ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದು ನಮ್ಮ ಸಂಕಲ್ಪ. ಆ ಭರವಸೆಯನ್ನು ನಾವೆಲ್ಲರೂ ಒಟ್ಟಾಗಿ ಪ್ರಧಾನಿಯವರಿಗೆ ಕೊಟ್ಟಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರಲು ನಾವೆಲ್ಲಾ ಒಟ್ಟಾಗಿ ಕೆಲಸ ಪ್ರಾರಂಭಿಸಿದ್ದೇವೆ. ನಿಶ್ಚಿತವಾಗಿ ಗುರಿಯನ್ನು ತಲುಪುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ರಾಜ್ಯಕ್ಕೆ ಬರುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಂದು ಹೋಗುತ್ತಿರುತ್ತಾರೆ ಎಂದರು.
ಇದನ್ನೂ ಓದಿ:ಯಶಸ್ಸು ತಂದುಕೊಟ್ಟ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ‘ಕಾಂತಾರ’ ತಂಡ
ಭದ್ರಾವತಿ ವಿಐಎಸ್ಎಲ್ ವಿಚಾರಕ್ಕೆ ಮಾತನಾಡಿದ ಅವರು, ಬಹಳ ಹಿಂದೆಯೆ ಉಳಿಸಲು ಚರ್ಚೆಯಾಗಿ ಪ್ರಯತ್ನ ಮಾಡಿದ್ದೆವು. ಭದ್ರಾವತಿ ಕಾರ್ಖಾನೆ ಉಳಿಸಲು ನಮ್ಮ ಸಂಸದರು ಬಹಳ ಪ್ರಯತ್ನ ಮಾಡಿದ್ದರು. ದೇಶದಲ್ಲಿ ನಿಲುವು ತೆಗೆದು ಕೊಂಡಿದ್ದರಿಂದ ನಮ್ಮ ಕೈಮೀರಿ ಹೋಗಿದೆ ಎಂದರು.