Advertisement

ಪೆಗಾಸಸ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ, ಶಿಸ್ತಿನಿಂದ ವರ್ತಿಸಿ : ಸುಪ್ರೀಂ ಸೂಚನೆ

02:17 PM Aug 10, 2021 | Team Udayavani |

ನವ ದೆಹಲಿ : ಪೆಗಾಸಸ್‌ ಕುತಂತ್ರ ಬೇಹುಗಾರಿಕೆಗೆ ಸಂಬಂಧಿಸಿದಂತೆ  ಶಿಸ್ತಿನಿಂದ ವರ್ತಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುವುದರಿಂದ ದೂರವಿರಿ ಎಂದು ಪ್ರಕರಣಕ್ಕೆ ಸಂಬಂಧಪಟ್ಟ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಹೇಳಿದೆ.

Advertisement

ಸುಪ್ರೀಂ ಕೋರ್ಟ್ ನಲ್ಲಿ ಪೆಗಾಸಸ್ ಕುರಿತಾದ ಚರ್ಚೆ ವಿಚಾರಣೆಯಲ್ಲಿದೆ. ಪೆಗಾಸಸ್ ಪ್ರಕರಣ ಇಲ್ಲಿಯೇ ಚರ್ಚೆ ಯಾಗಬೇಕು. ನಾವು ಚರ್ಚೆ ಮಾಡುವುದಕ್ಕೆ ವಿರೋಧ ಮಾಡುತ್ತಿಲ್ಲ. ಆದರೇ ಶಿಸ್ತಿನಿಂದಿರುವುದು ಮುಖ್ಯ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ : ಗೋವಾದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಇಳಿಕೆ, ಪ್ರವಾಸಿಗರ ಸಂಖ್ಯೆ ಏರಿಕೆ..!

ಸಿಜೆಐ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಈ ಪ್ರಕರಣವನ್ನು ವಿಚಾರಣೆ ಮಾಡಿದೆ. ವಿಚಾರಣೆ ವೇಳೆ,  ಸ್ವಲ್ಪ ಶಿಸ್ತು ಇರಬೇಕು. ಪ್ರಕರಣ ನ್ಯಾಯಾಲಯದಲ್ಲಿರುವಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದು ಸಿಜೆಐ ರಮಣ ಹೇಳಿದ್ದಾರೆ.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,  ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಕಾಲಾವಕಾಶ ಬೇಕು ಎಂದು ನ್ಯಾಯಪೀಠವನ್ನು ಕೋರಿದರು.

Advertisement

ಇನ್ನು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿ ಆದೇಶಿಸಿದೆ.

ಇದನ್ನೂ ಓದಿ : ಸೆ. 30ರೊಳಗೆ ಈ ನಿಯಮ ಪಾಲಿಸದಿದ್ದಲ್ಲಿ 1000ರೂ. ದಂಡ..! : ಎಸ್ ಬಿ ಐ ಹೇಳಿದ್ದೇನು..?

Advertisement

Udayavani is now on Telegram. Click here to join our channel and stay updated with the latest news.

Next