Advertisement

“ನಮಗೆ ರಾಜಕೀಯ ಮತ್ತು ಜೀವನದಲ್ಲಿ ಗಾಂಧಿ ನಡೆಗಳು ಆದರ್ಶ” : ಪ್ರಧಾನಿ ಮೋದಿ

01:35 PM Feb 11, 2021 | Team Udayavani |

ನವ ದೆಹಲಿ : ನಮ್ಮ ಸರ್ಕಾರ ಮಹಾತ್ಮ ಗಾಂಧಿಯವರ ತತ್ವಾದರ್ಶಗಳನ್ನು ಪಾಲಿಸುತ್ತದೆ. ಅವರು ಕಲಿಸಿದ ಪ್ರೀತಿ ಹಾಗೂ ಸಹಾನುಭೂತಿಯ ಪಾಠಗಳು ನಮಗೆ ಆದರ್ಶ. ನಾವು ಗಾಂಧಿಯವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸಿದ್ದೇವೆ. ರಾಜಕೀಯ ಮತ್ತು ಜೀವನದಲ್ಲಿ ಅವರ ನಡೆಗಳು ನಮಗೆ ಆದರ್ಶ ಎಂದು ಗಾಂಧಿಯನ್ನು ಮೋದಿ ಕೊಂಡಾಡಿದ್ದಾರೆ.

Advertisement

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಅರ್ಹವಾದ ಗೌರವವನ್ನು ನೀಡಿದೆ. ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಪುನಃ ತೆರೆದ ಹೆಗ್ಗಳಿಕೆ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೂಡ ಮೋದಿ ಇದೇ ಸಂದರ್ಭ ನುಡಿದಿದ್ದಾರೆ.

ಓದಿ : “ಯಾವ ದುರುದ್ದೇಶ ನನ್ನಲ್ಲಿರಲಿಲ್ಲ” : ಪೊಲೀಸರ ಪ್ರಶ್ನೆಗೆ ನಟ ದೀಪ್ ಸಿಧು ಪ್ರತಿಕ್ರಿಯೆ

ಭಾರತೀಯ ಜನ ಸಂಘದ ನಾಯಕರಾಗಿದ್ದ ದೀನ ದಯಾಳ್ ಉಪಾಧ್ಯಾಯರ ಪುಣ್ಯ ತಿಥಿ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು. ಈ ಸಂದರ್ಭ ದೇಶಕ್ಕೆ ಗುರುತರವಾದ ಸೇವೆ ಸಲ್ಲಿಸಿದ ಮಹಾತ್ಮ ಗಾಂಧಿ, ಸರದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿ ಹಲವರನ್ನು ಪ್ರಶಂಸಿದರು.

ಸರದಾರ್ ಪಟೇಲ್ ಅವರಿಗೆ ಗೌರವಾರ್ಪಣೆಯಾಗಿ ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯನ್ನು ನಾವು ನಿರ್ಮಿಸಿದ್ದೇವೆ. ಬಿಜೆಪಿ ಬೆಂಬಲವಿದ್ದ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಿದೆ ಎಂದು ಮೋದಿ ನುಡಿದರು.

Advertisement

ಓದಿ : ಏಳು ಸ್ಕ್ರೀನ್ ಗಳ ವಿಶಿಷ್ಟ ಲ್ಯಾಪ್ ಟಾಪ್ “Aurora 7” …!

ಇನ್ನು, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ರಾಷ್ಟ್ರ ಕಂಡ ಸಜ್ಜನ ಸೈದ್ಧಾಂತಿಕ ರಾಜಕಾರಣಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ವಿಚಾರ ನಮಗೆಲ್ಲಾ ಪ್ರೇರಣೆ. ಸಂಘದ ನಾಯಕರ ಕನಸನ್ನು ನನಸಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖ ಕೇಂದ್ರ ಸಚಿವರು ಉಪಸ್ಥಿತರಿದ್ದರು.

ಓದಿ : ಇನ್ಮುಂದೆ “ಕೂ”ಮಯ : ಮೂಲೆಗೆ ಸರಿಯುತ್ತಾ ಟ್ವೀಟರ್ ?

 

 

 

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next