Advertisement

ಸುಳ್ಳು ಮೊಕದ್ದಮೆ ಹೂಡಿ ಹಂಸಲೇಖರನ್ನು ಅವಮಾನಿಸುತ್ತಿದ್ದಾರೆ:ನಟ ಚೇತನ್ ಕಿಡಿ

07:49 PM Nov 21, 2021 | Team Udayavani |

ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನ ರಾಜೀವ ಗಾಂಧಿ ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಭಾನುವಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಠಾಚಾರ ನಿರ್ಮೂಲನ ಸೇವಾ ಸಮಿತಿ ಮತ್ತು ದಲಿತ ಸಂರಕ್ಷಣಾ ಸಮಿತಿ ಹಾಗೂ ಜೈ ಭೀಮ್ ಕರ್ನಾಟಕ ಯುವಕರ ಸಂಘ (ರಿ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಬೃಹತ್ ರಕ್ತ ದಾನ ಶಿಬಿರವನ್ನು ಚಿತ್ರನಟ ಚೇತನ್ ಅವರು ಉದ್ಘಾಟಿಸಿದರು.

Advertisement

ಈ ವೇಳೆ ಮಾತನಾಡಿದ ಚೇತನ್ ಅವರು, ಅಪ್ಪು ಸರ್ ಅವರ ನೆನಪಿನಲ್ಲಿ ನಮ್ಮ ಸ್ನೇಹಿತ ನಾಗರಾಜ್ ಹಮ್ಮಿಕೊಂಡಿರುವ ಈ ರಕ್ತದಾನ ಶಿಬಿರ ತುಂಬಾ ಅರ್ಥ ಪೂರ್ಣವಾಗಿದೆ. ಅಪ್ಪು ಸರ್ ತುಂಬಾ ಸಮಾಜಸೇವೆ ಮಾಡಿದ್ದಾರೆ. ಅವರ ಮಾಡಿದ ಕಾರ್ಯಕ್ರಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.

ಹಾಗೆಯೇ ಕೇಂದ್ರ ಸರ್ಕಾರ ದೇಶಕ್ಕೆ ಅನ್ನ ಕೊಡುವ ರೈತರ ಪ್ರತಿಭಟನೆಗೆ ಮಣಿದು ರೈತ ವಿರೋಧಿ ಕಾಯ್ದೆ ಹಿಂಪಡೆಯುತಿದೆ. ಇದು ರೈತರ ಒಗ್ಗಟ್ಟಿಗೆ ಸಂದ ಜಯ ಎಂದರು.

ಚಿತ್ರ ಸಾಹಿತಿ ಹಂಸಲೇಖ ಅವರ ಮಾತಿನ ವಿವಾದ ಕುರಿತು ಮಾತನಾಡಿದ ಚೇತನ್, ‘ಹಂಸಲೇಖ ತಮ್ಮ ವಾಕ್ ಸ್ವಾತಂತ್ರ್ಯ ವನ್ನು ವ್ಯಕ್ತಪಡಿಸಿದ್ದು, ಇದನ್ನೇ ತಪ್ಪು ಎಂದು ಬಿಂಬಿಸಿ ಮನುವಾದಿಗಳು ಕ್ಷಮಾಪಣೆ ಕೇಳಬೇಕು ಎಂದು ಅವರ ಮೇಲೆ ಕೇಸ್ ಹಾಕಿದ್ದಾರೆ. ಆದರೆ ಸ್ವಾಂತಂತ್ರ್ಯ ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಹಕ್ಕು ಇದೆ. ಹಂಸಲೇಖ ಅವರು ಈಗಾಗಲೇ ಕ್ಷಮಾಪಣೆ ಯನ್ನೂ ಕೇಳಿದ್ದಾರೆ. ಆದರೂ ಇದೆಲ್ಲವನ್ನೂ ಲೆಕ್ಕಿಸದೆ , ಅಖಿಲ ಭಾರತ ಬ್ರಾಹ್ಮಣ ಸಮಾಜ ಹಾಗೂ ಕೆಲವು ಸಂಘಟನೆಗಳು ಸುಖಾ ಸುಮ್ಮನೆ ಆರೋಪ ಮಾಡಿ ಅವರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಅವಮಾನಿಸುತಿದ್ದಾರೆ. ಹಂಸಲೇಖ ಅವರ ಬೆಂಬಲಕ್ಕೆ ನಾವು ಇರುತ್ತೇವೆ’ ಎಂದು ಚೇತನ್ ಹೇಳಿದರು.

ಇದನ್ನೂ ಓದಿ : ಸೂರ್ಯ ಹೊಣೆಯಲ್ಲ: ವಿಷಾದ ವ್ಯಕ್ತಪಡಿಸಿದ ‘ಜೈ ಭೀಮ್’ ನಿರ್ದೇಶಕ

Advertisement

ಕಾರ್ಯಕ್ರಮದಲ್ಲಿ ಜನನಿ ಜನ್ಮಭೂಮಿ ಪಡೆಯ ಅಧ್ಯಕ್ಷ ರಾದ ನಾಗರಾಜ್, ಅಂಬೇಡ್ಕರ್ ಪಾರ್ಕ್ ರೂವಾರಿ ಮಹೇಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್, ನಿರ್ಮಾಪಕ ಸಂಜಯಗೌಡ, ಲೋಕೇಶ್, ಕೇಶವ ನೆಲಮಂಗಲ,ಮುಖಂಡರಾದ ಬಿ ನಾರಾಯಣ ಸ್ವಾಮಿ,ಜೈ ಭೀಮ್ ನಾಗರಾಜ್, ಅಂಬರೀಷ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಲವರು ರಕ್ತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next