Advertisement

ಪಕೃತಿಯ ತಾಳ್ಮೆಯನ್ನು ನಾವು ಅರಿಯಬೇಕಿದೆ

05:01 PM Jun 05, 2020 | mahesh |

ಮಾನವ ಹುಟ್ಟಿನಿಂದಲೂ ಅವಲಂಬಿತವಾಗಿರುವ ಒಂದು ಸಂಪತ್ತು ಅಂದರೆ ಅದು ಪರಿಸರ. ಇದು ಇಂದಿನಿಂದಲ್ಲ ಅದೆಷ್ಟೋ ವರ್ಷಗಳಿಂದ ಮಾನವನನ್ನ ಉಳಿಸುತ್ತ ಬೆಳೆಸುತ್ತ ಬಂದಿದೆ. ಅದರಿಂದ ಮಾನವ ಬಹಳ ಲಾಭವನ್ನು ಪಡೆದಿದ್ದಾನೆ. ಆದರೆ ಪ್ರಕೃತಿಗೆ ನೀಡಿದ್ದು ಬರೀ ನೋವು. ಆದರೂ ಆ ಪರಿಸರ ಮಾತೆ ತನಗಾಗುವ ಅನಾಚಾರವನ್ನು ಬದಿಗೊತ್ತಿ ಮಾನವನಿಗೆ ಸಾಕಷ್ಟು ಲಾಭವನ್ನು ನೀಡುತ್ತಾ ಬಂದಿದೆ.

Advertisement

ಜೂನ್‌ 5ರಂದು ವಿಶ್ವ ಪರಿಸರ ದಿನವನ್ನ ಆಚರಿಸಲಾಗುತ್ತದೆ. ಎಲ್ಲರ ಮೊಬೈಲ್‌ನಲ್ಲಿಯೂ ಅರಣ್ಯ ಪರಿಸರ ಮತ್ತೊಂದು ಮಗದೊಂದು. ಅಷ್ಟೇ ಅಲ್ಲ ಪರಿಸರ ಉಳಿಸಿ ಬೆಳೆಸಿ ಅನ್ನುವ ಪರಿಕಲ್ಪನೆ ಬೇರೆ. ನಾವು ಕೂಡ ಪರಿಸರ ಎಂಬ ಒಂದು ಆವರಣ ಒಳಗಡೆ ಇದ್ದೇವೆ ಎಂಬುದು ಬಹಳಷ್ಟು ಜನರಿಗೆ ತಿಳಿಯುವುದು ಜೂನ್‌ 5ರಂದು. ಎಲ್ಲ ಕಡೆ ಸಭೆ ಸಮಾರಂಭ, ಎಲ್ಲ ಗಿಡ ಕೂಡ ನೆಟ್ಟಲಾಗುತ್ತದೆ. ಇದು ದಿನಕ್ಕೆ ಸೀಮಿತ.

ಪ್ರಕೃತಿ ಏನನ್ನು ನಮಗೆ ನೀಡಿಲ್ಲ ಹೇಳಿ. ಎಲ್ಲದನ್ನು ನೀಡಿದೆ ಆದರೆ ನಾವು ಪ್ರಕೃತಿಗೆ ನೀಡಿದ್ದು ಶೂನ್ಯ. ಅಲ್ಲಲ್ಲಿ ಹೊಂಡ ತೋಡಿ ಗಗನದೆತ್ತರಕ್ಕೆ ಕಟ್ಟಡ ನಿರ್ಮಿಸಿದ್ದೇವೆ. ಅಲಲ್ಲಿ ಗಣಿಗಾರಿಕೆ. ಇನ್ನು ಪ್ರಾಣಿಗಳ ನಾಶ ಅಂತೂ ಕಡಿಮೆಯಾಗಿಲ್ಲ. ಆದರೆ ಒಂದಲ್ಲ ಒಂದು ದಿನ ಮಾನವನ ಅಹಂಕಾರಕ್ಕೆ ಪ್ರಕೃತಿ ತಕ್ಕ ಉತ್ತರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಡ ಕೊರೊನಾ ಅಂತಹ ರೋಗವನ್ನ ತಂದು ಮಾನವನಿಗೆ ಬುದ್ದಿ ಕಲಿಸಿದೆ. ಅವನ ಕ್ರೂರತನಕ್ಕೆ ಅವನ ಅತ್ಯಾಚಾರಕ್ಕೆ ಮುಂದೆಯು ತಕ್ಕ ಉತ್ತರ ಸಿಗಲಿದೆ. ಇನ್ನಾದರು ಮಾನವನಿಗೆ ಅರಿವು ಮೂಡಬೇಕಿದೆ. ಪರಿಸರದಿನದಂದು ಮಾತ್ರ ಅರಿವು ಮೂಡುವುದಲ್ಲ, ಪ್ರತಿದಿನ ಪರಿಸರದ ಬಗ್ಗೆ ಅರಿವು ಮೂಡಿ ಪ್ಲಾಸ್ಟಿಕ್‌ ಉತ್ಪನ್ನದ ಬಳಕೆಯನ್ನು ದೂರ ಮಾಡಬೇಕಿದೆ.

ಮಹಮ್ಮದ್‌ ಅಲ್ಪಾಜ್‌, ಎ.ಪಿ.ಎಂ. ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next