Advertisement

Hostel ಊಟ ವ್ಯವಸ್ಥೆ ವೀಕ್ಷಿಸುವ ಜಾಲತಾಣಕ್ಕೆ ಚಾಲನೆ

10:35 PM Nov 30, 2024 | Team Udayavani |

ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಪ್ರತಿನಿತ್ಯ ನೀಡುವ ಉಪಾಹಾರ, ಊಟದ ವ್ಯವಸ್ಥೆಯನ್ನು ಸಾರ್ವಜನಿಕರು ಜಾಲತಾಣದ ಮೂಲಕ ಮುಕ್ತವಾಗಿ ವೀಕ್ಷಿಸಲು, ಪರಿಶೀಲಿಸಲು ಹಾಗೂ ಸಲಹೆ ನೀಡುವ ವ್ಯವಸ್ಥೆಗೆ ಚಾಮರಾಜನಗರದಲ್ಲಿ ಚಾಲನೆ ನೀಡಲಾಯಿತು.

Advertisement

ದೇಶದಲ್ಲೇ ಪ್ರಥಮ ಪ್ರಯತ್ನವಾಗಿ ಪೈಲಟ್‌ ಜಿಲ್ಲೆಗಳಾಗಿ ಚಾಮರಾಜನಗರ ಹಾಗೂ ಬೀದರ್‌ ಆಯ್ಕೆಯಾಗಿವೆ. ಪ್ರತಿನಿತ್ಯ ನೀಡುತ್ತಿರುವ ತಿಂಡಿ, ಊಟದ ವಿವರಗಳನ್ನು “ಎಕ್ಸ್‌’ ಖಾತೆಯಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಲಿಂಕ್‌ಗಳಿಗಾಗಿ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಸಚಿವ‌ ಡಾ| ಎಚ್‌.ಸಿ. ಮಹದೇವಪ್ಪ ಅವರು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಗರದಲ್ಲಿ ಜಾಲತಾಣಕ್ಕೆ ಚಾಲನೆ ನೀಡಿದರು.

ಡಾ| ಮಹದೇವಪ್ಪ ಮಾತನಾಡಿ, ಈ ಎರಡು ಜಿಲ್ಲೆಗಳ ಸಫ‌ಲತೆ ಯಶಸ್ಸಿನ ಆಧಾರದ ಮೇಲೆ ರಾಜ್ಯದ ಉಳಿದ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು. ಪೋಷಕರು ಸೇರಿದಂತೆ ಸಾರ್ವಜನಿಕರು https://foodswdok.in/cr ಮೂಲಕ ವೀಕ್ಷಣೆ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next