಕೆಲಸ ಕಾರ್ಯಗಳ ಗುಣದೋಷ ಅರಿಯದೆ ಉತ್ಸಾಹದಿಂದ ಧುಮುಕದಿರಿ. ಸಮುದ್ರೋತ್ಪನ್ನ ವಸ್ತುಗಳಲ್ಲಿ ಆಸಕ್ತಿ. ದೇವತಾ ಕಾರ್ಯಕ್ಕೆ ಧನವ್ಯಯ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಗೃಹೋಪ ವಸ್ತು ಸಂಗ್ರಹ. ಆರೋಗ್ಯದ ಬಗ್ಗೆ ಗಮನಿಸಿ.

ಕನ್ಯಾ:

ನೀರಿನಿಂದ ಉದ್ಬವಿಸಿದ ಪದಾರ್ಥಗಳ ಕ್ರಯವಿಕ್ರಯದಲ್ಲಿಯೂ, ವಿದೇಶ ವ್ಯವಹಾರ ದಲ್ಲಿಯೂ ಉತ್ತಮ ಲಾಭದಾಯಕ. ವಿದ್ಯಾರ್ಥಿಗಳಿಗೆ ಸಂಶೋಧಕರರಿಗೆ ಅತ್ಯುತ್ತಮ ದಿನ. ಆರೋಗ್ಯದಲ್ಲಿ ಅಭಿವೃದ್ಧಿ. ದಾಂಪತ್ಯ ಸುಖ ಅನುಕೂಲಕರ.

ತುಲಾ:

ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ನೂತನ ಮಿತ್ರರ ಸಮಾಗಮ. ಧರ್ಮ ಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮೇಲಧಿಕಾರಿಗಳಿಂದ ಗುರುಗಳಿಂದ ಪ್ರೋತ್ಸಾಹ. ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಧನಾರ್ಜನೆ.

ವೃಶ್ಚಿಕ:

ಅಧಿಕ ಶ್ರಮವಹಿಸಿ ಮಿತ್ರರ ಸಹಯೋಗ ದಿಂದ ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವ ಹಾರದಲ್ಲಿ ಉತ್ತಮ ಅವಕಾಶ ಅಭಿವೃದ್ಧಿ. ಆಡ್ಯ ಮಹನೀಯರ ಸಂಪರ್ಕದಿಂದ ಸಂತೋಷ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಕಾಲ. ಆಹಾರೋಧ್ಯಮದಲ್ಲಿ ಪ್ರಗತಿ.

ಧನು:

ಗುರು ಹಿರಿಯರಲ್ಲಿ ಮೇಲಧಿಕಾರಿಗಳಲ್ಲಿ ಸಹನೆ ಉದಾರತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಧನಾರ್ಜನೆಗೆ ಕೊರತೆ ಇರದು. ಅನಗತ್ಯ ವಾರ್ತೆಗಳಿಗೆ ಕಿವಿಕೊಡದಿರಿ. ದಂಪತಿಗಳು ಪಾಲುದಾರರು ಪರಸ್ಪರ ಪ್ರೋತಾಹಿಸಿದರೆ ಉತ್ತಮ ಫ‌ಲ.

ಮಕರ:

ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯ ಲಾಭ. ಮಿತ್ರರಂತೆ ವರ್ತಿಸುವ ವ್ಯಕ್ತಿಗಳಿಂದಲೂ ಜಗಳ ಮಾಡುವ ಪ್ರವೃತ್ತಿಯವರಿಂದಲೂ ದೂರವಿರಿ. ಇಂದು ನಿಮಗೆ ಸ್ವಲ್ಪ ಕಿರಿಕಿರಿ ತೋರಿದರೂ ಬಹಳ ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುವಿರಿ.

ಕುಂಭ:

ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ನಿಷ್ಠುರ ಮಾಡದೇ, ಪ್ರೋತ್ಸಾಹಿಸಿ ನಿರೀಕ್ಷಿತ ಶುಭಫ‌ಲ ಅನುಭವಿಸಿ. ದೂರ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಉನ್ನತ ಅಧಿಕಾರಿಗಳಿಂದ ಲಾಭ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ.

ಮೀನ:

ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿ. ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ಕಾರ್ಮಿಕ ವರ್ಗದವರಿಗೆ ಪ್ರೋತಾಹಿಸಿ ನಿರೀಕ್ಷಿತ ಲಾಭ ಪಡೆಯಿರಿ. ಉದ್ಯೋಗದಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ, ಆಳವಾದ ಅಧ್ಯಯನಶೀಲರಿಗೆ ಉತ್ತಮ ಶುಭಫ‌ಲ. ರಾಜಕೀಯ ಕ್ಷೇತ್ರದಲ್ಲಿ ಗುಟ್ಟಿನ ವ್ಯವಹಾರದಿಂದ ಲಾಭ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next