Advertisement

ಶೈಕ್ಷಣಿಕ ವ್ಯವಸ್ಥೆಯ ಮೇಲೆ ಕೊರೊನಾ ಕೊಟ್ಟ ಪೆಟ್ಟು ಅಂತಿಂಥದ್ದಲ್ಲ. ಕಳೆದ ವರ್ಷದ ಶಿಕ್ಷಣ ಆನ್‌ಲೈನ್‌ನಲ್ಲೇ ಲೀನವಾಗಿಬಿಟ್ಟಿತ್ತು. ಈ ವರ್ಷವೂ ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ. ಈ ಹಂತದಲ್ಲಿ ಏನು ಮಾಡಬೇಕು? ಸರಕಾರಕ್ಕೆ ಗೊಂದಲವಿದೆ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸ್ಪಷ್ಟತೆ ಇಲ್ಲ. ಹಾಗಿದ್ದರೆ ಏನು ಮಾಡಬೇಕು? ಈ ಬಗ್ಗೆ ಉದಯವಾಣಿ ರಾಜ್ಯದ ಉದ್ದಗಲದ ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಅವುಗಳಲ್ಲಿ ಕೆಲವರ ಅಭಿಪ್ರಾಯ ಇಲ್ಲಿದೆ.

Advertisement

ಪರೀಕ್ಷೆ ಪದ್ಧತಿ ಬದಲಾಗಲಿ
– ಡಾ| ಹರೀಶ ರಾಮಸ್ವಾಮಿ, ಕುಲಪತಿ, ರಾಯಚೂರು ವಿವಿ
ಈಗ ಶಿಕ್ಷಣ ವಲಯದಲ್ಲಿ ಉಲ್ಬಣಿಸಿರುವ ಸಮಸ್ಯೆ ಕೇವಲ ತಾತ್ಕಾಲಿಕ ಎಂದು ಪರಿಗಣಿಸದೆ ಶಿಕ್ಷಣ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ವೈಯಕ್ತಿಕ ಪರೀಕ್ಷೆ ಪದ್ಧತಿ ಅನುಷ್ಠಾನ ಮಾಡುವುದು ಸೂಕ್ತ. ವಿದ್ಯಾರ್ಥಿಯೇ ತನಗೆ ಬೇಕಾದಾಗ ಪರೀಕ್ಷೆ ನೀಡುವ ವ್ಯವಸ್ಥೆ ಇದಾಗಿದೆ. ನಿರಂತರ ಮೌಲ್ಯಮಾಪನ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಅಂಕ ನೀಡಬೇಕು. ಶಿಕ್ಷಕರಿಗೆ ಮೌಲ್ಯಮಾಪನ ಮಾಡಲು ಅವಕಾಶ ಮಾಡಬೇಕು. ಅದರ ಜತೆಗೆ ವಿದ್ಯಾರ್ಥಿಗೆ ತನಗೆ ಯಾವಾಗ ಪರೀಕ್ಷೆ ನೀಡಬೇಕು ಎನಿಸುತ್ತದೆಯೋ ಆಗ ಸಂಬಂಧಿ ಸಿದ ವಿಷಯಾಧಾರಿತ ಶಿಕ್ಷಕರ ಬಳಿ ಬಂದು ಪರೀಕ್ಷೆ ನೀಡಬಹುದು. ವಿದ್ಯಾ ರ್ಥಿಯ ಹಿಂದಿನ ವರ್ಷದ ಫಲಿತಾಂಶ, ಈಗ ನೀಡಿದ ಪರೀಕ್ಷೆ ಆಧರಿಸಿ ಸರಾಸರಿ ಅಂಕ ನೀಡಬಹುದು. ಈಗಾಗಲೇ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದು, ಈ ಪದ್ಧತಿಯಿಂದ ತಾಂತ್ರಿಕವಾಗಿ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ.
**
ಶಿಕ್ಷಕರೂ ವೃತ್ತಿಪರರಾಗಿ ಕಾರ್ಯೋನ್ಮುಖರಾಗಬೇಕು
– ಡಾ| ಅಶೋಕ ಕಾಮತ್‌, ಉಪಪ್ರಾಂಶುಪಾಲರು, ಡಯಟ್‌, ಉಡುಪಿ
ಕಳೆದ ವರ್ಷದ ಅನುಭವದಲ್ಲಿ ಬೇರೆ ಬೇರೆ ಮಾರ್ಗ ಗಳಲ್ಲಿ ಪ್ರತೀ ವಿದ್ಯಾರ್ಥಿಗಳನ್ನು ನಾವು ತಲುಪಬೇಕು. ಇದು ಆನ್‌ಲೈನ್‌ ಮಾಧ್ಯಮವಾಗಿರ ಬಹುದು, ಆಂಶಿಕ ಭೇಟಿ ಇರಬಹುದು. ಆಂಶಿಕ ಭೇಟಿ ಎಂದರೆ ವಾರಕ್ಕೊಂದು ಬಾರಿ ಮಕ್ಕಳ ಮನೆಗೆ ಭೇಟಿ ಕೊಡುವುದು, ಅಕ್ಷರ ದಾಸೋಹದ ಸಾಮಗ್ರಿ ಕೊಂಡೊಯ್ಯುವಾಗ ಇರ ಬಹುದು ಹೀಗೆ ಎಲ್ಲ ಸಾಧ್ಯತೆಗಳನ್ನು ಮುಖ್ಯ ಶಿಕ್ಷಕರು ಶಾಲಾವಾರು ಜಾರಿ ಗೊಳಿಸಬೇಕು. ಶಿಕ್ಷಕರು ವೃತ್ತಿಪರರಾಗಿ ಕಾರ್ಯೋ ನ್ಮುಖರಾಗಬೇಕು. ಕೈಚೆಲ್ಲಿ ಕುಳಿತುಕೊಳ್ಳದೆ ಬಂದ ಸವಾಲನ್ನು ಇದಿರಿಸಬೇಕು. ಒಟ್ಟಾರೆ ತಮ್ಮ ಶಾಲೆಯ ಪ್ರತೀ ಮಗುವನ್ನೂ ನಿಭಾಯಿಸಬೇಕು.
**
ಉದಯವಾಣಿಯ ಕಾರ್ಯ ಅನುಕರಣೀಯ
ಕೊರೊನಾ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆ ವಿಚಾರವಾಗಿ ಹೊಸ ಕಾರ್ಯಕ್ರಮದ ಶೋಧ ಅಗತ್ಯ­ವಾಗಿದ್ದು, ಈ ನಿಟ್ಟಿನಲ್ಲಿ ಉದಯವಾಣಿ ತಜ್ಞರ ಅಭಿಪ್ರಾಯ ಮಂಡಿಸುವ ಮೂಲಕ ಅನುಕರಣೀಯ ಕಾರ್ಯ ಮಾಡಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸ ಪಾಠಕ್ಕೆ ಹುಡುಕಾಟ ಎಂಬ ಶೀರ್ಷಿಕೆಯಡಿ ಉದಯವಾಣಿ ಶುಕ್ರವಾರ ಪ್ರಕಟಿಸಿದ್ಧ ವಿಸ್ಕೃತ ವರದಿ ಹಾಗೂ ತಜ್ಞರ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಉದಯವಾಣಿಯ ವಿಭಿನ್ನ ಪ್ರಯತ್ನ ನಿಜಕ್ಕೂ ಮಾದರಿಯ ಕಾರ್ಯ. ಮಾಧ್ಯಮಗಳು ಅನುಸರಿಸುವ ಈ ರೀತಿಯ ಸಾಮಾಜಿಕ ಜವಾಬ್ದಾರಿ­ಗಳು ಸರಕಾರದ ನೀತಿ ನಿರೂಪಣೆಗಳ ಮೇಲೆ ತನ್ನದೇ ಆದ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಇದು ಎಲ್ಲರೂ ಒಟ್ಟಾಗಿ ಮುಂದುವರಿಯ­ಬೇಕಾದ ಸಂದರ್ಭ. ಆರೋಪ ಗಳು ಕಡಿಮೆ ಮಾಡಿ ಜತೆಯಾಗಿ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಸಂದರ್ಭ ಇದು ಎಂದರು.

ಶಿಕ್ಷಣ ಇಲಾಖೆ ಕೂಡಾ ನಾವೀನ್ಯವಾದ ಹಾಗೂ ಇಂದಿನ ಪರಿಸ್ಥಿತಿಗೆ ಒಗ್ಗುವ ರೀತಿಯ ಆಲೋಚನೆಗಳನ್ನು ಅನುಷ್ಠಾನಗೊಳಿ
ಸಲು ಉತ್ಸುಕವೇ ಆಗಿದೆ. ನಮ್ಮ ಮುಂದೆ ಸಂಕೀರ್ಣವಾದ ಸವಾಲುಗಳಿವೆ. ಅದಕ್ಕಾ ಗಿಯೇ ಒಂದು ವೈಜ್ಞಾನಿಕವಾದ, ವಸ್ತುನಿಷ್ಠ ವಾದ ವರದಿಯನ್ನು ಪಡೆದು ನಮ್ಮ ಮಕ್ಕಳ ಹಿತದೃಷ್ಟಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಾವು ಮುಂದಾಗಿದ್ದೇವೆ. ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡು­ತ್ತಿರುವ ತಜ್ಞರ, ಪರಿಣಿತರ ಸಮಿತಿ ರಚನೆ ಪ್ರಕ್ರಿಯೆ ಈಗ ಜಾರಿಯಲ್ಲಿದೆ. ಉದಯವಾಣಿಯ ಕಳಕಳಿಯನ್ನು ಸಹ ಉದ್ದೇಶಿತ ಸಮಿತಿಯು ಅವಲೋಕಿಸಲಿದೆ. ಅನುಷ್ಠಾನ ಯೋಗ್ಯವಾದ ಸಲಹೆ­ಗಳನ್ನು ನಿಶ್ಚಿತವಾ­ಗಿಯೂ ಇಲಾಖೆ ಅಳವಡಿಸಿಕೊಳ್ಳಲಿದೆ. ಇಂತಹ ಸ್ತುತ್ಯಾರ್ಹ ಪ್ರಯತ್ನ ಮಾಡಿದ ಉದಯವಾಣಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

ಸಲಹೆಯ ಪ್ರಮುಖಾಂಶಗಳು
– ಬೇರೆ ದೇಶಗಳಂತೆ ನಿಯಮ ಪಾಲಿಸಿ ತರಗತಿ ಆರಂಭಿಸುವುದು ಒಳ್ಳೆಯದು.
– ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣವನ್ನು ತಾತ್ಕಾಲಿಕ ತಡೆ ಹಿಡಿಯಬೇಕು.
– ವಿಶ್ವವಿದ್ಯಾನಿಲಯದವರು ಮೊದಲು ಆನ್‌ಲೈನ್‌ ತರಗತಿಗೆ ಅನುಕೂಲವಾಗುವ ರೀತಿಯಲ್ಲಿ ಆನ್‌ಲೈನ್‌ ಪಠ್ಯಕ್ರಮ ರಚನೆ ಮಾಡಬೇಕು.
– ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಒಂದು ಡೋಸ್‌ ಕೊರೊನಾ ಲಸಿಕೆ ನೀಡಿ ಅನಂತರ ಶಾಲೆ ಆರಂಭಿಸುವುದು ಸೂಕ್ತ
– ಸಾಂಪ್ರದಾಯಿಕ ಪರೀಕ್ಷಾ ಪದ್ಧತಿ ಬದಲಾಗಿ ನಿರಂತರ ಮೌಲ್ಯಾಂಕನ ಪದ್ಧತಿ ಅಳವಡಿಕೆ ಅತ್ಯವಶ್ಯ
– ಚಂದನ ವಾಹಿನಿಯಲ್ಲಿ ಪಾಠ ಪ್ರವಚನ ಮುಂದುವರಿಸಬೇಕು.
– ವಿದ್ಯಾರ್ಥಿಯೇ ತನಗೆ ಬೇಕಾದಾಗ ಪರೀಕ್ಷೆ ಬರೆಯುವ ವ್ಯವಸ್ಥೆ ಬೇಕು. ನಿರಂತರ ಮೌಲ್ಯಮಾಪನ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಅಂಕ ನೀಡಬೇಕು.
– ಈ ವರ್ಷ ಸರಕಾರ ಜುಲೈಯಿಂದ ಸೆಪ್ಟೆಂಬರ್ ತನಕ ತರಗತಿ ನಡೆಸಲಿ.
– ದಿನ ನಿತ್ಯದ ಖರೀದಿಗೆ ಜನರ ಓಡಾಟಕ್ಕೆ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಸಮಯ ಸರಕಾರ ಕೊಟ್ಟಿದೆ. ಇದೇ ರೀತಿ ನಾಲ್ಕು ಗಂಟೆ ಅವಧಿ ಶಾಲೆಗೂ ಅನುಮತಿ ಕೊಡಬೇಕು.
– ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಡೆಯುವ ಆನ್‌ಲೈನ್‌ ತರಗತಿಯಲ್ಲಿ ಹೆತ್ತವ‌ರ ಪಾತ್ರ ಅತೀ ಮುಖ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next