Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿದ್ಯಾರ್ಥಿಯಿಂದ ವೆಬ್‌ಸೈಟ್‌ ಹ್ಯಾಕ್

07:00 AM Oct 04, 2017 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯೂನಿಕೇಷನ್‌ ವಿದ್ಯಾರ್ಥಿ ತನ್ನದೇ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌ ಮಾಡಿ, ಉತ್ತರ ಪತ್ರಿಕೆಯ ಜೆರಾಕ್ಸ್‌ ಪ್ರತಿ ಮತ್ತು ಫೋಟೋ ಕಾμಗೆ ಶುಲ್ಕ ಪಾವತಿಸದೇ ಅರ್ಜಿ ಸಲ್ಲಿಸಿದ್ದಾನೆ.

Advertisement

ವಿಟಿಯು ಆಡಳಿತ ಮಂಡಳಿಯಿಂದ ಉತ್ತರ ಪತ್ರಿಕೆಯ ಫೋಟೋ ಕಾμ ಮೇಲ್‌ ಮಾಡಿದ ನಂತರ, ಆ ವಿದ್ಯಾರ್ಥಿ ವಿವಿಗೆ ಹಣ ಪಾವತಿಸಿದ್ದಾನೆ. ಈ ಪ್ರಕರಣವು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಒಂದಾಗಿರುವ ವಿಟಿಯು ವೆಬ್‌ಸೈಟ್‌ ಯಾರು ಬೇಕಾದರೂ ಹ್ಯಾಕ್‌ ಮಾಡಬಹುದಾದಷ್ಟು ದುರ್ಬಲವೇ
ಎಂಬ ಚರ್ಚೆಗೆ ಗ್ರಾಸವಾಗಿದೆ. 

ವಿಟಿಯು ವೆಬ್‌ಸೈಟ್‌ನಲ್ಲಿ 3 ಲಕ್ಷ ವಿದ್ಯಾರ್ಥಿಗಳ ಅಂಕಪಟ್ಟಿ, ಫ‌ಲಿತಾಂಶ, ಪರೀಕ್ಷೆಯಲ್ಲಿ ಪಡೆದ ಅಂಕ ಸೇರಿ
ಎಲ್ಲಾ ಮಾಹಿತಿ ಲಭ್ಯವಿದೆ. ಗೌಪ್ಯತೆಯ ಅಂಶಗಳನ್ನು ವಿವಿಯ ಆಡಳಿತ ಮಂಡಳಿ ಹಾಗೂ 17 ಸಾವಿರ
ಉಪನ್ಯಾಸಕರು ಮಾತ್ರ ಪಡೆಯಲು ಸಾಧ್ಯ. ಆದರೆ, ವಿಟಿಯು ಅಂತಿಮ ವರ್ಷದ ವಿದ್ಯಾರ್ಥಿ ಸಾಯಿ ಕೆ. ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದಾನೆ. ವೆಬ್‌ಸೈಟ್‌ ಹ್ಯಾಕ್‌ ಆಗಿರುವ ಬಗ್ಗೆ ಆಡಳಿತ ಮಂಡಳಿಗೆ ಎಸ್‌ಎಂಎಸ್‌ ಕೂಡ ಹೋಗಿಲ್ಲ. 

ಯಾರಾದರೂ ವೆಬ್‌ಸೈಟ್‌ ಒಳಗೆ ಪ್ರವೇಶಿಸಿ, ಗೌಪ್ಯ ಮಾಹಿತಿ ಪಡೆದಾಗ, ಮಾಹಿತಿ ಬದಲಾವಣೆ ಮಾಡಿದಾಗ ಸಂಬಂಧಪಟ್ಟ ಉಪನ್ಯಾಸಕರಿಗೆ ಅಥವಾ ಅಡ್ಮಿನ್‌ಗೆ ಅಲರ್ಟ್‌ ಸಂದೇಶ ಹೋಗಬೇಕು. ವಿಟಿಯು ವೆಬ್‌ಸೈಟ್‌
ನಲ್ಲಿ ಆ ವ್ಯವಸ್ಥೆ ಇಲ್ಲ.

ವಿಟಿಯು ವೆಬ್‌ಸೈಟ್‌ ಅತ್ಯಂತ ಸೆಕ್ಯೂರ್‌ ಆಗಿದೆ. ಅಷ್ಟು ಸುಲಭದಲ್ಲಿ ಯಾರಿಗೂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸಿ ಸಿದಟಛಿಪಡಿಸಲಾಗಿದೆ. ವೆಬ್‌ಸೈಟ್‌ ಉನ್ನತೀಕರಿಸಲು ಇತ್ತೀಚೆಗಷ್ಟೆ ನಿರ್ಧಾರ ತೆಗೆದುಕೊಂಡಿದ್ದೇವೆ. ಆ ವಿದ್ಯಾರ್ಥಿಗೆ ನೋಟಿಸ್‌ ನೀಡಿದ್ದೇವೆ. ಭದ್ರತೆಗೆಬೇಕಾದ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ವಿಟಿಯು ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next