ನವ ದೆಹಲಿ : 2021 ನೇ ಐ ಪಿ ಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವ ಕ್ರಿಕೆಟರ್ ಅರ್ಜುನ್ ತೆಂಡುಲ್ಕರ್ (21) ತಮ್ಮ ಮೂಲ ಬೆಲೆ 20 ಲಕ್ಷಕ್ಕೆ ಮಾರಾಟವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ಕೆಲವು ಕ್ರಿಕೆಟ್ ಅಭಿಮಾನಿಗಳು, ದೇಶದಲ್ಲಿ ಸಾಕಷ್ಟು ಉತ್ತಮ ಯುವ ಕ್ರಿಕೆಟರ್ಸ್ ಇರುವಾಗ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರ ಆಯ್ಕೆಗೆ “ನೆಪೋಟಿಸಮ್” (ವಂಶಪಾರಂಪರಿಕ) ಎಂಬ ಲೇಬಲ್ ಅಂಟಿಸಿ ಟೀಕೆ ಮಾಡಿದ್ದರು.
ಓದಿ : ‘ಪೊಗರು’ ಚಿತ್ರದಲ್ಲಿ ಅರ್ಚಕ-ಪುರೋಹಿತರ ಅವಹೇಳನಕಾರಿ ಚಿತ್ರಣ: ಸಚ್ಚಿದಾನಂದ ಮೂರ್ತಿ ಖಂಡನೆ
ಈ ಎಲ್ಲಾ ಬೆಳವಣಿಗಗಳು ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ, ಈ ಎಲ್ಲಾ ವಾದಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಾಗೂ ಅರ್ಜುನ್ ಗೆ ಬೆಂಬಲಿಸುವ ದೃಷ್ಟಿಯಿಂದ ಕೆಲವರು ಟ್ವೀಟಾಸ್ತ್ರವನ್ನು ಬಳಸಿಕೊಂಡಿದ್ದಾರೆ.
ಅರ್ಜುನ್ ಸಹೋದರಿ ಸಾರಾ ತೆಂಡೂಲ್ಕರ್ ತನ್ನ ಸಹೋದರನಿಗೆ ಬೆಂಬಲವಾಗಿ, ಸ್ವಜನಪಕ್ಷಪಾತದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ಕಥೆಯನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಈ ಸಾಧನೆಯನ್ನು ನಿಮ್ಮಿಂದ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅದು ನಿಮ್ಮದಾಗಿದೆ” ಎಂದು ಬರೆದುಕೊಂಡಿದ್ದಾರೆ.
ಸಾರಾ ಒಬ್ಬರೇ ಅರ್ಜುನ್ ಅವರಿಗೆ ಬೆಂಬಲ ನೀಡಿದ್ದಲ್ಲ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಅರ್ಜುನ್ ವಿರುದ್ಧದ ಸ್ವಜನಪಕ್ಷಪಾತದ ಆರೋಪಗಳನ್ನು ‘ಕ್ರೂರ’ ಎಂದು ಅವರು ಕರೆದಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಡುವೆ, ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡುಲ್ಕರ್ ಶನಿವಾರ ಟ್ವೀಟ್ ಮಾಡಿದ್ದು, ವಿರಾಟ್ ಕೊಹ್ಲಿ ಖಿನ್ನತೆಯ ವಿರುದ್ಧ ಹೋರಾಡಿದ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ಅವರ ಅನುಯಾಯಿಗಳಿಗೆ ಚಿಂತನಶೀಲ ಸಂದೇಶವನ್ನು ನೀಡಿದೆ ಎಂದು ಹೇಳಿದ್ದಾರೆ.
“@imVkohli, ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ಮತ್ತು ಅಂತಹ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ನಿರ್ಧಾರ ಇದು. ಈಚಿನ ದಿನಗಳಲ್ಲಿ ಯುವಕರನ್ನು ಸೋಷಿಯಲ್ ಮೀಡಿಯಾಗಳಲ್ಲೇ ನಿರ್ಣಯಿಸಲಾಗುತ್ತದೆ. ಸಾವಿರಾರು ಜನರು ಅವರ ಬಗ್ಗೆ ಮಾತನಾಡುತ್ತಾರೆ ಆದರೆ ಅವರಿಗಲ್ಲ. ನಾವು ಅವರು ಅಭಿವೃದ್ಧಿ ಹೊಂದಲು ಸಹಾಯ ಮಾಡಬೇಕು.” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, “ಅರ್ಜುನ್ ಬಹಳ ಕೇಂದ್ರೀಕೃತ ಕ್ರಿಕೆಟಿಗನಾಗಿದ್ದಾರೆ” ಎಂದು ಮುಂಬೈ ಇಂಡಿಯನ್ಸ್ ನ ಮುಖ್ಯ ಕೋಚ್ ಮಹೇಲ್ ಜಯವರ್ಧನೆ, ಅರ್ಜುನ್ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಓದಿ : ಪಠ್ಯಕ್ರಮದಲ್ಲಿ ಬೌದ್ಧ ಧರ್ಮ ತೆಗೆದಿರುವುದು ಅಕ್ಷಮ್ಯ: ಧ್ರುವನಾರಾಯಣ
“ನಾವು ಈ ಆಯ್ಕೆಯನ್ನು ಕೌಶಲ್ಯದ ಆಧಾರದ ಮೇಲೆ ನೋಡಿದ್ದೇವೆ. ನನ್ನ ಪ್ರಕಾರ, ಸಚಿನ್ ಎಂಬ ಹೆಸರು ಅರ್ಜುನ್ ತಲೆಯ ಮೇಲೆ ದೊಡ್ಡ ಟ್ಯಾಗ್ ಇರುತ್ತದೆ. ಆದರೆ, ಅದೃಷ್ಟವಶಾತ್, ಅವರು ಬೌಲರ್, ಬ್ಯಾಟ್ಸ್ ಮನ್ ಅಲ್ಲ. ಹಾಗಾಗಿ ಅರ್ಜುನ್ ಅವರಂತೆ ಬೌಲಿಂಗ್ ಮಾಡಲು ಸಾಧ್ಯವಾದರೆ ಸಚಿನ್ ತುಂಬಾ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ, ”ಎಂದು ಜಯವರ್ಧನೆ ಹೇಳಿದ್ದಾರೆ.
ಓದಿ : ‘ದೊಡ್ಡ ನೋಟಿನ ಸಾಹುಕಾರ’…ಶಿವಣ್ಣನ ಕುರಿತು ಜಗ್ಗೇಶ್ ಬಿಚ್ಚಿಟ್ರು ಕುತೂಹಲ ಸಂಗತಿ