Advertisement

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

01:18 AM May 22, 2022 | Team Udayavani |

ಹೊಸದಿಲ್ಲಿ: ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಬೈಕ್‌ ಅಥವಾ ಸ್ಕೂಟರ್‌ ಏರಿ ಸಾಗುವಾಗ ಹೆಲ್ಮೆಟ್‌ ಧರಿಸದಿದ್ದರೆ ಮಾತ್ರ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕುತ್ತಾರೆಂದು ಭಾವಿಸಿ­ದ್ದರೆ ಅದು ತಪ್ಪು. ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸಿದ್ದರೂ ಅದಕ್ಕೆ ತತ್‌ಕ್ಷಣವೇ ಪಾವತಿಸಬೇಕಾದ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ಹೆಲ್ಮೆಟ್‌ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಹಾಗಾಗಿ ಜನರು ಹೆಲ್ಮೆಟ್‌ ಧರಿಸುವುದನ್ನು ಕ‌ಡ್ಡಾಯಗೊಳಿ­ಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮ­ಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

2 ಸಾವಿರ ರೂ.ದಂಡ ಹೇಗೆ?: ಹೆಲ್ಮೆಟ್‌ ಹಾಕಿದ್ದರೂ ಹೆಲ್ಮೆಟ್‌ನ ಬಕಲ್‌ ಹಾಕಿಕೊಳ್ಳದಿದ್ದರೆ 1 ಸಾವಿರ ರೂ. ತೆರಬೇಕಾಗುತ್ತದೆ. ಜತೆಗೆ ಧರಿಸಿರುವ ಹೆಲ್ಮೆಟ್‌ ಬಿಐಎಸ್‌ (ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಡ್‌) ಪ್ರಮಾಣೀಕೃತ­ವಾಗಿರದಿದ್ದರೆ ಅದಕ್ಕೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಾಗಾಗಿ ಒಟ್ಟಾರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಹೆಲ್ಮೆಟ್‌ ಸರಿಯಾಗಿ ಧರಿಸಿಯೂ ಸಿಗ್ನಲ್‌ ಜಂಪ್‌ ಮಾಡಿದರೆ ಅದಕ್ಕೆ 2 ಸಾವಿರ ರೂ. ದಂಡ ದಂಡ ಹಾಗೂ ಮೂರು ವರ್ಷಗಳವರೆಗೆ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next