Advertisement

ಪ್ರಭಾಸ್‌,ಅಲ್ಲು ಅರ್ಜುನ್‌,ಯಶ್:‌ ಹಿಂದಿ ಮಾರ್ಕೆಟ್‌ನಲ್ಲಿ ಇವರದ್ದೇ ಹವಾ: ಗೆದ್ದವರು ಯಾರು?

05:46 PM Jul 08, 2023 | Team Udayavani |

ದಕ್ಷಿಣ ಭಾರತದ ಸಿನಿಮಾಗಳು ಇಂದು ಪ್ಯಾನ್ ಇಂಡಿಯಾದಲ್ಲಿ ಮಿಂಚುತ್ತಿದೆ. ದಕ್ಷಿಣದ ನಟರು ಇಂದು ಆಯಾ ಭಾಷೆಗೆ ಮಾತ್ರ ಸೀಮಿತವಾಗದೆ, ಎಲ್ಲಾ ಭಾಷೆಯಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಖಂಡಿತವಾಗಿಯೂ ಸಿನಿಮಾಗಳಿಂದು ಒಂದು ಭಾಷೆ ಅಥವಾ ಒಂದು ನಿರ್ದಿಷ್ಟವಾದ ಪ್ರೇಕ್ಷಕ  ವರ್ಗವನ್ನು ಇಟ್ಟುಕೊಂಡು ತಯಾರಾಗುತ್ತಿಲ್ಲ. ಒಂದು ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಸಾಗಿದರೆ. ಆ ಸಿನಿಮಾವನ್ನು ಡಬ್ ಮಾಡಿ ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಅಥವಾ ಟಿವಿಯಲ್ಲಿ ಪ್ರದರ್ಶಿಸುವ ಕಾಲವೊಂದಿತ್ತು. ಆದರೆ ಇಂದು ನೇರವಾಗಿ ಪಂಚಭಾಷೆಯಲ್ಲೂ ಸಿನಿಮಾಗಳು ತಯರಾಗುತ್ತಿದೆ. ಅಂದರೆ ಪ್ಯಾನ್ ಇಂಡಿಯಾ.

Advertisement

ದಕ್ಷಿಣದ ಕಲಾವಿದರು ಹಿಂದಿ ಭಾಷಾ ಸಿನಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. ‘ಬಾಹುಬಲಿ’ ಯಿಂದ ಶುರುವಾದ ಈ ಟ್ರೆಂಡ್ ಮೊನ್ನೆ ಮೊನ್ನೆ ಬಂದ ‘ಆದಿಪುರುಷ್’ ವರೆಗೂ ಮುಂದುವರೆದಿದೆ.

ಪ್ರಭಾಸ್ : 2015 ರಲ್ಲಿ ರಾಜಾಮೌಳಿ ಅವರ ‘ಬಾಹುಬಲಿ’ ತೆಲುಗು ಭಾಷೆಯಲ್ಲಿ ರಿಲೀಸ್ ಆಗುವುದರ ಜೊತೆಗೆ ಹಿಂದಿಯಲ್ಲೂ ಬಿಡುಗಡೆ ಆಗಿತ್ತು. ಇದು ದಕ್ಷಿಣದ ನಟನೊಬ್ಬ ಹಿಂದಿ ಸಿನಿಮಾ ಮಾರ್ಕೆಟ್ ನಲ್ಲಿ ಮಿಂಚುವಂತೆ ಮಾಡಿತ್ತು. ಸಿನಿಮಾದ ಮೊದಲ ಭಾಗ ಹಿಟ್ ಆಗಿ ಎರಡನೇ ಭಾಗ ತೆರೆಗೆ ಬರುವ ವೇಳೆಗೆ ಆದಾಗಲೇ ಹಿಂದಿ ಮಾರ್ಕೆಟ್ ನಲ್ಲಿ  ಟಾಲಿವುಡ್ ನಟನೊಬ್ಬ ತನ್ನದೇ ಆದ ಪ್ರೇಕ್ಷಕರ ವರ್ಗವನ್ನು ಸೃಷ್ಟಿಸಿಕೊಂಡಿದ್ದರು.  ಎಲ್ಲಿಯವರೆಗೆ ಅಂದರೆ ಪ್ರಭಾಸ್ ಅವರ ‘ಬಾಹುಬಲಿ-2’ ಸಿನಿಮಾದ ಬಳಿಕ ಮತ್ತೆ ಮೂರು ಸಿನಿಮಾಗಳಾದ  ‘ಸಾಹೋ’, ‘ರಾಧೆ ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳಿಗೆ ಪ್ಯಾನ್ ಇಂಡಿಯಾ ಮಾರ್ಕೆಟ್ ವಿಶೇಷವಾಗಿ ಹಿಂದಿ ಮಾರ್ಕೆಟ್ ನಲ್ಲಿ  ಹೆಚ್ಚು ಬೇಡಿಕೆಗಳಿತ್ತು.

ಈ ಮೂರು ಸಿನಿಮಾಗಳು ಹಾಕಿದ ಹಣಕ್ಕಿಂತ ಹಚ್ಚೇ ಹಣವನ್ನು ತಂದುಕೊಟ್ಟಿತು. ಆದರೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದವು.

ಹಿಂದಿ ಮಾರ್ಕೆಟ್ ನಲ್ಲಿ ಪ್ರಭಾಸ್ ಅವರಿಗೆ ಅದ್ದೂರಿ ಯಶಸ್ಸು ಸಿಕ್ಕಿದೆ. ಆ ಬಳಿಕದ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು. ಪ್ರಶಾಂತ್ ನೀಲ್ ಅವರ ‘ಸಲಾರ್’ ಮತ್ತೆ ಹಿಂದಿ ಮಾರ್ಕೆಟ್ ನಲ್ಲಿ ಪ್ರಭಾಸ್ ಅವರ ಸಾಮರ್ಥ್ಯವನ್ನು ತೋರಿಸಬಹುದೆಂದು ಸಿನಿ ವ್ಯವಹಾರಗಳ ವಿಶ್ಲೇಷಕ ರಮೇಶ್​ ಬಾಲ ಹೇಳುತ್ತಾರೆ.

Advertisement

ಹಿಂದಿಯಲ್ಲಿ:

ಬಾಹುಬಲಿ: ದಿ ಬಿಗಿನಿಂಗ್ –  118.5 ಕೋಟಿ ರೂ.

ಬಾಹುಬಲಿ: ದಿ ಕನ್‌ಕ್ಲೂಷನ್ – 510.99 ಕೋಟಿ ರೂ.

ಸಾಹೋ –  168 ಕೋಟಿ ರೂ.

ರಾಧೆ ಶ್ಯಾಮ್ –  19.2 ಕೋಟಿ ರೂ.

ಆದಿಪುರುಷ –  148.98 ಕೋಟಿ ರೂ.

ಅಲ್ಲು ಅರ್ಜುನ್ :

ಇನ್ನು ಟಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪರಿಚಯ ಹಿಂದಿ ಮಾರ್ಕೆಟ್ ನಲ್ಲಿ ಹೊಸತೇನಲ್ಲ. ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬಂದಿದ್ದು, ಅಲ್ಲು ಅರ್ಜುನ್  ಹಿಂದಿ ಸಿನಿಮಾರಂಗದಲ್ಲಿ ಜನಪ್ರಿಯತೆಗೆ ಪ್ರಮುಖ ಕಾರಣ. ಆದರೆ ಈ ಮೇಲೆಯೇ ಹೇಳಿದಂತೆ ಅಲ್ಲು ಅರ್ಜುನ್ ಪರಿಚಯ ಹಿಂದಿ ಪ್ರೇಕ್ಷಕರಿಗೆ ಹೊಸತೇನಲ್ಲ. ಅವರ ‘ಪುಷ್ಪ’ ಸಿನಿಮಾ ರಿಲೀಸ್ ಆಗುವ ಮೊದಲೇ ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಸಿನಿಮಾ ‘ಅಲಾ ವೈಕುಂಠಪುರಮುಲೊ’ ಸಿನಿಮಾ ಸೇರಿದಂತೆ ಇತರ ಹಿಂದಿ ಸಿನಿಮಾಗಳು ಹಿಂದಿಗೆ ಡಬ್ ಆಗಿ ಟಿವಿ ಹಾಗೂ ಯೂಟ್ಯೂಬ್ ‌ನಲ್ಲಿ ಬಂದಿತ್ತು. ಇದು ಅಲ್ಲು ಅರ್ಜುನ್ ಅವರ ಹಿಂದಿ ಮಾರ್ಕೆಟ್ ಗೆ ಪ್ಲಸ್ ಆಗಿತ್ತು.

ಅಲ್ಲು ಅರ್ಜುನ್ ಅವರ ‘ಪುಷ್ಪ-2’ ಸಿನಿಮಾಕ್ಕೆ ಹಿಂದಿ ಮಾರ್ಕೆಟ್ ನಲ್ಲಿ ದೊಡ್ಡಮಟ್ಟದಲ್ಲಿ ಬೇಡಿಕೆಯಿದೆ.

ಹಿಂದಿಯಲ್ಲಿ: ಪುಷ್ಪ: ದಿ ರೈಸ್ – ಭಾಗ 1 (2021)  – 106.35 ಕೋಟಿ ರೂ. ಗಳಿಕೆ.

ಯಶ್ :

ಅಂದು ಸ್ಯಾಂಡಲ್ ವುಡ್ ನಟನಾಗಿ ಮೊದಲ ಬಾರಿ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ನಟಿಸಿ ಇಂದು ಗ್ಲೋಬಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹಿಂದಿ ಮಾರ್ಕೆಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾವೆಂದರೆ ಅದು ‘ಕೆಜಿಎಫ್’ . ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಕನ್ನಡ ಮಾತ್ರವಲ್ಲದೆ ಬಹುದೊಡ್ಡ ಮಾರ್ಕೆಟ್ ಆಗಿರುವ ಬಾಲಿವುಡ್ ನಲ್ಲೂ ಭರ್ಜರಿ ಗಳಿಕೆ ಕಂಡಿತು. ಮೊದಲು ‘ಕೆಜಿಎಫ್ -1’ ಮೂರು ವರ್ಷದ ಬಳಿಕ ಬಂದ ‘ಕೆಜಿಎಫ್-2’ ಯಶ್ ಅವರನ್ನು ದೊಡ್ಡ ಸ್ಟಾರ್ ಆಗಮಿಸಿತು. ಎಲ್ಲಿಯವರೆಗೆ ಅಂದರೆ ಮೂರು ವರ್ಷದ ಕಾಯುವಿಕೆ ಯಶ್ ಅವರನ್ನು ಆದಾಗಲೇ ಹಿಂದಿ ಸಿನಿಮಾ ವರ್ಗದಲ್ಲಿ ‘ರಾಕಿ ಭಾಯ್’ ಆಗಿಸಿತ್ತು. ಅಂತಿಮವಾಗಿ ಸಿನಿಮಾದ ಎರಡನೇ ಭಾಗ ತೆರೆಗೆ ಬಂದಾಗ ಅದು‌ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸುಗಳಿಸಿತು. ಮಾಡಿದ್ದು ಎರಡೇ ಪ್ಯಾನ್ ಇಂಡಿಯಾ ಸಿನಿಮಾಗಿದ್ದರೂ ಯಶ್ ಅವರ ಮಾರ್ಕೆಟ್ ಬೇರೆಯದೇ ಲೆವೆಲ್ ನದ್ದಾಗಿದೆ. ಅವರ ಮುಂದಿನ ಸಿನಿಮಾ ಯಾವುದು ಎನ್ನುವುದು ಇನ್ನು ಗೊತ್ತಾಗದಿದ್ದರೂ ಅದು ಬಿಟೌನ್ ನಲ್ಲೂ ಟಾಕ್ ಆಫ್ ಟೌನ್ ಆಗಿದೆ.

ಹಿಂದಿಯಲ್ಲಿ: ಕೆಜಿಎಫ್: ಅಧ್ಯಾಯ 1 – ರೂ 56.25 ಕೋಟಿ ರೂ.ಗಳಿಕೆ
ಕೆಜಿಎಫ್: ಭಾಗ 2 – 435.33 ಕೋಟಿ  ರೂ.ಗಳಿಕೆ. 

ದಕ್ಷಿಣದ ಸ್ಟಾರ್‌ ಗಳಲ್ಲಿ ಈ ಮೂವರು ಹಿಂದಿ ಮಾರ್ಕಟ್‌ ನಲ್ಲಿ ಮಿಂಚಿದ್ದಾರೆ. ಈ ಮೂವರು ಭವಿಷ್ಯದಲ್ಲಿ ಬಾಲಿವುಡ್‌ ನ ದೊಡ್ಡ ಪ್ರೊಡಕ್ಷನ್‌ ಹೌಸ್‌ ನಲ್ಲಿ ಹೆಸರುಗಳಿಸಿದರೆ ಅಚ್ಚರಿಯಿಲ್ಲ.

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next