Advertisement

ನಾವು ಬಳಸಿದ್ದು ಎಫ್-16 ವಿಮಾನವನ್ನೇ!

11:25 PM Apr 01, 2019 | mahesh |

ಇಸ್ಲಾಮಾಬಾದ್‌: ಬಾಲಕೋಟ್‌ ದಾಳಿಯ ನಂತರ ನಡೆದ ಬೆಳವಣಿಗೆಯಲ್ಲಿ ಭಾರತವು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು ಎಂಬುದನ್ನು ತಿರಸ್ಕರಿಸುತ್ತಲೇ ಬಂದ ಪಾಕಿಸ್ಥಾನ ಈಗ ಏಕಾಏಕಿ, ಅಂದು ನಾವು ಎಫ್ 16 ಅನ್ನು ಬಳಸಿರಲೂಬಹುದು ಎನ್ನುವ ಮೂಲಕ ತನ್ನ ಸುಳ್ಳನ್ನು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.

Advertisement

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಾಕಿಸ್ಥಾನದ ಸೇನಾ ವಕ್ತಾರರಾದ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌, “ಭಾರತದ ದಾಳಿಯನ್ನು ಹಿಮ್ಮೆಟ್ಟಿಸಲು ಅಂದು ಪಾಕಿಸ್ಥಾನ ವಾಯುಪಡೆ ಎಫ್-16 ಬಳಸಿದ್ದಿರಬಹುದು. ತನ್ನ ಸ್ವಯಂ ರಕ್ಷಣೆಗಾಗಿ ಪಾಕಿಸ್ಥಾನ ತನ್ನಲ್ಲಿರುವ ಯಾವುದೇ ವಿಮಾನ ಬಳಸುವ ಸ್ವಾತಂತ್ರ್ಯ ಅದಕ್ಕಿದೆ’ ಎಂದಿದ್ದಾರೆ. ಫೆ. 27ರಂದು ನಡೆದಿದ್ದ ಈ ವಿದ್ಯಮಾನದಲ್ಲಿ ಐಎಎಫ್ ವಿಮಾನಗಳ ದಾಳಿಗೆ ಪಾಕಿಸ್ಥಾನದ ಎಫ್-16 ವಿಮಾನ ಪತನವಾಗಿತ್ತು. ಇದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ತನ್ನ ಅನುಮತಿಯಿಲ್ಲದೆ ತಾನು ನಿರ್ಮಿಸಿರುವ ಎಫ್-16 ಯುದ್ಧ ವಿಮಾನವನ್ನು ಬಳಸಿರುವ ಬಗ್ಗೆ ಅಮೆರಿಕ, ಪಾಕಿಸ್ಥಾನದ ವಿರುದ್ಧ ಸಿಡಿಮಿಡಿಗೊಂಡಿತ್ತು. ಆಗ ಪಾಕಿಸ್ಥಾನ ತಾನು ಚೀನಾ ನಿರ್ಮಿತ ಜೆಎಫ್-17 ವಿಮಾನ ಬಳಸಿದ್ದು, ಎಫ್-16 ಅಲ್ಲ ಎಂದಿತ್ತು. ಇತ್ತ, ಭಾರತ, ಪತನಗೊಂಡಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನದ ಅವಶೇಷಗಳ ಫೋಟೋ ಸಹಿತ ಹಲವಾರು ಬಾರಿ ಪಾಕಿಸ್ಥಾನ ಸುಳ್ಳು ಹೇಳುತ್ತಿರುವುದನ್ನು ಜಗತ್ತಿನ ಮುಂದೆ ಜಾಹೀರು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next