ಹುಮನಾಬಾದ: ಸಂಚಾರ ಆರಕ್ಷಕರ ಠಾಣೆ ವತಿಯಿಂದ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಮತ್ತು ರಸ್ತೆ ಸಂಚಾರ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಅಭಿಯಾನ ನ.4ರ ಶನಿವಾರ ಪಟ್ಟಣದಲ್ಲಿ ನಡೆಯಿತು.
ಸ್ಥಳದಲ್ಲಿದ್ದ ಸಿಪಿಐ ಗುರು ಪಾಟೀಲ ನೇತೃತ್ವದಲ್ಲಿ ಅಭಿಯಾನ ನಡೆದಿದ್ದು, ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವ ವಾಹನ ಸಮಾರರನ್ನು ತಡೆದು ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭ ಹಾಗೂ ಜೀವ ಹಾನಿ ಕುರಿತು ತಿಳಿಸಿಕೊಡಲಾಯಿತು.
ಅದರ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಅನಿವಾರ್ಯ, ಇಲ್ಲವಾದರೆ ದಂಡ ಪಾವತಿಸುವುದು ಕೂಡ ಅನಿವಾರ್ಯ ಎಂಬುದು ತಿಳಿದುಕೊಳ್ಳಬೇಕು. ಯಾವುದು ಕುಂಟು ನೆಪಗಳು ಹೇಳುವ ಅವಶ್ಯಕತೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಸಲಾಯಿತು.
ಹೆಲ್ಮೆಟ್ ಧರಿಸದ ಕಾರಣ ಅನೇಕರ ಜೀವಕ್ಕೆ ಹಾನಿಯಾಗುತ್ತಿದೆ. ಹೆಲ್ಮೆಟ್ ಧರಿಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ನಾವು ಪೊಲೀಸರು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಇಂತಹ ಅಭಿಯಾನ ಮಾಡಲಾಗುತ್ತಿದೆ ಎಂದು ವಿವರಿಸುತ್ತಿರುವುದು ಕಂಡು ಬಂತು.
ಬಹುತೇಕ ವಾಹನ ಸವಾರರು ಮನೆಯಿಂದ ಹೆಲ್ಮೆಟ್ ತರುವುದಾಗಿ ವಾಹನ ಬಿಟ್ಟು ತೆರಳಿದರು. ಕೆಲವರು ದಂಡ ಪಾವತಿ ಮಾಡಿದ್ದು, ಇನ್ನೂ ಕೆಲವರು ಅಲ್ಲೇ ಅಕ್ಕ-ಪಕ್ಕದ ಸ್ಥಳದಲ್ಲಿ ಹೆಲ್ಮೆಟ್ ಖರೀದಿಸಿ ಸಂಚಾರ ನಡೆಸಿದರು.
ಈ ಸಂದರ್ಭದಲ್ಲಿ ಸಂಚಾರ ಪಿಎಸ್ಐ ಬಸಲಿಂಗಪ್ಪ ಸೇರಿದಂತೆ ಸಂಚಾರ ಸಿಬ್ಬಂದಿಗಳು ಇದ್ದರು.