Advertisement

ಮದುವೆ ಸೀಸನ್‌ ಆರಂಭ; ತ್ವಚೆಯ ಆರೈಕೆಗೆ ಮನೆಯಲ್ಲೇ ತಯಾರಿಸಿ ನೈಸರ್ಗಿಕ ಫೇಸ್‌ ಪ್ಯಾಕ್‌

05:36 PM Nov 28, 2022 | ಕಾವ್ಯಶ್ರೀ |

ಮದುವೆ ಸೀಸನ್‌ ಈಗಾಗಲೇ ಪ್ರಾರಂಭವಾಗಿದೆ. ಪಾರ್ಟಿ, ಫಂಕ್ಷನ್‌, ರಿಸೆಪ್ಷನ್, ಮೆಹಂದಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳಿಗೆ ಭೇಟಿ ನೀಡಬೇಕಾಗಿರುತ್ತದೆ. ಹೆಚ್ಚಿನವರು ಬೇರೆ  ಸಮಯಕ್ಕಿಂತ ಮದುವೆ ಸಮಯದಲ್ಲಿ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದರಲ್ಲೂ ಮದುವೆ, ಪಾರ್ಟಿ, ಫಂಕ್ಷನ್ ಇರುವಾಗ ಮುಖ ಕಾಂತಿಯುತವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಯಾವುದಾದರೂ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುವುದು ಅಥವಾ ದುಬಾರಿ ಕ್ರೀಮ್ ಬಳಸುವುದು ಸಾಮಾನ್ಯ.

Advertisement

ಇವೆಲ್ಲಾ ಚರ್ಮದ ಹೊಳಪಿಗೆ ಒಳ್ಳೆಯದೆ. ಆದರೆ ಕ್ರೀಮ್‌ನ ಪರಿಣಾಮ ಚರ್ಮಕ್ಕೆ ಸೀಮಿತ ಅವಧಿಗೆ ಮಾತ್ರ ಹೊಳಪು ನೀಡುತ್ತದೆ. ಆ ನಂತರ ಮುಖದ ಹೊಳಪು ಕೊನೆಗೊಳ್ಳುತ್ತದೆ. ಇದರಲ್ಲಿ ಕೆಲ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದೆ. ದುಬಾರಿ ಕ್ರೀಂನ ಬದಲಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ನೈಸರ್ಗಿಕ ಫೇಸ್ ಪ್ಯಾಕ್‌ ಗಳು ಹೊಳೆಯುವ ಚರ್ಮಕ್ಕೆ ಸಹಾಯ ಮಾಡುತ್ತದೆ.

ಫೇಸ್ ಪ್ಯಾಕ್‌ಗಳು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಉತ್ತಮ. ಪೋಷಕಾಂಶಗಳಿಂದ ತುಂಬಿರುವ ನೈಸರ್ಗಿಕ ಫೇಸ್ ಮಾಸ್ಕ್‌ಗಳು ಚರ್ಮದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.

ಮುಖ ಕಾಂತಿಯುತವಾಗಲು ಇಂತಹ ಕೆಲ ನೈಸರ್ಗಿಕ ಫೇಸ್‌ ಪ್ಯಾಕ್‌ಗಳ ಬಗ್ಗೆ ಇಲ್ಲಿದೆ ಕೆಲ ಮಾಹಿತಿ:

ನಿಂಬೆ ರಸ- ಅಲೋವೆರಾ ಜೆಲ್‌:

Advertisement

ಅಲೋವೆರಾ ಜೆಲ್‌ಗೆ ನಿಂಬೆ ರಸ ಸೇರಿಸುವುದು ನೈಸರ್ಗಿಕ ಫೇಶಿಯಲ್ ಮಾಡುವ ಅತ್ಯುತ್ತಮ ವಿಧಾನ. ಅಲೋವೆರಾ ಜೆಲ್‌ಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ಮುಖವನ್ನು ಸ್ವಚ್ಛಗೊಳಿಸಿ.

ಶೀಗಂಧ- ಅರಶಿನ:

ಶ್ರೀಗಂಧದ ಪುಡಿ, ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನ, ಸ್ವಲ್ಪ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ ಚರ್ಮ, ಮುಖ, ಕುತ್ತಿಗೆಗೆ ಹಚ್ಚಿ ಅರ್ಧ ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ಸ್ವಚ್ಛಗೊಳಿಸಿ.

ಶೀಗಂಧ- ಅಲೋವೆರಾ:

ಅಲೋವೆರಾ ಜೆಲ್ ಗೆ ಶ್ರೀಗಂಧದ ಪುಡಿ ಬೆರೆಸಿ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಚೆನ್ನಾಗಿ ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ವಾರಕ್ಕೆರಡು ಬಾರಿ ಬಳಸಿದರೆ ಮುಖ ಹೊಳಪಾಗುತ್ತದೆ.

ಚಾಕೊಲೇಟ್- ಜೇನುತುಪ್ಪ-ನಿಂಬೆ

ಕರಗಿಸಿದ ಡಾರ್ಕ್ ಚಾಕೊಲೇಟ್ ಗೆ ಜೇನುತುಪ್ಪ ಹಾಗೂ ನಿಂಬೆ ರಸ ಹಿಂಡಿ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ಜೇನುತುಪ್ಪ- ಅಲೋವೆರಾ:

ಜೇನುತುಪ್ಪಕ್ಕೆ ಅಲೋವೆರಾ ಜೆಲ್‌ ಸೇರಿಸಿ ಮುಖದ ಮೇಲೆ ಚೆನ್ನಾಗಿ ಮಸಾಜ್ ಮಾಡಿ 15 ನಿಮಿಷಗಳ ಕಾಲ ಅಥವಾ ಪೂರ್ತಿ ಒಣಗಿದ ಬಳಿಕ ಮುಖವನ್ನು ಚೆನ್ನಾಗಿ ತೊಳೆಯಿರಿ.

ಆವಕಾಡೊ-ಬಾದಾಮಿ

ಆವಕಾಡೊ ತಿರುಳನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದಕ್ಕೆ ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ಈ ಫೇಸ್ ಮಾಸ್ಕ್ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೂ ಹಚ್ಚಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ಅಕ್ಕಿಹಿಟ್ಟು-ನಿಂಬೆ- ಅಲೋವೆರಾ ಜೆಲ್

ಅಕ್ಕಿ ಹಿಟ್ಟಿನೊಂದಿಗೆ ನಿಂಬೆ ಮತ್ತು ಅಲೋವೆರಾ ಜೆಲ್ ಬೆರೆಸಿ ಮುಖಕ್ಕೆ ಹಚ್ಚಿ. ಈ ಮಾಸ್ಕ್ ಒಣಗಿದ ಬಳಿಕ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ತೊಳೆಯಿರಿ. ಈ ಪೇಸ್ಟ್‌ನಿಂದ ಸ್ಕ್ರಬ್ ಮಾಡುವುದರಿಂದ ಮುಖದಲ್ಲಿನ ಸತ್ವ ರಹಿತ ಚರ್ಮದ ಕೋಶಗಳನ್ನು ತೆಗೆದುಹಾಕುವುದರೊಂದಿಗೆ ಮುಖ ಹೊಳೆಯಲು ಕೂಡಾ ಸಹಕರಿಯಾಗಿದೆ.

ಉತ್ತಮ ಫಲಿತಾಂಶಕ್ಕಾಗಿ ಫೇಸ್‌ ಪ್ಯಾಕ್‌ ಹಚ್ಚುವ ಮುನ್ನ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಮುಖದ ಜೊತೆಗೆ ಕುತ್ತಿಗೆ ಭಾಗಕ್ಕೂ ಹಚ್ಚಬೇಕು. ವಾರಕ್ಕೆ 2-3 ಬಾರಿ ಹಚ್ಚುವುದು ಉತ್ತಮ.

*ಕಾವ್ಯಶ್ರೀ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next