Advertisement

“ಕೆಜಿಎಫ್ ಚಾಪ್ಟರ್‌ 2”ಬಗ್ಗೆ ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ಅಮೀರ್ ಖಾನ್

02:01 PM Jul 26, 2022 | Team Udayavani |

ಹೈದರಾಬಾದ್: ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ  ಬಹುನಿರೀಕ್ಷಿತ “ಲಾಲ್ ಸಿಂಗ್ ಚಡ್ಡಾ” ಚಿತ್ರ ಆ. 11 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಅಭಿನಯದ ಬ್ಲಾಕ್‌ಬಾಸ್ಟರ್ ಚಿತ್ರ “ಕೆಜಿಎಫ್ ಚಾಪ್ಟರ್‌ 2” ಬಗ್ಗೆ ಮಾತನಾಡಿದ್ದಾರೆ.

Advertisement

ಬಹುನಿರೀಕ್ಷಿತ ಚಿತ್ರ  ಕೆಜಿಎಫ್ ಚಾಪ್ಟರ್‌ 2 ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರ ಒಂದೇ ದಿನ (ಏಪ್ರಿಲ್ 14 ರಂದು ) ರಿಲೀಸ್‌ ಆಗಲಿತ್ತು.  ಆದರೆ ಲಾಲ್ ಸಿಂಗ್ ಚಡ್ಡಾ ಪೋಸ್ಟ್ ಪ್ರೊಡಕ್ಷನ್‌ ವಿಳಂಬ ನಮಗೆ ವರವಾಗಿ ಪರಿಣಮಿಸಿತು ಎಂದಿದ್ದಾರೆ.

1994 ರ ಟಾಮ್ ಹ್ಯಾಂಕ್ಸ್ ಅಭಿನಯದ “ಫಾರೆಸ್ಟ್ ಗಂಪ್” ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ, ಹಾಗೂ ಕನ್ನಡದ ಆಕ್ಷನ್ ಡ್ರಾಮಾ ಕೆಜಿಎಫ್ ಚಾಪ್ಟರ್‌ – 2  ಬಿಡುಗಡೆ ದಿನಾಂಕ (ಏಪ್ರಿಲ್ 14 ರಂದು ) ಒಂದೇ ಆಗಿತ್ತು. ಇದರ ಬಗ್ಗೆ ಹಿಂದಿ ಪ್ರೇಕ್ಷಕರಲ್ಲಿ, ನನ್ನ ಸ್ನೇಹಿತರಲ್ಲಿ ಸಾಕಷ್ಟು ಕುತೂಹಲವಿತ್ತು. ಲಾಲ್ ಸಿಂಗ್ ಚಡ್ಡಾ ಅದೇ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಅದೃಷ್ಟವಶಾತ್ ನಮಗೆ ಚಿತ್ರದ  ವಿಎಫ್‌ ಎಕ್ಸ್ ಕೆಲಸದಲ್ಲಿ ಸ್ವಲ್ಪ ವಿಳಂಬವಾಯಿತು. ಆದ್ದರಿಂದ ನಾವು ಉಳಿದಿದ್ದೇವೆ. ಇಲ್ಲದಿದ್ದರೆ, ನಾವು ಕೆಜಿಎಫ್ 2 ನೊಂದಿಗೆ ಬರುತ್ತಿದ್ದೆವು”. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದುವೆ‌ ಯೋಚನೆ ಸದ್ಯಕ್ಕಿಲ್ಲ ಆದರೆ.. ʼಮೈನಾʼ ಬೆಡಗಿ ನಿತ್ಯಾ ಅಭಿಮಾನಿಗಳಿಗೆ ಹೇಳಿದ್ದೇನು ?

“ಪುಷ್ಪ: ದಿ ರೈಸ್”, ರಾಜಮೌಳಿ ಅವರ “ಆರ್‌ಆರ್‌ಆರ್”, “ಕೆಜಿಎಫ್ ಚಾಪ್ಟರ್ 2” ಚಿತ್ರಗಳು ದಕ್ಷಿಣ ಭಾರತದಿಂದ ಬಂದಿವೆ ಮತ್ತು ದೇಶಾದ್ಯಂತ ಪ್ರೇಕ್ಷಕರ ಹೃದಯವನ್ನು ಗೆದ್ದಿವೆ. ಭಾರತದ ಒಂದು ರಾಜ್ಯದಿಂದ ಹೊರಬರುವ ಸಿನಿಮಾ ಯಶಸ್ವಿಯಾಗಿ ಇಡೀ ದೇಶಕ್ಕೆ ಸಂತೋಷ ಮತ್ತು ಮನರಂಜನೆಯನ್ನು ನೀಡುತ್ತದೆ. ಇದನ್ನು ನೋಡಲು ಖುಷಿಯಾಗುತ್ತದೆ. ನಿಜವಾಗಿಯೂ ನಾವು ಇದನ್ನು ಸಂಭ್ರಮಿಸಬೇಕು ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next