ದೊಡ್ಡಬಳ್ಳಾಪುರ: ಲಾಕ್‌ಡೌನ್ ಮುಗಿದು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿನಾ ಯಿತಿ ನೀಡಲಾಗುತ್ತಿದೆ. ಇನ್ನೊಂದೆಡೆ ಷರತ್ತು ಗಳ ಮೇರೆಗೆ ವಿದ್ಯುತ್ ಚಾಲಿತ ಮಗ್ಗ ನಡೆ ಸಲು ಅನುಮತಿ ನೀಡುತ್ತಿದ್ದರೂ, ಕಚ್ಚಾ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ, ಮಾರುಕಟ್ಟೆ ಸಮಸ್ಯೆಗಳಿಂದ ನೇಕಾ ರಿಕೆ ಉದ್ಯಮ ಸವಾಲು ಎದುರಿಸುತ್ತಿದ್ದು, ಲಾಕ್‌ಡೌನ್ ನಿಂದಾಗಿ ನೇಯ್ಗೆ ಉದ್ಯಮ ದಿವಾಳಿಯತ್ತ ಸಾಗಿದೆ.
ಕಚ್ಚಾ ಸಾಮಗ್ರಿ ಪೂರೈಕೆಯಲ್ಲಿ ವ್ಯತ್ಯಯ: ಜಿಲ್ಲೆಯ ದೊಡ್ಡ ಬಳ್ಳಾಪುರ ಸೇರಿದಂತೆ ರಾಜ್ಯದ ಬೆಳಗಾವಿ, ಬಾಗಲಕೋಟೆ, ಚಿತ್ರ ದುರ್ಗ ಮೊದಲಾದ ಕಡೆಗಳಲ್ಲಿ ನೇಯ್ಗೆ ಉದ್ಯಮ ಅವಲಂಬಿಸಿ ಸಾವಿರಾರು ಕುಟುಂ ಬಗಳಿವೆ. ನೇಕಾರಿಕೆಗೆ ಮುಖ್ಯವಾಗಿ ಬೇಕಾಗಿ ರುವ ಪಾಲಿಯೆಸ್ಟರ್, ಜರಿ, ಕೆಟೆಕ್ಸ್ ಮೊದಲಾದ ನೂಲುಗಳು ಬಹುಪಾಲು ಸೂರತ್, ಅಹಮ ದಾಬಾದ್, ತಮಿಳುನಾಡಿನಿಂದ ಬರಬೇಕಾಗಿದೆ. ಕಚ್ಚಾ ಸಾಮಗ್ರಿಗಳ ಕೊರತೆ ಯಿದೆ. ಲಾಕ್‌ಡೌನ್‌ನಿಂದಾಗಿ, ನಿಗದಿತ ಉತ್ಪಾ ದನೆಯಾಗುತ್ತಿಲ್ಲ. ಅಲ್ಲದೆ ಸರಕು, ವಾಹನಗಳ ಸಾಗಾ ಣಿಕೆ ವೆಚ್ಚ ಹೆಚ್ಚಾಗುತ್ತಿದೆ. ಕಚ್ಚಾ ಸಾಮಗ್ರಿ ಬೆಲೆ ಹಚ್ಚಳ ಮಾಡ ಲಾಗಿದೆ. ಕಚ್ಚಾ ರೇಷ್ಮೆ ಬೆಲೆ ನಿತ್ಯವೂ ಏರು ಪೇರಾಗುತ್ತಿದೆ.
ಮಾರಾಟದ ಸಮಸ್ಯೆ: ದೊಡ್ಡಬಳ್ಳಾಪುರದಲ್ಲಿ ತಯಾರಾದ ಬಟ್ಟೆ ಉತ್ಪನ್ನಗಳಿಗೆ ದೇಶದಲ್ಲಿ ವಿಸ್ತಾರವಾದ ಮಾರುಕಟ್ಟೆಯಿದೆ. ಕೃತಕ ನೂಲಿನ ಸೀರೆಗಳು ನೆರೆಯ ಆಂಧ್ರ, ತಮಿಳು ನಾಡು, ಮಹಾರಾಷ್ಟ್ರಗಳಲ್ಲಿ ಮಾರಾಟವಾಗುತಿತ್ತು. ಆದರೆ ಲಾಕ್ ಡೌನ್‌ನಿಂದಾಗಿ ಸಗಟು ಬಟ್ಟೆ ಖರೀದಿದಾರರು ಅಂಗಡಿ ತೆರೆ ಯುತ್ತಿಲ್ಲ. ಮದುವೆ ಮೊದಲಾದ ಸಭೆ ಸಮಾರಂಭಗಳು ನಡೆಯದೇ ಇರುವುದರಿಂದ ರಾಜ್ಯದಲ್ಲಿಯೂ ಸೀರೆಕೊಳ್ಳುವ ಗ್ರಾಹಕರು ಕಡಿಮೆಯಾಗಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ತಯಾ ರಾದ ರೇಷ್ಮೆ ಸೀರೆಗಳಿಗೆ ಕೊಲ್ಕತ್ತ, ಬನಾರಸ್, ಮುಂಬೈ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿ ರೇಷ್ಮೆ ಸೀರೆಗಳಿಗೆ ಪ್ರಿಂಟಿಂಗ್, ಪಾಲಿ ಷಿಂಗ್ ಮಾಡಿ ಸಿದಟಛಿವಾದ ಸೀರೆಗಳನ್ನು ಸಗಟು ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯೂ ಮಾರುಕಟ್ಟೆಗಳು ಚಾಲೂ ಆಗಿಲ್ಲ.
ನಷ್ಟದ ಭೀತಿ: ಕಳೆದ 1.5 ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ಮಗ್ಗಗಳು ಸದ್ದು ಮಾಡದೇ ನಿಂತಿದ್ದವು. ನೂಲು ಖಾಲಿ ಮಾಡಲು ವಾರಕ್ಕೆ 3 ಸೀರೆ ನೇಯುವಂತೆ ಮಗ್ಗದ ಕಾರ್ಮಿಕ ರಿಗೆ ಹೇಳಲಾಗಿತ್ತು. ಈಗ ಕಚ್ಚಾ ಸಾಮಗ್ರಿಗಳು ಸಿಗುತ್ತಿಲ್ಲ. ದಾಸ್ತಾನು ಮಾಡಿರುವ ಸಾವಿ ರಾರು ಸೀರೆ ಮಾರಾಟ ಹೇಗೆ? ಎಂದು ನೇಕಾರರು ಚಿಂತಿಸುತ್ತಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಮಾರಾಟ ಮಾಡಿದ್ದ ಸೀರೆಗಳಿಗೂ ಇನ್ನೂ ಹಣ ನೀಡಿಲ್ಲ.
ಲಾಕ್‌ಡೌನ್‌ನ ನೆಪ ಹೇಳಿಕೊಂಡು ಸೀರೆ ವ್ಯಾಪಾರಿಗಳು ನೇಕಾರ ರನ್ನು ಶೋಷಿಸುತ್ತಿದ್ದಾರೆ. ಈಗಾಗಲೇ ಸೀರೆ ಗಳ ಬೆಲೆ ಅರ್ಧಕ್ಕರ್ಧ ಇಳಿದಿದ್ದು, ನಷ್ಟದಲ್ಲಿ ವ್ಯಾಪಾರ ಮಾಡಲಾಗು ತ್ತಿದೆ. ಹಳೆ ಬಾಕಿ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನೇಕಾ ರರು ಮಗ್ಗ ಮಾರಾಟ ಮಾಡಿ, ಬೀದಿಗೆ ಬರಬೇಕಾಗು ತ್ತದೆ. ಇಲ್ಲವೇ ನೇಕಾರಿಕೆಗೆ ತಿಲಾಂಜಲಿ ಇಟ್ಟು ಬೇರೆ ಉದ್ಯೋಗ ನೋಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ನೇಕಾರರು.
* ಡಿ.ಶ್ರೀಕಾಂತ