Advertisement

2 ಮಕ್ಕಳು ಮಾತ್ರ ; ಚೀನಾದ ತಪ್ಪು ಪುನರಾವರ್ತಿಸುವುದು ಬೇಡ : ಓವೈಸಿ

02:09 PM Jul 14, 2022 | Team Udayavani |

ಹೈದರಾಬಾದ್ : ”ನಾವು ಚೀನಾದ ತಪ್ಪುಗಳನ್ನು ಪುನರಾವರ್ತಿಸಬಾರದು. 2 ಮಕ್ಕಳು ಮಾತ್ರ ಎಂಬ ನೀತಿಯನ್ನು ಕಡ್ಡಾಯಗೊಳಿಸುವ ಯಾವುದೇ ಕಾನೂನನ್ನು ನಾನು ಬೆಂಬಲಿಸುವುದಿಲ್ಲ ಏಕೆಂದರೆ ಅದು ದೇಶಕ್ಕೆ ಪ್ರಯೋಜನವಾಗುವುದಿಲ್ಲ. ಭಾರತದ ಒಟ್ಟು ಫಲವತ್ತತೆ ದರ ಕುಸಿಯುತ್ತಿದೆ, 2030 ರ ವೇಳೆಗೆ ಇದು ಸ್ಥಿರವಾಗಲಿದೆ” ಎಂದು ಜನಸಂಖ್ಯೆ ಸಮಸ್ಯೆ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Advertisement

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಜನಸಂಖ್ಯಾ ಅಸಮತೋಲನ’ದ ಬಗ್ಗೆ ನೀಡಿದ ಹೇಳಿಕೆಗೆ ಪ್ರತ್ಯುತ್ತರವಾಗಿ ಮುಸ್ಲಿಮರು ಗರ್ಭನಿರೋಧಕಗಳನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಓವೈಸಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಯಾವುದೇ ಕಾನೂನು ಅಗತ್ಯವಿಲ್ಲ ಎಂದು ಅವರದೇ ಆರೋಗ್ಯ ಸಚಿವರು ಹೇಳಿದ್ದಾರೆ. ಮುಸ್ಲಿಮರು ಹೆಚ್ಚು ಗರ್ಭನಿರೋಧಕಗಳನ್ನು ಬಳಸುತ್ತಿದ್ದಾರೆ ಎಂದು ಓವೈಸಿ ಹೇಳಿದ್ದರು.

ಸಂಸತ್ತಿನಲ್ಲಿ ನೀವು ಏನು ಮಾತನಾಡುತ್ತೀರಿ ಎಂಬ ಸಂದರ್ಭವು ಬಹಳ ಮುಖ್ಯವಾಗಿದೆ. ನೀವು ಕೇವಲ ಅಸಂಸದೀಯ ಪದಗಳನ್ನು ಆಡಲು ಸಾಧ್ಯವಿಲ್ಲ. ಕಂಚಿನ ರಾಷ್ಟ್ರೀಯ ಲಾಂಛನದ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಹಿಂದೆ ಸ್ಪೀಕರ್ ಕುಳಿತಿರುವುದು ಅಸಂಸದೀಯವಲ್ಲವೇ? ಎಂದು ಓವೈಸಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next